ಏ.15ರಂದು ನಯನದಲ್ಲಿ ರಂಗಚಂದಿರ ಟ್ರಸ್ಟ್‌ನ ವೈಭವದ ಸಾಂಸ್ಕೃತಿಕ ಸಂಭ್ರಮ

Upayuktha
0

‘ಮಹಾಮನೆ’ ಪುಸ್ತಕ ಬಿಡುಗಡೆ, ರಂಗಗೀತೆ ಹಾಗೂ ರಂಗಗೌರವ ಕಾರ್ಯಕ್ರಮ





ಬೆಂಗಳೂರು: ರಾಜ್ಯದ ರಂಗಭೂಮಿ ಮತ್ತು ಸಾಹಿತ್ಯ ವಲಯಕ್ಕೆ ಮಹತ್ವದ ಕೊಡುಗೆ ನೀಡುತ್ತಿರುವ ರಂಗಚಂದಿರ ಟ್ರಸ್ಟ್ ವತಿಯಿಂದ ಏಪ್ರಿಲ್ 15ರಂದು ಸಂಜೆ 5 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ರಂಗಮಂದಿರದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಖ್ಯಾತ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರ ‘ಮಹಾಮನೆ’ ನಾಟಕ ಕೃತಿಯ ಪುಸ್ತಕ ಬಿಡುಗಡೆ, ರಂಗಗೀತೆಗಳ ಗಾಯನ ಹಾಗೂ ರಂಗಗೌರವ ಸಮಾರಂಭ ಒಂದೇ ವೇದಿಕೆಯಲ್ಲಿ ಜರುಗಲಿದ್ದು, ರಂಗಾಸಕ್ತರಿಗೆ ಅಪರೂಪದ ಸಾಂಸ್ಕೃತಿಕ ಸಂಭ್ರಮ ಒದಗಿಸಲಿದೆ.


ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ. ಶಿವರಾಮಯ್ಯ ಅವರು ‘ಮಹಾಮನೆ’ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ರಂಗ ನಿರ್ದೇಶಕ ಮತ್ತು ನಾಟಕಕಾರ ಡಾ. ಬೇಲೂರು ರಘುನಂದನ್ ಕೃತಿಯ ಕುರಿತು ವಿಮರ್ಶಾತ್ಮಕವಾಗಿ ಮಾತನಾಡಲಿದ್ದಾರೆ.


ಕಾರ್ಯಕ್ರಮಕ್ಕೆ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪ್ರಕಾಶಮೂರ್ತಿ, ಹಿರಿಯ ಪತ್ರಕರ್ತ ಜಿ.ಎನ್. ಮೋಹನ್, ರಂಗಚಂದಿರ ಟ್ರಸ್ಟ್ ಗೌರವಾಧ್ಯಕ್ಷ ರಾಧಾಕೃಷ್ಣ ಹೆಗಡೆ ಹಾಗೂ ಚಾರುಮತಿ ಪ್ರಕಾಶನದ ಬಿ.ಎಸ್. ವಿದ್ಯಾರಣ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಮ್ಮೊಂದಿಗೆ ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.


ರಂಗಗೌರವಕ್ಕೆ ಐದು ಗಣ್ಯರು ಕರ್ನಾಟಕದ ರಂಗಭೂಮಿಗೆ ತಮ್ಮದೇ ಆದ ಕೊಡುಗೆ ನೀಡಿರುವ ಐದು ಗಣ್ಯರನ್ನು ಇದೇ ಸಂದರ್ಭದಲ್ಲಿ ‘ರಂಗಗೌರವ’ ಪ್ರಶಸ್ತಿಯಿಂದ ಸನ್ಮಾನಿಸಲಾಗುತ್ತದೆ. ಡಾ. ಎಚ್.ಎಲ್. ಪುಷ್ಪ, ಡಾ. ಟಿ. ಪದ್ಮ ಚಿನ್ಮಯಿ, ವಡವಾಟಿ ಶಾರದಾ ಭರತ್, ಕಾವೇರಿ ಶ್ರೀಧರ್ ಹಾಗೂ ಭಾಸ್ಕರ್ ಕುಪ್ಪೂರು ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.


ರಂಗಗೀತೆಗಳ ಮಧುರ ಸಂಭ್ರಮ

ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿ “ಆದಿಮೂಲ ಹೊಕ್ಕಳ ಬಳ್ಳಿಯ ಚರಿತೆ” ಎಂಬ ರಂಗಗೀತೆಗಳ ಗಾಯನ ಪ್ರಸ್ತುತಪಡಿಸಲಾಗುತ್ತದೆ. ಸಂಗೀತ ಮತ್ತು ನಾಟಕದ ಸಂಯೋಜನೆಯ ಈ ವಿಶೇಷ ಭಾಗವು ಪ್ರೇಕ್ಷಕರಿಗೆ ಕಲಾತ್ಮಕ ಅನುಭವ ನೀಡಲಿದೆ. ಕಾರ್ಯದರ್ಶಿ ಎ.ಎಸ್. ಚಂದ್ರಶೇಖರ್ (ಜಿಪಿಒ ಚಂದ್ರು) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



إرسال تعليق

0 تعليقات
إرسال تعليق (0)
To Top