ವಿವೇಕಾನಂದ ವಸತಿನಿಲಯಕ್ಕೆ 100 % ಫಲಿತಾಂಶ

Upayuktha
0

ವಿವೇಕಾನಂದ ವಸತಿನಿಲಯದ ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ




ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 1ರಲ್ಲಿ ವಿವೇಕಾನಂದ ವಸತಿನಿಲಯದಲ್ಲಿ ವಾಸ್ತವ್ಯ ಹೊಂದಿ, ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನ ನಡೆಸಿದ ವಸತಿ ನಿಲಯದ 102 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೋಂದಿರುತ್ತಾರೆ. ಅದೇ ರೀತಿ 73 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಹೊಂದಿರುತ್ತಾರೆ.


ವಸತಿನಿಲಯದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು 100% ಫಲಿತಾಂಶವನ್ನು ನೀಡಿರುತ್ತಾರೆ. ಈ ಪೈಕಿ 590 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಕು. ಮನ್ಮಿತಾ- ವಾಣಿಜ್ಯ ವಿಭಾಗ (596- 99%), ಕು. ಬಿಂದು ಎಚ್‌ ಆರ್‌- ವಾಣಿಜ್ಯ ವಿಭಾಗ (596- 99%), ಕು. ತೀರ್ಥಾ ಶೆಟ್ಟಿ- ವಿಜ್ಞಾನ ವಿಭಾಗ (595- 99%), ಕು. ಪ್ರಾಪ್ತಿ ಆಳ್ವ- ವಿಜ್ಞಾನ ವಿಭಾಗ (593- 98%), ಕು. ಗೌರವ್‌ ಎಂ ಕಶ್ಯಪ್‌- ವಾಣಿಜ್ಯ ವಿಭಾಗ (590- 98%), ಕು. ಅದಿತಿ ಯು- ವಿಜ್ಞಾನ ವಿಭಾಗ (590- 98%), ಕು. ಅಪೂರ್ವ ಎ ಆರ್‌- ವಾಣಿಜ್ಯ ವಿಭಾಗ (590- 98%) ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಮತ್ತು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಲಾಯಿತು.


ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಆರಂಭವಾದ ವಿವೇಕಾನಂದ ವಸತಿನಿಲಯಗಳು ವಿದ್ಯಾರ್ಥಿಗಳಲ್ಲಿ ಕಲಿಕಾ ಉತ್ಸಾಹವನ್ನು ತುಂಬಿ ಸಮಾಜಮುಖಿ ಜೀವನ ಪದ್ಧತಿಯನ್ನು ತುಂಬುವ ಧ್ಯೇಯವನ್ನು ಹೊಂದಿದೆ.


ಪ್ರೌಢ ಶಿಕ್ಷಣದಿಂದ ಇಂಜಿನಿಯರಿಂಗ್ ಅಥವಾ ವೃತ್ತಿಪರ ಶಿಕ್ಷಣ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 5 ವಿವಿಧ ವಸತಿನಿಲಯಗಳಿರುತ್ತದೆ. ನಮ್ಮ ವಸತಿನಿಲಯದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶಾಲವಾದ ಕೊಠಡಿಗಳು, ಸಭಾಂಗಣ, ಶುಚಿ-ರುಚಿಯಾದ ಊಟೋಪಚಾರ ಮತ್ತು ಭೋಜನದ ವ್ಯವಸ್ಥೆಯ ಜೊತೆಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿರುತ್ತದೆ. 2026-27 ನೇ ಸಾಲಿನ ದಾಖಲಾತಿ ಈಗಾಗಲೇ ಪ್ರಾರಂಭಗೊಂಡಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬಹುದು.


ಅಭಿನಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಹೆತ್ತವರು, ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಪ್ರಾಂಶುಪಾಲರು, ಉಪನ್ಯಾಸಕರು, ವಸತಿ ನಿಲಯದ ಆಡಳಿತಾಧಿಕಾರಿ, ಮುಖ್ಯ ನಿಲಯ ಪಾಲಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top