ಬೆಂಗಳೂರು: ಶಿವಶಕ್ತಿ ನೃತ್ಯ ಶಾಲೆ ಬೆಂಗಳೂರು, ವತಿಯಿಂದ 26ನೇ ವರ್ಷದ ವಾರ್ಷಿಕೋತ್ಸವ ಹಾಗೂ ನೃತ್ಯೋತ್ಸವದ ಅಂಗವಾಗಿ, ಸೋಮವಾರ (ಏ.20) 'ಶಕ್ತಿ ಸ್ವರೂಪಿಣಿ' ಎಂಬ ಭಾರತದ ಶಕ್ತಿಪೀಠಗಳ ಆಧಾರಿತ ಅಮೋಘ ನೃತ್ಯ ರೂಪಕವನ್ನು ಪ್ರಸ್ತುತಪಡಿಸಲಾಯಿತು. ಈ ಮನೋಜ್ಞ ಕಾರ್ಯಕ್ರಮವನ್ನು ಡಾ. ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಡಾ ಸಿ ಎನ್ ಅಶ್ವತ್ಥ ನಾರಾಯಣ ಶಾಸಕರು ಮಲ್ಲೇಶ್ವರಂ ಹಾಗೂ ಮಾಜಿ ಉಪಮುಖ್ಯಮಂತ್ರಿಗಳು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಲಪತ್ರಕರ್ತ ಎಂದೇ ಪ್ರಸಿದ್ಧರಾದ ರಾಧಾಕೃಷ್ಣ ಭಡ್ತಿ, ಹೆಸರಾಂತ ಗಾಯಕಿ ಡಾಕ್ಟರ್ ಪದ್ಮನಿ ಎಲ್ ಓಕ್, ಮೃದಂಗ ವಿದ್ವಾಂಸರಾದ ಡಾಕ್ಟರ್ ಎಚ್‌ಎಸ್ ಸುಧೀಂದ್ರ, ಮುಂತಾದವರು ಆಗಮಿಸಿದ್ದರು.
ನಾಡಿನ ಸಂಸ್ಕೃತಿ ಉಳಿಯಬೇಕಾದರೆ, ಇಂತಹ ನೃತ್ಯ ಶಾಲೆಗಳಿಂದಲೇ ಸಾಧ್ಯ, ಈ ತರಹದ ದೈವಿಕ ವಿದ್ಯೆಗಳನ್ನು ಕಲಿಸುತ್ತಿರುವ ಗುರುಗಳಿಗೂ ಹಾಗೂ ಮಕ್ಕಳನ್ನು ಇಂತಹ ಶಾಲೆಗಳಿಗೆ ಕಳಿಸಿ ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೋಷಕರಿಗೂ ಡಾಕ್ಟರ್ ಅಶ್ವತ್ಥ ನಾರಾಯಣ ಇವರು ಅಭಿನಂದಿಸಿದರು. ಅಧ್ಯಾತ್ಮವೋ ಪುರಾಣವೋ ಎಲ್ಲವೂ ಮರೆತು ಹೋಗುತ್ತಿರುವ ಈ ಕಾಲದಲ್ಲಿ ಇಂತಹ ನೃತ್ಯರೂಪಕಗಳು ನಮ್ಮ ನೆಲದ ಆಧ್ಯಾತ್ಮದ ಶಕ್ತಿಯನ್ನು ಸಾರುತ್ತವೆ ಎಂದು ರಾಧಾಕೃಷ್ಣ ಭಡ್ತಿಯವರು ಶುಭ ಆಶಿಸಿದರು. ಡಾ. ಪುರುಷೋತ್ತಮ ಬಿಳಿಮಲೆಯವರು ಸ್ವಚ್ಚ ಕನ್ನಡದಲ್ಲಿ ನೃತ್ಯ ರೂಪಕ ಪ್ರಸ್ತುತಪಡಿಸಿದ್ದು, ನಾಡಿನ ಶಕ್ತಿ ಪೀಠವನ್ನು ಕೂಡ ಬಿಂಬಿಸಿದ್ದನ್ನು ಶ್ಲಾಘಿಸಿದರು.
ನೃತ್ಯ ರೂಪಕದ ಪರಿಕಲ್ಪನೆ ಹಾಗೂ ಸಂಯೋಜನೆ ಶಿವಶಕ್ತಿ ನೃತ್ಯ ಶಾಲೆಯ ಗುರುಗಳಾದ ವಿದುಷಿ ಗುಣವತಿ ಕೆಆರ್ ಇವರದ್ದಾದರೆ, ಶ್ರೀಮತಿ ಲಕ್ಷ್ಮಿ ಟಿ ಎನ್ ನೃತ್ಯ ರೂಪಕದ ಬರೆದಿದ್ದಾರೆ. ಇಡೀ ರೂಪಕದ ಸಂಭಾಷಣೆಗೆ ಹಿನ್ನೆಲೆ ಸಂಗೀತ ಸಂಗೀತ ಹಾಗೂ ವಿಡಿಯೋ ಮಿಶ್ರಣವನ್ನು ಶ್ರೀ ದಿನೇಶ್ ಕುಮಾರ್, ಡಿ ಕೆ ಸ್ಟುಡಿಯೋಸ್ ಚೆನ್ನೈ ಇವರು ನಿರ್ವಹಿಸಿದ್ದಾರೆ.
ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಎಲ್ಲಾ ವಿದ್ಯಾರ್ಥಿಗಳ ಪೋಷಕರ ಹಾಗೂ ಹಿತೈಷಿಗಳೆಲ್ಲರ ಪಾತ್ರ ದೊಡ್ಡದು ನಾನು ಎಲ್ಲರಿಗೂ ಅಭಾರಿ ಎಂದು ವಂದನಾರ್ಪಣೆಯಲ್ಲಿ ವಿದುಶಿ ಗುಣವತಿ ಕೆಆರ್ ಹೇಳಿದರು. ಬಂದಿದ್ದ ಎಲ್ಲಾ ಕಲಾರಸಿಕರಿಗೂ ರುಚಿಕರ ಭೋಜನವನ್ನು ಏರ್ಪಡಿಸಲಾಗಿತ್ತು ಹಾಗೂ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

