ಬೆಳ್ತಂಗಡಿ: ಭಾರತೀಯ ಜೈನ್ ಮಿಲನ್, ಬೆಳ್ತಂಗಡಿ ಇದರ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಉಜಿರೆಯಲ್ಲಿ ಮುಖ್ಯ ಅತಿಥಿ ವೀರ್ ಸುದರ್ಶನ್ ಜೈನ್ ಬಂಟ್ವಾಳ ಇವರ ಉಪಸ್ಥಿತಿಯಲ್ಲಿ ಜರಗಿತು.
ಸಭೆಯಲ್ಲಿ ನಿರ್ದೇಶಕ ವೀರ್ ಬಿ. ಸೋಮಶೇಖರ ಶೆಟ್ಟಿ, ಬಿ. ಪ್ರಮೋದ್ ಕುಮಾರ್ ಪ್ರಾಂಶುಪಾಲರು, ವೀರ್ ಪ್ರವೀಣ್ ಕುಮಾರ್ ಇಂದ್ರ, ವೀರ್ ಎಂ. ಸಂತೋಷ ಕುಮಾರ್ ಜೈನ್, ವೀರ್ ಬಿ. ಭುಜಬಲಿ, ವೀರಾಂಗನಾ ರಜತ ಕುಮಾರಿ ಉಪಸ್ಥಿತರಿದ್ದರು. ಮಿಲನ್ ಅಧ್ಯಕ್ಷರಾದ ವೀರ್ ಡಾಕ್ಟರ್ ನವೀನ್ ಕುಮಾರ್ ಅವರು ಕಳೆದ 3 ವರ್ಷಗಳಿಂದ ನಡೆದ ಕಾರ್ಯಕ್ರಮಗಳ ವಿವರದೊಂದಿಗೆ, ಎಲ್ಲರ ಸಹಕಾರಕ್ಕೆ ವಂದಿಸಿ ನಿರ್ಗಮನದ ನುಡಿಗಳನ್ನು ಆಡಿದರು.
ನೂತನ ತಂಡಕ್ಕೆ ಪ್ರಮಾಣ ವಚನ ಬೋಧನೆ ಮಾಡಿದ ನಿರ್ದೇಶಕರಾದ ಬಿ. ಸೋಮಶೇಖರ ಶೆಟ್ಟಿ ಅವರು ಮಿಲನ್‌ನ ಅವಶ್ಯಕತೆಗಳ ಬಗ್ಗೆ ಮಾಹಿತಿ ನೀಡಿದರು. ವಲಯದ ಉಪಾಧ್ಯಕ್ಷ ವೀರ್ ಬಿ ಸುದರ್ಶನ್ ಜೈನ್ ಅವರು ಮಿಲನ್ ಸಂಘಟನೆಯ ಬಗ್ಗೆ ಮತ್ತು ಶ್ರಾವಕರ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿ, ಬೆಳ್ತಂಗಡಿ ಮಿಲನ್‌ನ ಕಾರ್ಯಕ್ರಮ ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷರಾದ ವೀರ್ ಡಾಕ್ಟರ್ ಸನ್ಮತಿ ಕುಮಾರ್ ಅವರು ಮುಂದಿನ ದಿನಗಳಲ್ಲಿ ಮಿಲನ್ ಚಟುವಟಿಕೆಯನ್ನು ಸದಸ್ಯರ ಸಹಕಾರದಿಂದ ಅರ್ಥ ಪೂರ್ಣವಾಗಿ ಮಾಡುವ ಇಚ್ಛೆ ವ್ಯಕ್ತಪಡಿಸಿದರು ಮತ್ತು ಈ ದಿನ ಸಭೆಯಲ್ಲಿ ಭಾಗವಹಿಸಿದ ಸದಸ್ಯರು, ವಿಧ್ಯಾರ್ಥಿಗಳು, ವಿಧ್ಯಾರ್ಥಿಗಳ ಹೆತ್ತವರು, ಪೋಷಕರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಡಾಕ್ಟರ್ ರಜತ ಪಿ. ಶೆಟ್ಟಿ, ವೀರ್ ಬಿ. ಭುಜಬಲಿ, ವೀರ್ ಪ್ರವೀಣ್ ಕುಮಾರ್, ವೀರ್ ಸಂತೋಷ್ ಜೈನ್, ವೀರ್ ಧರಣೇಂದ್ರ ಜೈನ್ ಕಾರ್ಯ ಕ್ರಮಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸಾಧಕರಾದ ವೀರ್ ಬಿ ಭುಜಬಲಿ, ರಾಷ್ಟೀಯ ವಾಲಿ ಬಾಲ್ ಆಟಗಾರರಾದ ಕುಮಾರಿ ಲಾಸ್ಯ ಇವರನ್ನು ಗೌರವಿಸಲಾಯಿತು. ಬೆಳ್ತಂಗಡಿ ತಾಲೂಕಿನ ಪಿ.ಯು ಕಾಲೇಜ್‌ನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ ವಿಧ್ಯಾರ್ಥಿಗಳು ಮತ್ತು ಹತ್ತನೇ ತರಗತಿಯ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸುವ ವಿಶೇಷ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ, ವೀರ್ ಪಾರ್ಶ್ವನಾಥ ಜೈನ್ ಧರ್ಮಸ್ಥಳ, ವೀರ್ ನಾಭಿರಾಜ ಪೂವಣಿ ಉಜಿರೆ, ವೀರ್ ಎನ್. ಶಾಂತಿ ರಾಜ್ ಜೈನ್ ಪಡಂಗಡಿ, ಡಾಕ್ಟರ್ ಎ. ಜಯ ಕುಮಾರ್ ಶೆಟ್ಟಿ, ವೀರ್ ಪಾರ್ಶ್ವನಾಥ ಜೈನ್ ಬೆಳ್ತಂಗಡಿ, ವೀರ್ ಸಿದ್ದಾಂತ ಕೀರ್ತಿ ಜೈನ್, ವೀರ್ ಧನ್ಯ ಕುಮಾರ್, ವೀರ್ ಉದಯ ಕುಮಾರ್ ಕಂಬಳಿ, ಮುಂತಾದ ಹಿರಿಯ ಸದಸ್ಯರು ಉಪಸ್ಥಿತರಿದ್ದರು.
ಸಾಧಕ ವಿಧ್ಯಾರ್ಥಿಗಳ ಪರಿಚಯವನ್ನು ಕೋಶಾಧಿಕಾರಿ ವೀರ್ ರವೀಶ್ ಕುಮಾರ್ ಅವರು ಮಾಡಿದರು. ವೀರ್ ಸಂಪತ್ ಕುಮಾರ್ ನಿರೂಪಣೆ ಮಾಡಿದ ಕಾರ್ಯ ಕ್ರಮದ ಕೊನೆಗೆ ವೀರ್ ಧರ್ಮಪಾಲ್ ಜೈನ್ ಶಾಂತಿ ಮಂತ್ರ ಪಠಣವನ್ನು, ವಂದನಾರ್ಪಣೆಯನ್ನು ಕಾರ್ಯದರ್ಶಿ ವೀರ್ ಸುಮನ್ ಕುಮಾರ್ ಜೈನ್ ಅವರು ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

