ಪುತ್ತೂರು: "ಮಕ್ಕಳು ಸಣ್ಣಪುಟ್ಟ ವಿಷಯಕ್ಕೂ ಹತಾಶರಾಗುವ, ಖನ್ನತೆಗೆ ಒಳಗಾಗುವ ಮನೋಸ್ಥಿತಿಯಿಂದ ಹೊರಬರಬೇಕು. ಪಠ್ಯದ ಜೊತೆಗೆ ಕಲೆ-ಸಂಸ್ಕೃತಿ ಮಿಳಿತವಾಗಿರುವ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಅವರ ಬೌದ್ಧಿಕ ಸಾಮರ್ಥ್ಯವು ಹೆಚ್ಚುತ್ತದೆ. ಭಾವನಾತ್ಮಕವಾಗಿ ಮಕ್ಕಳು ಸದೃಢರಾಗುತ್ತಾರೆ" ಎಂದು ರಂಗ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಅವರು ಅಭಿಪ್ರಾಯಪಟ್ಟರು.
ಇವರು ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಏಪ್ರಿಲ್ 11 ರಿಂದ 18 ರ ತನಕ ನಡೆಯುವ ಸುದಾನ ‘ಬಣ್ಣದ ಹೆಜ್ಜೆ’ ಎಂಬ ಬೇಸಿಗೆ ರಂಗ ಶಿಬಿರವನ್ನು ನಗಾರಿ ನುಡಿಸುವ ಮೂಲಕ ಉದ್ಘಾಟಿಸಿದರು. ದೀಪ ಬೆಳಗಿ ಕಾರ್ಯಕ್ರಮವನ್ನು ಆರಂಭಿಸಿದ ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ಅವರು " ದೇವರು ಹಲವು ಪ್ರತಿಭೆ, ಸದ್ಗುಣ ಮತ್ತು ಶಕ್ತಿಯನ್ನು ತುಂಬಿ ಮಕ್ಕಳನ್ನು ನಮಗೆ ವರವಾಗಿ ಕೊಡುತ್ತಾನೆ. ಮಕ್ಕಳಲ್ಲಿ ಸುಪ್ತವಾಗಿರುವ ಈ ಪ್ರತಿಭಾ ಶಕ್ತಿಯನ್ನು ಪ್ರಕಟಗೊಳಿಸಲು ಸರಿಯಾದ ಅವಕಾಶವನ್ನು ಪೋಷಕರು ಒದಗಿಸಬೇಕು. ದೇವರ ಸದುದ್ದೇಶವನ್ನು ಈಡೇರಿಸಬೇಕು. ಇದಕ್ಕೆ ಸುದಾನ ಬಣ್ಣದ ಹೆಜ್ಜೆಯು ನಿದರ್ಶನವಾಗಲಿ" ಎಂದು ಶುಭಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕರಾದ ಶಿವಗಿರಿ ಕಲ್ಲಡ್ಕ ವಂದಿಸಿದರು. ಶ್ರೀಮತಿ ಕವಿತಾ ಅಡೂರು ಕಾರ್ಯಕ್ರಮವನ್ನು ನಿರೂಪಿಸಿದರು. ಇದೇ ಸಂದರ್ಭದಲ್ಲಿ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀ ಮನುಜ ನೇಹಿಗ ನನ್ನು ಗೌರವಿಸಲಾಯಿತು. ಸಹಶಿಕ್ಷಕರಾದ ಶ್ರೀಮತಿ ಅಶ್ವಿನಿ, ಹೇಮಲತಾ ಸಹಕರಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

