ಮಹಿಳೆಯರಿಗೆ ಪ್ರೇರಣೆಯಾದ ಆಟೋ ರಿಕ್ಷಾ ಚಾಲಕಿ ಪದ್ಮಾವತಿ

Upayuktha
0

ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಇಚ್ಛಾ ಶಕ್ತಿ ಇದ್ದರೇ ಯಾವುದೇ ಕೆಲಸ ಕಷ್ಟವಲ್ಲ. ಸಾಮಾನ್ಯವಾಗಿ ಗಂಡಸರು ಆಟೋ ಚಾಲನೆ ಮಾಡುವುದನ್ನು ಎಲ್ಲರೂ ನೋಡಿರುತ್ತೇವೆ. ಆದರೆ ಇಂದು ಮಹಿಳೆಯರು ಸಹ ಅಷ್ಟೇ ಧೈರ್ಯದಿಂದ ತಮ್ಮಿಂದಲೂ ಸಾಧ್ಯ ಎನ್ನುವ ರೀತಿಯಲ್ಲಿ ಎಲ್ಲಾ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ಇಲ್ಲೊಬ್ಬ ಕಡಬ ತಾಲೂಕಿನ ಪದವು ಎಂಬ ಸಣ್ಣ ಊರಿನ ಧೀಮಂತ ಮಹಿಳೆ ಪದ್ಮಾವತಿ ಜೀವನದಲ್ಲಿ ಬರುವ ಸಂಕಷ್ಟಗಳನ್ನು ಎದುರಿಸಿ ತನ್ನ ಮನೆಯ ಜವಾಬ್ದಾರಿಯನ್ನು ಹೊತ್ತು, ಆಟೋ ಓಡಿಸುತ್ತಾ ಎಲ್ಲರಿಗೂ ಪ್ರೇರಣೆಯಾಗಿರುವ ಸಾಹಸಗಾಥೆಯ ಕಿರು ಸಂದರ್ಶನ ಇಲ್ಲಿದೆ.



1. ಆಟೋ ರಿಕ್ಷಾ ಕ್ಷೇತ್ರದಲ್ಲಿ ಆಸಕ್ತಿ ಮೂಡಿದ್ದು ಯಾವಾಗ?


ನನಗೆ ಚಿಕ್ಕಂದಿನಿಂದಲೇ ಗಾಡಿಗಳನ್ನು ಚಲಾಯಿಸುವುದೆಂದರೇ ಬಹಳ ಇಷ್ಟ. ನನ್ನ ತಂದೆ ನನ್ನ ಅಣ್ಣಂದಿರು ಗಾಡಿಗಳನ್ನು ಚಲಾಯಿಸುವುದನ್ನು ಬಹಳ ಕುತೂಹಲದಿಂದ ಗಮನಿಸುತ್ತಿದ್ದೆ. ನಾನು ಬೆಳೆದಂತೆ ಆ ಆಸಕ್ತಿ ಇನ್ನಷ್ಟು ಗಟ್ಟಿಯಾಯಿತು. ಶಾಲೆಗೆ ಹೋಗುತ್ತಿದ್ದಾಗಲೂ ರಸ್ತೆಯಲ್ಲಿ ಓಡಾಡುವ ಆಟೋ ರಿಕ್ಷಾಗಳನ್ನು ನೋಡಿ, ಒಂದಿನ ನಾನು ಕೂಡಾ ಅದನ್ನು ಚಲಾಯಿಸಬೇಕು ಎಂಬ ಕನಸು ಕಾಣುತ್ತಿದ್ದೆ. ಆದರೆ ಈ ಕನಸನ್ನು ಸಾಕಾರಗೊಳಿಸಿದ ನಂತರ, ನಾನು ಡ್ರೈವಿಂಗ್ ಕಲಿಯಲು ನಿರ್ಧರಿಸಿದೆ. ಆರಂಭದಲ್ಲಿ ಸ್ವಲ್ಪ ಭಯವಿತ್ತು, ಆದರೆ ನಿಧಾನವಾಗಿ ಆತ್ಮವಿಶ್ವಾಸ ಹೆಚ್ಚಾಯಿತು. ಕೆಲವು ದಿನಗಳಲ್ಲಿ ನಾನು ಚೆನ್ನಾಗಿ ಆಟೋ ಓಡಿಸಲು ಕಲಿತೆ. ಲೈಸೆನ್ಸ್ ಪಡೆದು, ಮೊದಲ ಮಹಿಳಾ ಆಟೋರಿಕ್ಷಾ  ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದೇನೆ.


2. ನೀವು 10 -12 ವರ್ಷಗಳಿಂದ ಆಟೋ ಚಾಲಕರಾಗಿ ಕೆಲಸ ಮಾಡ್ತಾ ಇದ್ದೀರಾ ಇದಕ್ಕೆ ನಿಮಗೆ ಸ್ಪೂರ್ತಿ ಯಾರು?


ನನ್ನ ಮಗನೇ ನನ್ನ ಮೊದಲ ಸ್ಪೂರ್ತಿ. ಜೀವನದಲ್ಲಿ ಹಲವಾರು ಸಂಕಷ್ಟಗಳು ಎದುರಾದಾಗ ನಾನು ಕೆಲವೊಮ್ಮೆ ಹತಾಶನಾಗುತ್ತಿದ್ದೆ. ಆಗ ನನ್ನ ಮಗನೇ ನನಗೆ ಧೈರ್ಯ ತುಂಬುತ್ತಿದ್ದ.ಅಮ್ಮ ನೀವು ಇದನ್ನು ಮಾಡಬಹುದು ಎಂದು ಹೇಳುತ್ತಿದ್ದ ಅವನ ಮಾತುಗಳು ನನಗೆ ಹೊಸ ಶಕ್ತಿ ನೀಡುತ್ತಿದ್ದವು. ನನ್ನ ಕುಂಟುಂಬ ಭವಿಷ್ಯ ಉತ್ತಮವಾಗಿರಬೇಕು ಎಂಬ ಆಶಯದಿಂದ ನಾನು ಇನ್ನಷ್ಟು ಪರಿಶ್ರಮಪಟ್ಟು ಕೆಲಸ ಮಾಡಲು ಪ್ರೇರೇಪಿತಲಾಗಿದ್ದೇನೆ.


3. ಸರ್ಕಾರದ ಉಚಿತ ಬಸ್ ಯೋಜನೆಯಿಂದ ಆಟೋರಿಕ್ಷಾ ಚಾಲಕರಿಗೆ ಉಂಟಾದ ಸಂಕಷ್ಟಗಳೇನು? 


ಶಕ್ತಿ ಯೋಜನೆಯಿಂದ ಆಟೋರಿಕ್ಷಾ ಚಾಲಕರು ಬಹಳಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಬಾಡಿಗೆಗಳು ಕಮ್ಮಿಯಾಗುತ್ತಿದೆ. ಫ್ರೀ ಬಸ್ ಇದೆ ಎಂದು ಮಹಿಳೆಯರು ಹೆಚ್ಚಾಗಿ ಬಸ್ಸನ್ನೇ ಅವಲಂಬಿಸಿಕೊಂಡಿದ್ದಾರೆ.ಇದು ಒಂದು ಬದಲಾವಣೆಯ ಕಾಲ. ಪ್ರತಿಯೊಂದು ಯೋಜನೆಯೂ ಯಾರಿಗಾದರೂ ಲಾಭ, ಮತ್ತಾರಿಗಾದರೂ ಸವಾಲು ತರುತ್ತದೆ. ಮುಖ್ಯವಾದುದು ನೀನು ಹೇಗೆ ಅದಕ್ಕೆ ಹೊಂದಿಕೊಳ್ಳುತ್ತೀಯೋ ಸಾವಲಿನ ಸಂಗತಿ.



4. ಮನೆಯ ಜವಾಬ್ದಾರಿ ಮತ್ತು ಆಟೋ ಓಡಿಸುವ ಕೆಲಸ ಈ ಎರಡನ್ನು ಎರಡನ್ನು ಹೇಗೆ ನಿಭಾಯಿಸುತ್ತೀರಿ?


ನನ್ನ ಕುಟುಂಬವೂ ನನಗೆ ತುಂಬಾ ಬೆಂಬಲ ನೀಡುತ್ತದೆ. ವಿಶೇಷವಾಗಿ ನನ್ನ ಮಕ್ಕಳು ಮತ್ತು ಮನೆಯವರು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಹಾಯ ಮಾಡುತ್ತಾರೆ. ಈ ಬೆಂಬಲವೇ ನನಗೆ ಎರಡೂ ಜವಾಬ್ದಾರಿಗಳನ್ನು ಸಮತೋಲನವಾಗಿ ನಿಭಾಯಿಸಲು ಶಕ್ತಿ ನೀಡುತ್ತದೆ. ಮಹಿಳೆಯರು ಬಹಳ ಶಕ್ತಿಶಾಲಿಗಳು. ಸರಿಯಾದ ಸಮಯ ನಿರ್ವಹಣೆ, ಧೈರ್ಯ ಮತ್ತು ಬೆಂಬಲ ಇದ್ದರೆ, ಅವರು ಯಾವುದೇ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಬಹುದು.



5. ಆಟೋ ಚಾಲನೆ ಮಾಡಲು ಇಚ್ಚಿಸುವಂತ ಇತರ ಮಹಿಳೆಯರಿಗೆ ನೀವು ನೀಡುವ ಸಂದೇಶ ಏನು?


ಎಲ್ಲಾ ಮಹಿಳೆಯರು ಈ ಕ್ಷೇತ್ರ ವನ್ನು ಆರಿಸಿಕೊಳ್ಳಬೇಕು ನಾನು ಕೂಡ ಈ ಕ್ಷೇತ್ರವನ್ನು ಆಯ್ಕೆ ಮಾಡಿ ದುಡಿತಾ ಇದ್ದೇನೆ. ದುಡಿಮೆಯಲ್ಲಿ ಗಂಡು ಹೆಣ್ಣು ಎಂಬ ಭೇದ ಭಾವ ಇಲ್ಲ ಮಹಿಳೆಯರು ಮೇಲುಗೈ ಸಾಧಿಸುತ್ತಾ ಇದ್ದಾರೆ ಇನ್ನಷ್ಟು ಮಹಿಳೆಯರು ಈ ಕ್ಷೇತ್ರವನ್ನು ಆಯ್ಕೆ ಮಾಡಲಿ ಎಂಬುದು ನನ್ನ ಆಶಯ. ಭಯ ಬೇಡ, ಹಿಂಜರಿಕೆ ಬೇಡ. ನಿಮ್ಮ ಸಾಮರ್ಥ್ಯವನ್ನು ನಂಬಿ ಮುಂದೆ ಬನ್ನಿ. ಯಾವುದೇ ಕ್ಷೇತ್ರದಲ್ಲಾದರೂ ಮಹಿಳೆಯರು ಸಾಧಿಸಬಹುದು. ಆಟೋ ರಿಕ್ಷಾ ಕ್ಷೇತ್ರವೂ ಅದಕ್ಕೆ ಹೊರತಲ್ಲ. ನೀವು ಆರಂಭಿಸಿದರೆ, ನಾಳೆ ಇನ್ನೊಬ್ಬ ಮಹಿಳೆಗೆ ನೀವು ಸ್ಪೂರ್ತಿಯಾಗುತ್ತೀರಿ.




-ಹರ್ಷಿತಾ ದೋಲ್ಪಾಡಿ 

ಪ್ರಥಮ ಜೆಎಂಸಿ

ವಿವೇಕಾನಂದ ಸ್ನಾತಕೋತ್ತರ ವಿಭಾಗ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top