ಅತ್ತಾವರ (ಮಂಗಳೂರು): ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಅತ್ತಾವರ ಬ್ರಹ್ಮಕಲಶ ಎಪ್ರಿಲ್ 19 ರಿಂದ 23ರ ತನಕ ನಡೆಯಲಿದೆ. ಪ್ರತಿದಿನ ಭಜನಾ ಸಂಕೀರ್ತನೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 20ರಂದು ಸೋಮವಾರ 6.15 ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಸಂಜೆ 8:15 ರಿಂದ ಅಂಬುರುಹ ಯಕ್ಷಗಾನ ಕೇಂದ್ರ ಮಲೆಮಾರು ಇವರಿಂದ ಮಲೆತ ಬೊಲ್ಪು ಯಕ್ಷಗಾನ ಬಯಲಾಟ ನಡೆಯಲಿದೆ.
ಏಪ್ರಿಲ್ 21 ರಂದು ಮಂಗಳವಾರ 6. 15ರಿಂದ ಗೋಲ್ಡನ್ ಸ್ಟಾಕಲ್ಸ್ ಅತ್ತಾವರ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ತೆರಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಇವರ ಸಾರಥ್ಯದಲ್ಲಿ ಎನ್ನನೇ ಕಥೆ ತುಳು ಹಾಸ್ಯಮಯ ನಾಟಕ ನಡೆಯಲಿದೆ. ಏಪ್ರಿಲ್ 22ರಂದು ಬುಧವಾರ 6.15ರಿಂದ ವಿದ್ವಾನ್ ಶ್ರೀ ರಾಜೇಶ್ ಹೊಸಬೆಟ್ಟು ಇವರ ಶಿಷ್ಯರಿಂದ ವೇಣುವಾದನ 8:15 ರಿಂದ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ರಮೇಶ್ಚಂದ್ರ ಬೆಂಗಳೂರು ಇವರಿಂದ ಸುಗಮ ಸಂಗೀತ ರಸಮಂಜರಿ ನಡೆಯಲಿದೆ.
ಏಪ್ರಿಲ್ 23 ರಂದು ಬ್ರಹ್ಮ ಕಲಶ ದಿನ ಮಧ್ಯಾಹ್ನ 1 ರಿಂದ 2 ತನಕ ಕಲಾ ಸಾರಥಿ ತೋನ್ಸೆ ಪುಷ್ಕಳ ಕುಮಾರ್ ರಾಗ ಸಂಯೋಜನೆಯಲ್ಲಿ ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ನೇತೃತ್ವದಲ್ಲಿ ಪ್ರೊ ಭಾಸ್ಕರ್ ರೈ ಕುಕ್ಕುವಳ್ಳಿ ಅಧ್ಯಕ್ಷತೆಯಲ್ಲಿ ಕವಿ ಕಾವ್ಯ ಗಾಯನ ಧಾರ್ಮಿಕ ಕವಿಗೋಷ್ಠಿ ನಡೆಯಲಿದೆ. ಅಂದು ಸಂಜೆ 6.15 ಕ್ಕೆ ನಿನಾದ ಅತ್ತಾವರ ಇವರಿಂದ ಭಕ್ತಿಗೀತೆ ರಸಮಂಜರಿ ನಡೆಯಲಿದೆ. ರಾತ್ರಿ 9:00 ರಿಂದ ನಾಟ್ಯ ಕಲಾ ರತ್ನ ವಿದ್ವಾನ್ ಸುರೇಶ್ ಅತ್ತಾವರ ಚಕ್ರಪಾಣಿ ನೃತ್ಯ ಕಲಾ ಕೇಂದ್ರ ಇವರಿಂದ 'ಮಣಿಕಂಠ ಜನನ' ನೃತ್ಯ ರೂಪಕ ನಡೆಯಲಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


