ಮಂಗಳೂರು: ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ
ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸಂಸ್ಥೆಯಲ್ಲಿ ಎಪ್ರಿಲ್ 29 ಮತ್ತು 30 ರಂದು ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್
ಇಂಜಿನೀಯರ್ಸ್ (IEEE) ಬೆಂಗಳೂರು ಮತ್ತು ಮಂಗಳೂರು
ವಿಭಾಗಗಳ ಸಹಭಾಗಿತ್ವದಲ್ಲಿ "ಹೊಸತಾಗಿ ಬೆಳೆಯುತ್ತಿರುವ ಸಮನ್ವಯ ವಿಜ್ಞಾನ ಮತ್ತು ತಂತ್ರಜ್ಞಾನ"
ಗಳ ಕುರಿತು ಅಂತರರಾಷ್ಟ್ರೀಯ ಸಮ್ಮೇಳನವನ್ನು (ICESST
2026) ಆಯೋಜಿಸಲಾಗಿದೆ.
IEEE ಸಹಭಾಗಿತ್ವದಲ್ಲಿ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ತಾಂತ್ರಿಕ ಸಮ್ಮೇಳನವನ್ನು ಆಯೋಜಿತವಾಗಿದ್ದು, ಈ ಪ್ರತಿಷ್ಠಿತ ಅಂತರರಾಷ್ಟ್ರೀಯ ಸಮ್ಮೇಳನವು ಸಂಶೋಧಕರಿಗೆ, ಶೈಕ್ಷಣಿಕ ವಲಯದ ಸಾಧಕರಿಗೆ, ಉದ್ಯಮ ಕ್ಷೇತ್ರದ ಪರಿಣಿತರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಮೂಲ ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಪಡಿಸಲು ಮತ್ತು ಶಕ್ತಿ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಇತ್ತೀಚಿನ ನವೀನತೆಗಳನ್ನು ಚರ್ಚಿಸಲು ಜಾಗತಿಕ ವೇದಿಕೆಯನ್ನು ಒದಗಿಸಲಿದೆ.
ಕಂಪ್ಯೂಟರ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ರೋಬೋಟಿಕ್ಸ್ ಹಾಗೂ ಮೂಲಭೂತ ವಿಜ್ಞಾನ ಸೇರಿದಂತೆ ಬಹುಶಾಖೀಯ ವಿಷಯವಲಯಗಳಿಗೆ ಸಂಬಂಧಿಸಿದ 152 ಪ್ರಬಂಧಗಳನ್ನು ದೇಶದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದ ಆಗಮಿಸಲಿರುವ ಉಪನ್ಯಾಸಕರು, ಸಂಶೋಧಕರು, ತಜ್ಞರು ಹಾಗೂ ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ. ಇದರ ಜೊತೆಗೆ, ದಿಕ್ಸೂಚಿ ಭಾಷಣ, ತಜ್ಞರ ಹಾಗೂ ಪರಿಣಿತರ ಚರ್ಚೆಗಳು ಮತ್ತು ಪ್ರಾಜೆಕ್ಟ್ ಪ್ರದರ್ಶನಗಳು ನಡೆಯಲಿವೆ.
ಭಾರತದ ಖ್ಯಾತ ಅಂತರಿಕ್ಷ ವಿಜ್ಞಾನಿ, ದೇಶದ ಅತ್ಯುನ್ನತ ಅಂತರಿಕ್ಷ ಸಂಸ್ಥೆ "ಇಸ್ರೋ" ಮಾಜಿ ಅಧ್ಯಕ್ಷರು ಹಾಗೂ "ಪದ್ಮಶ್ರೀ" ಪುರಸ್ಕೃತ ಶ್ರೀ ಎ. ಎಸ್. ಕಿರಣ್ ಕುಮಾರ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಬುಧವಾರ, ಎಪ್ರಿಲ್ 29 ರಂದು ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಐಇಇಇ ಮಂಗಳೂರು ಉಪವಿಭಾಗದ ಅಧ್ಯಕ್ಷರಾದ ಡಾ. ವೇಣುಗೋಪಾಲ ಪಿ. ಎಸ್., ಶ್ರೀನಿವಾಸ್ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರುಗಳಾದ ಶ್ರೀಮತಿ. ಎ. ವಿಜಯಲಕ್ಷ್ಮಿ ಆರ್. ರಾವ್ ಹಾಗೂ ಪ್ರೊ. ಶ್ರೀಮತಿ. ಎ. ಮಿತ್ರ ಎಸ್ ರಾವ್, ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ. ಸತ್ಯನಾರಾಯಣ ರೆಡ್ಡಿ ಯವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಡಾ. ಆದಿತ್ಯ ಕುಮಾರ್ ಮಯ್ಯ (ರಿಜಿಸ್ಟ್ರಾರ್ ಅಕಾಡೆಮಿಕ್), ಡಾ. ಅನಿಲ್ ಕುಮಾರ್ (ರಿಜಿಸ್ಟ್ರಾರ್), ಡಾ. ಶ್ರೀನಿವಾಸ ಮಯ್ಯ ಡಿ. (ರಿಜಿಸ್ಟ್ರಾರ್ ಮೌಲ್ಯಮಾಪನ), ಡಾ. ಅಜಯ್ ಕುಮಾರ್ (ರಿಜಿಸ್ಟ್ರಾರ್ ಡೆವಲಪ್‌ಮೆಂಟ್), ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಎನ್ ಹೆಗಡೆ, ಸಂಚಾಲಕರಾದ ಪ್ರೊ. ಗೌರವ್ ಪ್ರಸಾದ್ ಉಪಸ್ಥಿತರಿರಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


