ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ- ಸರ್ಕಾರಿ ಶಾಲೆಗಳ ಹತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

Upayuktha
0

 


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವದ ಸವಿನೆನಪಿಗಾಗಿ ಪುತ್ತೂರು ತಾಲೂಕಿನ ಸರ್ಕಾರಿ ಶಾಲೆಗಳ ಆರ್ಥಿಕ ಸವಾಲುಗಳಿರುವ ಪ್ರತಿಭಾನ್ವಿತ ಆಯ್ದ ಹತ್ತು ಮಂದಿ ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣವನ್ನು ಒದಗಿಸಿಕೊಡಲಾಗುತ್ತಿದೆ. ಅದರನ್ವಯ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಇತ್ತೀಚೆಗೆ ಪ್ರವೇಶ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಆಯ್ಕೆಯಾದ ಹತ್ತು ಮಂದಿಗೆ ಉಚಿತ ಶಿಕ್ಷಣವನ್ನು ಘೋಷಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ ಮಾತ್ರವಲ್ಲದೆ ಸಿಇಟಿ, ನೀಟ್, ಜೆಇಇ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಚಿತ ತರಬೇತಿ ದೊರೆಯಲಿದೆ.

ಸವಣೂರಿನ ಶೇಖರ ಕೆ ಮತ್ತು ಶಾರದ ದಂಪತಿಯ ಪುತ್ರ ಪುನೀತ್ ಕೆ, ಪುಂಚಪ್ಪಾಡಿಯ ರಾಧಾಕೃಷ್ಣ ಮತ್ತು ಕುಸುಮ ಕೆ ಬಿ ದಂಪತಿಯ ಪುತ್ರ ಯತೀಶ್ ಪಿ, ಸವಣೂರಿನ ರಾಮ ಮತ್ತು ಗೀತಾ ದಂಪತಿಯ ಪುತ್ರ ಮನೀಶ್, ಚಿಕ್ಕಮುಡ್ನೂರಿನ ವಿಶ್ವನಾಥ ರೈ ಮತ್ತು ಸತ್ಯವತಿ ವಿ ರೈ ದಂಪತಿಯ ಪುತ್ರಿ ಶ್ರಾವಣ್ಯ ರೈ ಎನ್, ಪಟ್ಟೆಯ ಶ್ರೀನಿವಾಸ ಬಿ ಮತ್ತು ಪದ್ಮಾವತಿ ಎಚ್ ದಂಪತಿಯ ಪುತ್ರಿ ತೀಕ್ಷಾ ಎಸ್.ಪಿ, ಇರ್ದೆಯ ಉದಯ ಡಿ ಮತ್ತು ಪ್ರವೀಣ ಕುಮಾರಿ ದಂಪತಿಯ ಪುತ್ರಿ ಸ್ವಾತಿ ಡಿ, ಬೆಟ್ಟಂಪಾಡಿಯ ಶೀನಪ್ಪ ಗೌಡ ಮತ್ತು ಯಶೋಧ ಬಿ ದಂಪತಿಯ ಪುತ್ರಿ ಧನ್ವಿತಾ, ಸೂತ್ರಬೆಟ್ಟುವಿನ ಮಂಜ ಶೆಟ್ಟಿ ಬಿ ಜಿ ಮತ್ತು ಮಾಲ ಎಚ್ ದಂಪತಿಯ ಪುತ್ರಿ ಭಾನುಪ್ರಿಯ ಎಮ್, ಪುಂಚಪ್ಪಾಡಿಯ ಮೋನಪ್ಪ ಗೌಡ ಮತ್ತು ಭವಾನಿ ದಂಪತಿಯ ಪುತ್ರ ಜಸ್ವಿತ್ ಎಮ್ ಟಿ ಹಾಗೂ ಕಬಕದ ಪರಮೇಶ್ವರ ಗೌಡ ಮತ್ತು ಬೇಬಿ ಕುಮಾರಿ ದಂಪತಿಯ ಪುತ್ರಿ ಶಿಲ್ಪ ವಿಧಾತ್ರಿ ನಂದೇರಾ  ಆಯ್ಕೆಯಾದ ವಿದ್ಯಾರ್ಥಿಗಳು.

ಪುತ್ತೂರಿನಲ್ಲಿ ಉಚಿತ ಶಿಕ್ಷಣದ ಕಲ್ಪನೆ ಜಾರಿಗೆ ತಂದ ಮೊದಲ ಸಂಸ್ಥೆ:

 ಇಂದು ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣದ ಕಲ್ಪನೆ ಜಾರಿಯಲ್ಲಿದೆ. ಆದರೆ ಪುತ್ತೂರಿನಲ್ಲಿ ಮೊದಲ ಬಾರಿಗೆ ಕಲ್ಪನೆಯನ್ನು ಸಾಕಾರಗೊಳಿಸಿದ ಕೀರ್ತಿ ಅಂಬಿಕಾ ಶಿಕ್ಷಣ ಸಂಸ್ಥೆಗೆ ಸಲ್ಲುತ್ತದೆ. 2010ರಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯ ಆರಂಭಗೊಂಡಾಗ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಶಿಕ್ಷಣ ಕ್ಷೇತ್ರದಲ್ಲೇ ಅದೊಂದು ವಿನೂತನ ಹಾಗೂ ವಿದ್ಯಾರ್ಥಿಸ್ನೇಹಿ ಯೋಜನೆಯೆನಿಸಿತ್ತು. ತದನಂತರ ಹಲವು ಸಂಸ್ಥೆಗಳಲ್ಲಿ ಅಂತಹ ಯೋಜನೆ ಜಾರಿಗೊಂಡು ಇಂದು ಇಡಿಯ ವಿದ್ಯಾರ್ಥಿ ಸಮುದಾಯಕ್ಕೇ ಪ್ರಯೋಜನಕಾರಿಯಾಗಿ ಪರಿಣಮಿಸಿರುವುದರ ಹಿಂದೆ ಅಂಬಿಕಾದ ದೂರದೃಷ್ಟಿಯನ್ನು ಹಲವು ವಿದ್ಯಾರ್ಥಿ ಹೆತ್ತವರು ಸ್ಮರಿಸುತ್ತಿದ್ದಾರೆ. ಇದೀಗ ಸರ್ಕಾರಿ ಶಾಲಾ ಪ್ರತಿಭಾನ್ವಿತರಿಗೆ ಉಚಿತ ಶಿಕ್ಷಣ ಘೋಷಣೆಯ ಮೂಲಕ ಅಂಬಿಕಾ ಮತ್ತೊಂದು ಹೊಸತನದ ಹಾದಿಗೆ ಅಡಿಯಿಟ್ಟಿದೆ.


ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ಒಂದು ಕೋಟಿಗೂ ಮೀರಿ ವಿದ್ಯಾರ್ಥಿ ವೇತನ ಒದಗಿಸಿಕೊಡಲಾಗುತ್ತಿದೆ. ಇದೀಗ ರಜತ ಮಹೋತ್ಸವದ ಸವಿನೆನಪಿಗಾಗಿ ಪ್ರತಿಭಾನ್ವಿತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸಿಕೊಡಲಾಗುತ್ತಿದೆ. ಅರ್ಹರಿಗೆ ಸಹಕಾರಿಯೆನಿಸುವ ಯೋಜನೆಗಳನ್ನು ಜಾರಿಗೆ ತರುವುದರಲ್ಲಿ ಆತ್ಮತೃಪ್ತಿಯಿದೆ.

-  ಸುಬ್ರಮಣ್ಯ ನಟ್ಟೋಜ, ಅಧ್ಯಕ್ಷರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top