ಭೂಮಿಯ ಮೇಲ್ಮೈಯನ್ನು ಹಸಿರು ವರ್ಣದಿಂದ ಲೇಪನ ಮಾಡಿದಂತೆ ಗೋಚರಿಸುತ್ತಿದ್ದ ಸಾಲೋ ಸಾಲು ನೆಟ್ಟಿದಂತಹ ಭತ್ತದ, ಹೂವು ತರಕಾರಿಗಳ, ಧವಸ ಧಾನ್ಯಗಳ ಆ ಗಿಡಗಳು ಇಂದಿನ ಮಾನವನ ಅತಿಯಾದ ತಲೆಯ ಓಡಿಸುವಿಕೆಯಿಂದ ಅಂತಹ ಆ ಹಸಿರು ಲೇಪನಗಳನ್ನೇ ಹಲವು ರೀತಿಯ ಮೂಲಕ ಒರೆಸಿಬಿಟ್ಟಿದ್ದಾನೆ.
ಹೌದು, ಇಂದು ನಾವು ನಮ್ಮ ಬದುಕಿನ ಪಯಣಕ್ಕೆ ನಮ್ಮ ದೇಹವೇ ನಮಗೆ ಬೆಂಬಲವನ್ನ ನೀಡದಂತಾಗಿದೆ. ಅಂದರೆ, ನಾವು ನಮ್ಮ ಜೀವಿತ ಅವಧಿಯಲ್ಲಿ ಇಟ್ಟುಕೊಂಡಿರುವಂತಹ ಕೆಲ ಗುರಿಗಳು, ಆಸೆ ಆಕಾಂಕ್ಷೆಗಳನ್ನು ಪೂರೈಸದೆಯೇ, ಅತಿ ವೇಗವಾಗಿ ಬದುಕಿಗೆ ಪೂರ್ಣವಿರಾಮವನ್ನು ಇಡುವ ಸಂದರ್ಭ ನಮ್ಮೆಲ್ಲರನ್ನ ಆವರಿಸಿಕೊಂಡುಬಿಟ್ಟಿದೆ. ಹಾಗಾದರೆ ಏಕೆ ಹೀಗೆ ಆಗುತ್ತಿದೆ? ಇದಕ್ಕೆ ಕಾರಣಗಳೇನು? ನಾವು ಬದುಕುತ್ತಿರುವ ಪರಿಸರವೇ ಇದಕ್ಕೆಲ್ಲ ಕಾರಣವೋ ಎಂಬಿತ್ಯಾದಿ ವಿಚಾರಗಳನ್ನ ಗಮನಿಸುವುದು ಆತ್ಯಗತ್ಯವಾಗಿದೆ.
ನಿಜವಾಗಿಯೂ ಈ ನಮ್ಮ ಅಲ್ಪಸಮಯದ ಬದುಕಿಗೆ ಕಾರಣ ಇಂದಿನ ಈ ಪರಿಸರ. ವರುಷಗಳು ಉರುಳಿದಂತೆ ಹಲವು ಅಭಿವೃದ್ಧಿಯ ಕಾರಣದಿಂದ ಈ ನಮ್ಮ ಬದುಕು ನಡೆಸುವ ಶೈಲಿಯಲ್ಲಿ ಒಳ್ಳೆಯ ರೀತಿಯಲ್ಲಿ ಬದಲಾವಣೆಯಾದರೂ ಕೂಡ, ಆ ಬದುಕಿಗೆ ಶಕ್ತಿ ನೀಡುವ ಇಂದಿನ ಆಹಾರ ಪದ್ಧತಿಗಳೆಲ್ಲವೂ ವಿರುದ್ಧವಾಗಿ ನಿಂತಿವೆ. ಯಾವುದೆಲ್ಲ ಎಂದರೆ ಪಿಜ್ಜಾ, ಬರ್ಗರ್ ಹಾಗೆ ಇತರ ಆಹಾರ ವಸ್ತುಗಳು.
ಇಂದಿನ ಈ ಬ್ಯುಸಿ ಲೈಫಲ್ಲಿ ಆಹಾರ ಧಾನ್ಯಗಳನ್ನ ಬೆಳೆಸುವುದು ಬಿಡಿ, ಬೆಳೆಸಿದನ್ನು ಮಾಡಿ ತಿನ್ನುವ ಸಮಯವೂ ನಮ್ಮಲ್ಲಿ ಇಲ್ಲದಂತಾಗಿದೆ. ಆಹಾರ ಪದಾರ್ಥಗಳನ್ನು ತಿನ್ನುವ ಸಮಯ ಬಂದರೆ ಸಾಕು, ಅಂಗೈಯಲ್ಲಿ ಮೊಬೈಲನ್ನು ಹಿಡಿದುಕೊಂಡು, ಅದರಲ್ಲೇ ಆರ್ಡರ್ ಮಾಡಿ ತರಿಸಿ ಹೊಟ್ಟೆಗೆ ತುಂಬಿಸಿಕೊಳ್ಳುವ ದುಸ್ಥಿತಿ ನಮ್ಮಲ್ಲಿ ಬೆಳೆದುಬಿಟ್ಟಿದೆ.
ಏನು ಇವತ್ತು ಜನರು ಎಲ್ಲವನ್ನೂ ಕೂಡ ಅತಿ ವೇಗವಾಗಿ ಪಡೆದುಕೊಳ್ಳಲು ಬಯಸುತ್ತಿದ್ದಾರೋ, ಆ ಬಯಸುವಿಕೆಯೇ ನಮ್ಮೆಲ್ಲರನ್ನ ಕೂಡ ಅತಿ ವೇಗವಾಗಿ ಜೀವನಕ್ಕೆ ಅಂತ್ಯವನ್ನು ಹಾಡಲು ಕಾರಣವಾಗುತ್ತಿದೆ.
ಇಂದಿನ ಜೀವನ ಈ ರೀತಿಯಲ್ಲಿದ್ದರೆ, ಹಿಂದಿನ ಆ ಪೂರ್ವಜರ ಬದುಕು ಇದಕ್ಕೆಲ್ಲವೂ ವಿರುದ್ಧ ರೀತಿಯಲ್ಲಿತ್ತು. ಅಂದಿನ ಆ ಜನರ ಬದುಕಿಗೆ ಅಷ್ಟು ಸುಲಭದಲ್ಲಿ ಸಾವೆಂಬ ಸಂದರ್ಭ ಬರುತ್ತಿರಲಿಲ್ಲ. ಏಕೆಂದರೆ ಅವರ ಜೀವನ ಶೈಲಿ,ಆಹಾರ ಪದ್ಧತಿ.
ಇಂದಿನ ಹಾಗೆ ಆಹಾರ ಪದಾರ್ಥಗಳನ್ನು ಮೊಬೈಲ್‌ನಿಂದಲೇ ಆರ್ಡರ್ ಮಾಡುವುದು ಬಿಡಿ, 'ಅಂಗಡಿಯೆಂಬುದು ಇದೆ, ಅಲ್ಲಿ ತರಕಾರಿಗಳನ್ನ ಮಾರುತ್ತಾರೆ' ಇಂತಹ ಯೋಚನೆಯೂ ಕೂಡ ಅವರಲ್ಲಿ ಇದ್ದಿರಲು ಸಾಧ್ಯವಿಲ್ಲ.
ಅಂದರೆ ಎಲ್ಲಿಂದಲೂ ಕೂಡ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವ ಪರಿಕಲ್ಪನೆ ಇರದೆ, ತಮ್ಮದೇ ಭೂಮಿಯಲ್ಲಿ ತಮಗೆ ಬೇಕಾದ ಎಲ್ಲಾ ಆಹಾರ ಪದಾರ್ಥಗಳನ್ನು ಸಾವಯವ ಗೊಬ್ಬರಗಳಿಂದ, ಬೆಳೆಸಿ ಬೇಯಿಸಿ ತಿನ್ನುವ ಸಂದರ್ಭ ಅಂದು ಇತ್ತು. ಅವರಿಗೆ ರೋಗರುಜಿನಗಳಿರಲಿಲ್ಲ, ಯಾವುದೇ ಸಮಸ್ಯೆಯೂ ಇರಲಿಲ್ಲ.
ಆದ್ದರಿಂದ ಹಿಂದಿನ ಜನರ ಬದುಕಿನ ಪಯಣವನ್ನ ಒಂದೊಮ್ಮೆ ನೆನಪಿಸಿಕೊಂಡು, ಅಷ್ಟು ಮಾತ್ರವಲ್ಲದೆ ಅಳವಡಿಸಿಕೊಳ್ಳುವುದರ ಮೂಲಕ ಇಂದಿನ ಈ ಅಲ್ಪಕಾಲದ ಬದುಕಿನ ಯಾನವನ್ನು ಇನ್ನೊಂದಷ್ಟು ಹೆಚ್ಚಿನ ಕಾಲ ಉಳಿಸಿಕೊಳ್ಳುವಂತೆ ಮಾಡಲು ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಾಗಿದೆ.
- ಕೆ ಎನ್ ಧನುಷ್, ದಿಡುಪೆ
ಪ್ರಥಮ ಪತ್ರಿಕೋದ್ಯಮ ವಿಭಾಗ
ಎಸ್ ಡಿ ಎಂ ಕಾಲೇಜು ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



