ವಾಗ್ದೇವಿ ಭಜನಾ ಮಂಡಳಿಯ 36ನೇ ವಾರ್ಷಿಕೋತ್ಸವ; ಡಾ. ಎ. ಕುಮುದ ಸಂಪಾದನೆಯ ಶ್ರೀಹರಿಯ ದಶಾವತಾರ ಕೃತಿ ಬಿಡುಗಡೆ

Upayuktha
0

 


ಬೆಂಗಳೂರು: ನಗರದ ಬಸವನಗುಡಿಯ ಶ್ರೀ ಉತ್ತರಾದಿ ಮಠದಲ್ಲಿ ವಾಗ್ದೇವಿ ಭಜನಾ ಮಂಡಳಿಯ 36ನೇ ವಾರ್ಷಿಕೋತ್ಸವವನ್ನು ಆಯೋಜಿಸಲಾಗಿತ್ತುಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಡಾ.ಸತ್ಯಧ್ಯಾನಚಾರ್ ಕಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ  ವಾಗ್ದೇವಿ ಭಜನಾ ಮಂಡಳಿಯ ಅಧ್ಯಕ್ಷೆ ಡಾ. .ಕುಮುದರವರು ಸಂಪಾದಿಸಿರುವ ವಿವಿಧ ಯತಿಗಳು ಮತ್ತು ಹರಿದಾಸ ರಚಿಸಿದ ಶ್ರೀಹರಿಯ ದಶಾವತಾರ ಕೀರ್ತನೆಗಳ ಕೃತಿಯನ್ನು ವಿದ್ವಾನ್ ಕರ್ನೂಲ್ ಶ್ರೀನಿವಾಸ ಆಚಾರ್ಯರು ಲೋಕಾರ್ಪಣೆಗೊಳಿಸಿದರು. 83 ಇಳಿ ವಯಸ್ಸಿನಲ್ಲೂ ಲವಲವಿಕೆಯಿಂದ ದಾಸ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ಪ್ರಕಟಪಡಿಸಿರುವ ಇವರ ಕ್ರಿಯಾಶೀಲತೆ ಯುವ ಜನಾಂಗಕ್ಕೆ ಮಾದರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀಮತಿ ರಾಜಲಕ್ಷ್ಮಿ ಪಾರ್ಥಸಾರಥಿ ಮಾತನಾಡುತ್ತಾ ಶ್ರೀಹರಿಯ ದಶಾವತಾರಗಳು ವಿಕಾಸವಾದಕ್ಕೆ ಪೂರಕವಾಗಿದ್ದು ಸಂಶೋಧನಾತ್ಮಕ ದೃಷ್ಟಿಯೊಂದಿಗೆ ಭಕ್ತಿಯ ಸುಧೆಯು ಇಲ್ಲಿ ಮೇಳಯಿಸಿದೆ. ಸುಮಾರು 132 ಕೀರ್ತನೆಗಳ ಸಂಗ್ರಹ ಇದಾಗಿದ್ದು ಸಂಗೀತಾಸಕ್ತರಿಗೆ ಆಕರ ಗ್ರಂಥವಾಗಿ ಶೋಭಿಸುತ್ತದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮತ್ತು ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಅಧ್ಯಕ್ಷ ಡಾ. ಟಿ ವಾದಿರಾಜ ರವರು ಉಪಸ್ಥಿತರಿದ್ದರು .

 

 ಕಾರ್ಯಕ್ರಮದ ಆರಂಭದಲ್ಲಿ ಕು. ಸಾಚಿ ವರುಣ್ ರಿಂದ ಭರತನಾಟ್ಯ ನಡೆಯಿತು. ದೇವಗಿರಿ ಲಕ್ಷ್ಮಿಕಾಂತ ಸಂಘದ ಅಧ್ಯಕ್ಷೆ ಶ್ರೀಮತಿ ಜಿ.ವಿ ಶಾಂತ ಬಾಯಿ, ಶ್ರೀಮತಿ ಭಾಗ್ಯ ಸತೀಶ್, ಶ್ರೀಮತಿ ರೇಖಾ ಲಕ್ಷ್ಮೇಶ್ವರ ರವರನ್ನು ಸನ್ಮಾನಿಸಲಾಯಿತು. ವಿವಿಧ ಭಜನಾ ಮಂಡಳಿಗಳ ಮಾತೆಯರಿಗೆ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀವಾರಿ ಫೌಂಡೇಶನ್ ವೆಂಕಟೇಶಮೂರ್ತಿ ನೇತೃತ್ವದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವದೊಂದಿಗೆ ಸಂಪನ್ನವಾಯಿತು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top