ಎಸ್‌ಡಿಎಂ ಪದವಿಪೂರ್ವ ಕಾಲೇಜಿನ 36 ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಪೂರ್ಣಾಂಕ

Upayuktha
0



ಉಜಿರೆ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಒಟ್ಟು ಮೂವತ್ತಾರು ವಿದ್ಯಾರ್ಥಿಗಳು ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ 100 ಕ್ಕೆ 100 ಅಂಕಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ. 


ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ ಒಟ್ಟು 98 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಹಾಗೂ 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಇವರಲ್ಲಿ ಕಲಾ ವಿಭಾಗದ ನಿಜ ಕುಲಾಲ್ ರಾಜ್ಯಮಟ್ಟದಲ್ಲಿ 4 ನೆಯ ಸ್ಥಾನ ಹಾಗೂ ಶ್ರೀಪೂರ್ಣಾ 9 ನೆಯ ಸ್ಥಾನ, ವಾಣಿಜ್ಯಶಾಸ್ತ್ರ ವಿಭಾಗದ ಹಂಸಿನಿ ಭಿಡೆ 6 ನೆಯ ಸ್ಥಾನ ಪಡೆದಿದ್ದಾರೆ. ಈ ಮೂಲಕ ಸಂಸ್ಕೃತ ಭಾಷಾ ವಿಭಾಗ ಒಟ್ಟಾರೆ 100 ಶೇಕಡಾ ಫಲಿತಾಂಶ ದಾಖಲಿಸಿದೆ. 


ವಿಜ್ಞಾನ ವಿಭಾಗದ  ಅಮೂಲ್ಯ ಪ್ರಭು, ಅನ್ವಿತಾ ಹೆಬ್ಬಾರ್,  ಆಶೀತ್ ಕುಮಾರ್, ದಿವ್ಯಾ, ಪಲ್ಲವಿ ಪುರಾಣಿಕ್, ಪ್ರಯಾಗ ಪುರಾಣಿಕ್, ಪ್ರಜ್ವಲ್, ಶ್ರೀವೈಷ್ಣವಿ, ಶ್ರೀಧರ ಎಂ ಹೆಗಡೆ, ಕಾರ್ತಿಕ್ ಡಿ.ಎಂ , ಯಶಸ್ವಿನಿ, ಸಾಹಿತ್ಯ ಎನ್. ಎಸ್, ಸಮೃದ್ಧಿ, ಭವಿಷ್, ಪೂರ್ವಿಕಾ ಆರ್, ಪ್ರಜ್ಞಾ, ಪ್ರೀತಿ ಕೆ. ಜೆ, ಸಂಕೀರ್ತನಾ, ಎಸ್. ಪಿ ಸಾನ್ವಿ, ಮೇಧಾ ಕುಂದಾಡಿ, ನಿಶಾಂತ್ ಹೆಚ್.ಜಿ, ಪ್ರಣೀತಾ ಕೆ.ಪಿ, ವೀಕ್ಷಿತ್, ಸಿದ್ಧಾಂತ್ ಜೈನ್.


ವಾಣಿಜ್ಯಶಾಸ್ತ್ರ ವಿಭಾಗದ ಸಿಂಚನಾ ಶೆಣೈ, ಅನಿಕಾ, ಆದಿತ್ಯ ಹೆಚ್. ಎಸ್, ಪ್ರಥಮ್, ಸ್ಪಂದನಾ, ಸಂಜನಾ, ಸುದರ್ಶನ್, ಸೌಪರ್ಣಿಕಾ ರಾವ್, ಹಂಸಿನಿ ಭಿಡೆ ಕಲಾ ವಿಭಾಗದ ನಿಜ ಕುಲಾಲ್, ಶ್ರೀ ಪೂರ್ಣಾ ಹಾಗೂ ಪ್ರಣವಕೃಷ್ಣ ಇವರು ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ 100 ಕ್ಕೆ 100 ಅಂಕ ಪಡೆದು ಕಾಲೇಜಿಗೆ ಹಾಗೂ ಸಂಸ್ಕೃತ ಭಾಷಾ ವಿಭಾಗಕ್ಕೆ ಹೆಮ್ಮೆ ತಂದಿದ್ದಾರೆ.


ಇವರನ್ನು ಆಡಳಿತ ಮಂಡಳಿ, ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಹಾಗೂ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಇವರು ಅಭಿನಂದಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top