ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ ಸ್ವರ್ಣಂ ಜ್ಯುವೆಲ್ಲರಿ

Upayuktha
0


ಸುಳ್ಯ: ಸುಳ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಸೂಂತೋಡು ಎಂಪೋರಿಯಮ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಸರಾಂತ ಚಿನ್ನದ ಮಳಿಗೆ ಸ್ವರ್ಣಂ ಜ್ಯುವೆಲ್ಲರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಮಾ.8ರಂದು ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಯಿತು.


ಶ್ರಮಜೀವಿಗಳಾದ ಖಾಸಗಿ ಬಸ್ ನಿರ್ವಾಹಕಿ ಶ್ರೀಮತಿ ಜಯಂತಿ, ಗೃಹರಕ್ಷಕ ದಳದ ಸಿಬ್ಬಂದಿಗಳಾದ ಪುಷ್ಪಾವತಿ ಆಲೆಟ್ಟಿ, ಗೀತಾ ಜಯನಗರ, ಅಟೋ ಚಾಲಕಿ ಶ್ರೀಮತಿ ಗೀತಾ ಜಯನಗರ, ಪೌರ ಕಾರ್ಮಿಕೆಯವರಾದ ಶ್ರೀಮತಿ ಮಾಲಾಬಾಯಿ, ಶ್ರೀಮತಿ ಮಮತಾ, ಶ್ರೀಮತಿ ಲತಾರವರನ್ನು ಸುಳ್ಯ ಪಯಸ್ವಿನಿ ಜೇಸಿಐ ಅಧ್ಯಕ್ಷೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕರವರು ಸ್ವರ್ಣಂ ವತಿಯಿಂದ ನೀಡಿದ ಸೀರೆ, ಸ್ಮರಣಿಕೆ ನೀಡಿ ಗೌರವಿಸಿ, ಮಾತನಾಡಿ ಮಹಿಳಾ ದಿನಾಚರಣೆಯ ಮಹತ್ವವನ್ನು ತಿಳಿಸಿ ಶುಭಹಾರೈಸಿದರು. ಬಿಲ್ಡಿಂಗ್ ಮಾಲಕ ಸೂರಯ್ಯ ಸೂಂತೋಡು ಉಪಸ್ಥಿತರಿದ್ದು ಶುಭ ಹಾರೈಸಿದರು.


ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಯಶ್ಚಿತ್ ಕಾಳಂಮನೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪಾಲುದಾರ ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲುದಾರರಾದ ಸಂಜೀವ, ಭವಿತ್, ಪ್ರವೀಣ್ ಗೌಡ, ಸಿಬ್ಬಂದಿಗಳಾದ ಶೋಧನ್, ನಿತೇಶ್,  ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top