ಮಂಗಳೂರು–ಮೂಡುಜೆಪ್ಪು ನೂತನ ನಗರ ಬಸ್ ಸೇವೆಗೆ ಶಾಸಕ ಡಾ. ವೈ ಭರತ್ ಶೆಟ್ಟಿ ಚಾಲನೆ

Upayuktha
0


ಮಂಗಳೂರು: ಮಂಗಳೂರು–ಮೂಡುಜೆಪ್ಪು ಮಾರ್ಗದ ನೂತನ ಸರಕಾರಿ ನಗರ ಸಾರಿಗೆ ಬಸ್ ಸೇವೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಗುರುವಾರ ಮಂಗಳೂರು ಬಸ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸಾರ್ವಜನಿಕರ ಸೌಲಭ್ಯಕ್ಕಾಗಿ ನಗರ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು ಅಗತ್ಯವೆಂದು ತಿಳಿಸಿ, ಜನರ ಬಹುಕಾಲದ ಬೇಡಿಕೆಯಾದ ಸುರತ್ಕಲ್–ಪರಂಗಿಪೇಟೆ ಹಾಗೂ ಆಕಾಶಭವನ–ಪಡೀಲ್ ನೂತನ ಬಸ್ ಸೇವೆಗಳನ್ನು ಕೂಡಲೇ ಆರಂಭಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.


ನೂತನ ಬಸ್ ಸೇವೆಯು ಮಂಗಳೂರು ಬಸ್ ನಿಲ್ದಾಣದಿಂದ ಬೆಳಿಗ್ಗೆ 7.05, 9.00, 11.15, ಮಧ್ಯಾಹ್ನ 1.30, 3.10 ಹಾಗೂ ಸಂಜೆ 5.00 ಗಂಟೆಗಳಿಗೆ ಮಲ್ಲಿಕಟ್ಟೆ, ನಂತೂರು, ಕುಡುಪು, ವಾಮಂಜೂರು ಮತ್ತು ಉಳಾಯಿಬೆಟ್ಟು ಮಾರ್ಗವಾಗಿ ಮೂಡುಜೆಪ್ಪುವಿಗೆ ಸಂಚರಿಸಲಿದೆ. ಮರು ಪ್ರಯಾಣದಲ್ಲಿ ಮೂಡುಜೆಪ್ಪುವಿನಿಂದ ಮಂಗಳೂರಿಗೆ ಬೆಳಿಗ್ಗೆ 8.00, 10.00, ಮಧ್ಯಾಹ್ನ 12.15, 2.20, ಸಂಜೆ 4.00 ಮತ್ತು 6.00 ಗಂಟೆಗಳಿಗೆ ಬಸ್ ಕಾರ್ಯಾಚರಣೆ ಇರಲಿದೆ.


ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಸುರೇಂದ್ರ ಕಂಬಳಿ, ಗ್ಯಾರಂಟಿ ಸಮಿತಿಯ ಸದಸ್ಯರು, ಕೆಎಸ್‌ಆರ್‌ಟಿಸಿಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಡಿಟಿಓ ಕಮಲ್ ಕುಮಾರ್, ಡಿಎಂಇ ವಿನಯ್ ಸೇರಿದಂತೆ ಕೆಎಸ್‌ಆರ್‌ಟಿಸಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top