ವಾಘಾ ಅಟ್ಟಾರಿ ಗಡಿ ಸಮಾರಂಭ ರಾಷ್ಟ್ರ ಪ್ರೇಮದ ಪ್ರತೀಕ

Upayuktha
0


ವಾಘಾ ಅಟ್ಟಾರಿ ಗಡಿ ಪ್ರದೇಶವಿರುವುದು ಭಾರತದ ಅಮೃತಸರ ಮತ್ತು ಪಾಕಿಸ್ತಾನದ ಲಾಹೇೂರ ನಡುವಿನ ಪ್ರಮುಖ ಅಂತರರಾಷ್ಟ್ರೀಯ ಗಡಿ ರೇಖೆ.


ಪ್ರಸಿದ್ಧವಾದ "ಬೀಟಿಂಗ್ ರಿಟ್ರೀಟ್" ರಕ್ಷಣಾ ಪಡೆಯ ಸಮಾರಂಭಕ್ಕೆ ಹೆಸರುವಾಸಿಯಾದ ತಾಣ. ಇಲ್ಲಿ ಪ್ರತಿ ನಿತ್ಯವೂ ಸೈನಿಕರ ಪರೇಡ್‌ಗೆ ಸಾಕ್ಷಿಯಾಗುವ ಸ್ಥಳ. ಇದು ಪಂಜಾಬ್‌ ಗ್ರ್ಯಾಂಡ್ ಟ್ರಂಕ್ ರಸ್ತೆಯಲ್ಲಿದ್ದು ಐತಿಹಾಸಿಕ ದೃಷ್ಟಿಯಿಂದ ಅತ್ಯುತ್ತಮವಾದ ಪ್ರವಾಸಿ ತಾಣ.


ಬೀಟಿಂಗ್ ರಿಟ್ರೀಟ್ ಸಮಾರಂಭವು ಪ್ರತಿನಿತ್ಯ ಸಂಜೆಯ ಸೂರ್ಯಾಸ್ತಮಾನದ ಕಾಲದಲ್ಲಿ ನಡೆಯುವ ಚಿತ್ತಾಕಷ೯ಕ ಹಾಗೂ ರಾಷ್ಟ್ರ ಪ್ರೇಮ ಪ್ರತಿಧ್ವನಿಸುವ ಸಮಾರಂಭ. ಭಾರತದ ಕಡೆಯಿಂದ ಬಿ.ಎಸ್.ಎಫ್ ಪಡೆ ವಿವಿಧ ಕವಾಯತುಗಳನ್ನು ಪ್ರದಶಿ೯ಸುವ ಮೂಲಕ ಭಾರತದ ಸೈನ್ಯ ಬಲದ ಪ್ರದಶ೯ನಕ್ಕೆ ಸಾಕ್ಷಿಯಾಗುತ್ತದೆ. ಭಾರತೀಯ ಸೈನಿಕರು ಪ್ರಬಲವಾದ ದೈಹಿಕ ಮಾನಸಿಕ ಸಾಮಥ್ಯ೯ವನ್ನು ಪ್ರದಶಿ೯ಸುವ ಮೂಲಕ ಪಾಕಿಸ್ತಾನದ ಸೈನಿಕರಿಗೆ ಸವಾಲು ಹಾಕುವ ದೃಶ್ಯ ಭಾರತೀಯ ರಾಷ್ಟ್ರ ಪ್ರೇಮವನ್ನು ಉತ್ತುಂಗಕ್ಕೆ ಏರಿಸಿ ಬಿಡುತ್ತದೆ.


ಸುಮಾರು 45 ನಿಮಿಷಗಳ ಕಾಲ ನಡೆಯುವ ಸಮಾರಂಭದಲ್ಲಿ ಭಾರತೀಯ ಪ್ರವಾಸಿ ಪ್ರೇಕ್ಷಕ ಕಡೆಯಿಂದ ವಂದೇ ಮಾತರಂ; ಜೈ ಹಿಂದ್ ಘೇೂಷಣೆಗಳು ನಿರಂತರವಾಗಿ ಮುಗಿಲೆತ್ತರಕ್ಕೆ ಮೊಳಗುತ್ತಿರುತ್ತದೆ. ಸಮಯ ಮುಗಿಯಿತು ಅನ್ನುವಾಗ ನಮ್ಮ ಕಡೆಯಿಂದ ಭಾರತೀಯ ಧ್ವಜ ಮತ್ತು ಆ ಕಡೆಯಿಂದ ಪಾಕಿಸ್ತಾನದ ಧ್ವಜ ನಿಧಾನವಾಗಿ ಇಳಿಸಲಾಗುತ್ತದೆ. ಒಂದು ಅಥ೯ದಲ್ಲಿ ಪರಸ್ಪರ ಎರಡು ದೇಶಗಳ ನಡುವಿನ ಅರಿವಿನ ಸಮಾರಂಭವಾದರೆ ಇನ್ನೊಂದು ಅಥ೯ದಲ್ಲಿ ವೈರತ್ವದ ಪ್ರತೀಕ ಸಮಾರಂಭವು ಹೌದು.


- ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top