ರಂಗಭೂಮಿಯ ಶಕ್ತಿ, ಮಾನವೀಯ ಗುಣ ಅನನ್ಯ: ಗೀತಾ ಸುರತ್ಕಲ್‌

Upayuktha
0


ಸುರತ್ಕಲ್‌: ರಂಗಭೂಮಿಯು ಅನನ್ಯವಾದ ಸಕಾರಾತ್ಮಕ ಶಕ್ತಿಯನ್ನು ಹೊಂದಿದ್ದು ಹೆಚ್ಚು ಮಾನವೀಯವನ್ನಾಗಿಸುವ ಗುಣವನ್ನು ಹೊಂದಿದೆ. ರಂಗ ಭೂಮಿಯು ಸಂವೇದನಾ ಭಾವವನ್ನು ಬೆಳೆಸುವುದರೊಂದಿಗೆ ನಮ್ಮತನವನ್ನು ಬೆಳೆಸುತ್ತದೆ ಎಂದು ಹಿರಿಯ ರಂಗಭೂಮಿ ಕಲಾವಿದೆ ಮತ್ತು ಸಾಹಿತಿ ಗೀತಾ ಸುರತ್ಕಲ್ ನುಡಿದರು.


ಅವರು ಸಿಂಗಾರ ಸುರತ್ಕಲ್ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆಯ ಹಿನ್ನೆಲೆಯಲ್ಲಿ ಸುರತ್ಕಲ್ ಪರಮೇಶ್ವರಿ ನಗರದ ನಿಸರ್ಗದಲ್ಲಿ ಹಮ್ಮಿಕೊಂಡಿದ್ದ ರಂಗಭೂಮಿ ಕಲಾವಿದೆ ಗೀತಾ ಸುರತ್ಕಲ್ ಜೊತೆಗೆ ಮಾತುಕಥೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸುರತ್ಕಲ್ ನ ವಿದ್ಯಾದಾಯಿನೀ ಪ್ರೌಢಶಾಲೆ ಮತ್ತು ಗೋವಿಂದ ದಾಸ ಕಾಲೇಜು ಸಾಕಷ್ಟು ಅವಕಾಶಗಳನ್ನು ನೀಡಿತು. ಮಂಗಳೂರು ಮತ್ತು ಬೆಂಗಳೂರಿನ ವಿವಿಧ ತಂಡಗಳಲ್ಲಿ ದೊರೆತ ಅವಕಾಶಗಳು, ನಿರ್ದೇಶಕರ ಮತ್ತು ಸಹ ನಟರ ಸಹಕಾರದಿಂದ ಕಲಾ ಪ್ರತಿಭೆಯ ಆನಾವರಣ ಸಾಧ್ಯ ವಾಯಿತು. ಚಲನಚಿತ್ರ, ಕಿರು ಚಿತ್ರ, ಮತ್ತು ಧಾರಾವಾಹಿಗಳಲ್ಲಿ ರಂಗ ಭೂಮಿಯ ಹಿನ್ನೆಲೆಯಿರುವವರಿಗೆ ಪ್ರಾಮುಖ್ಯತೆ ಇದೆ. ರಂಗ ಬದ್ಧತೆಯಿಂದ ಕಾರ್ಯ ನಿರ್ವಹಿಸಿದಾಗ ಯಶಸ್ಸು ಸಾಧ್ಯ ಎಂದರು.


ವರ್ತಮಾನದ ತಲ್ಲಣಗಳನ್ನು ರಂಗ ಭೂಮಿ ಚಿತ್ರಸುತ್ತಿದ್ದು ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ರಂಗಭೂಮಿ ನೀಡುತ್ತದೆ ಎಂದರು.


ತಮ್ಮ ಸಾಹಿತ್ಯ ಸೃಷ್ಟಿ ಮತ್ತು ಹಿಮಾಲಯ ಪರ್ವತಾರೋಹಣದ ಅನುಭವಗಳನ್ನು ಹಂಚಿಕೊಂಡರು.


ಸಿಂಗಾರ ಸುರತ್ಕಲ್‌ನ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ ರಂಗಭೂಮಿ, ಚಲನಚಿತ್ರ, ಧಾರಾವಾಹಿ, ಕಿರು ಚಿತ್ರಗಳ ನಟಿ, ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿ ಗೀತಾ ಸುರತ್ಕಲ್ ವಿಶೇಷ ಕೊಡುಗೆ ನೀಡಿದ್ದಾರೆ ಎಂದರು. 


ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಘಟಕದ ಅಧ್ಯಕ್ಷೆ ಗುಣವತಿ ರಮೇಶ್ ಅವರು ರಂಗ ನಟ ವಿಲ್ ಯೆಮ್ ಡೆಪೊ ನೀಡಿರುವ ಪ್ರಸಕ್ತ ವರ್ಷದ ವಿಶ್ವ ರಂಗಭೂಮಿ ದಿನಾಚರಣೆಯ ಸಂದೇಶವನ್ನು ವಾಚಿಸಿದರು.


ಹಿರಿಯ ಸಂಶೋಧಕಿ ಮತ್ತು ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಡಾ. ಇಂದಿರಾ ಹೆಗ್ಗಡೆ ಅವರು ಗೀತಾ ಸುರತ್ಕಲ್ ಅವರನ್ನು ಅಭಿನಂದಿಸಿದರು.


ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಂಗೀತ ಕಲಾವಿದರ ಒಕ್ಕೂಟ ದ ಅಧ್ಯಕ್ಷ ಧನುರಾಜ್ ಅತ್ತಾವರ, ಸುರತ್ಕಲ್ ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷ ಶ್ರೀಧರ್ ಟಿ. ಎನ್., ಸದಸ್ಯರಾದ ಶ್ರೀನಿವಾಸ ರಾವ್ ಪಿ., ಸಚ್ಚಿದಾನಂದ ಹೊಸಬೆಟ್ಟು, ಸುರತ್ಕಲ್ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಚಂದ್ರ ಮೋಹನ್, ಗೋವಿಂದ ದಾಸ ಕಾಲೇಜಿನ ಎನ್. ಸಿ.ಸಿ. ಅಧಿಕಾರಿ ಮೇಜರ್ ಡಾ. ಸುಧಾ ಶೆಟ್ಟಿ, ಗೋವಿಂದ ದಾಸ ಕಾಲೇಜು ಆಲೂಮ್ನಿ ಅಸೋಸಿಯೇಷನ್ ನ ಕಾರ್ಯದರ್ಶಿ ಶಿರಿಷ್ ಕುಮಾರ್, ಸದಸ್ಯ ಜಗದೀಶ್ ಪಣಂಬೂರು, ತುಳು ಪರಿಷತ್ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಸಂವಾದದಲ್ಲಿ ಪಾಲ್ಗೊಂಡರು. ಸುಜಾತ, ಧನ್ಯ, ತಾರಾ, ಅಮಿತಾ, ಅಮರನಾಥ್, ಜಗದೀಶ್, ಅನಿತಾ ಮತ್ತಿತರರು ಉಪಸ್ಥಿತರಿದ್ದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top