ಸಮಾಜದಲ್ಲಿ ಹಿಂದುತ್ವದ ಪರಿಕಲ್ಪನೆ: ಸಾಂವಿಧಾನಿಕ ನೆಲೆಯಲ್ಲಿ ಮರುಚಿಂತನೆ

Upayuktha
0

ವೈಚಾರಿಕ ಚಿಂತನ ಕಾರ್ಯಕ್ರಮ “ಮಂಥನ” ಮಾ.31ರಂದು ಉಡುಪಿಯಲ್ಲಿ





ಉಡುಪಿ: “ಸಮಾಜದಲ್ಲಿ ಹಿಂದುತ್ವದ ಪರಿಕಲ್ಪನೆ: ಸಾಂವಿಧಾನಿಕ ನೆಲೆಯಲ್ಲಿ ಮರುಚಿಂತನೆ” ವಿಷಯದ ಕುರಿತಾಗಿ ವೈಚಾರಿಕ ಚಿಂತನ ಕಾರ್ಯಕ್ರಮ “ಮಂಥನ”ವನ್ನು ಮಾರ್ಚ್ 31ರಂದು ಉಡುಪಿಯ ಸಂಘದ ಕಾರ್ಯಾಲಯ ಕೇಶವ ನಿಲಯದಲ್ಲಿ ಆಯೋಜಿಸಲಾಗಿದೆ.


ಚಿಂತನಚಾವಡಿ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಉಡುಪಿ ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಂಜೆ 5.30ರಿಂದ 7.00ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕರು ಹಾಗೂ ಪ್ರಜ್ಞಾನಮ್ ಟ್ರಸ್ಟ್ (ರಿ) ಉಡುಪಿ ಟ್ರಸ್ಟಿ ಜಿ. ಪಿ. ಪ್ರಭಾಕರ್ ತುಮರಿ ಮುಖ್ಯ ವಕ್ತಾರರಾಗಿ ಭಾಗವಹಿಸಲಿದ್ದಾರೆ.


ಹಿಂದು ಸಮಾಜದಲ್ಲಿ ವರ್ಣ ಮತ್ತು ಜಾತಿ ಕುರಿತ ಚರ್ಚೆಗಳು ಕಳೆದ ಶತಮಾನಕ್ಕಿಂತ ಹೆಚ್ಚು ಇತಿಹಾಸ ಹೊಂದಿದ್ದು, ಬ್ರಿಟಿಷರ ಕಾಲದಲ್ಲಿ ಜಾತಿ ಗಣತಿಯ ಆರಂಭದಿಂದ ಹಿಡಿದು, ಮೀಸಲಾತಿ ನೀತಿಗಳು, ಮಂಡಲ್ ಆಯೋಗದ ಶಿಫಾರಸುಗಳು ಹಾಗೂ ನಂತರದ ರಾಜಕೀಯ ಬೆಳವಣಿಗೆಗಳವರೆಗೆ ಈ ವಿಚಾರವು ಸಮಾಜ-ರಾಜಕೀಯ ಕ್ಷೇತ್ರದಲ್ಲಿ ಮಹತ್ತರ ಪ್ರಭಾವ ಬೀರಿದೆ. ಇಂತಹ ಹಿನ್ನೆಲೆಯಲ್ಲೇ ಜಾತಿ ಅಸ್ಮಿತೆಯನ್ನು ಮೀರಿದ ಹಿಂದೂ ಅಸ್ಮಿತೆಯ ನಿರ್ಮಾಣದ ಪ್ರಯತ್ನಗಳು ಹಾಗೂ ಅದರ ಸುತ್ತಮುತ್ತಲಿನ ಚರ್ಚೆಗಳು, ಸಂಘರ್ಷಗಳು ಮತ್ತು ಸಾಮಾಜಿಕ ಸಾಮರಸ್ಯದ ಪ್ರಶ್ನೆಗಳು ಪ್ರಮುಖವಾಗಿವೆ.


ಈ ಹಿನ್ನೆಲೆಯಲ್ಲಿ ಹಿಂದುತ್ವದ ಪ್ರತಿಪಾದನೆಯು ಜಾತಿಯಂತಹ ಸೂಕ್ಷ್ಮ ವಿಷಯಗಳನ್ನು ಹೇಗೆ ಸಮರ್ಥವಾಗಿ ಎದುರಿಸಬೇಕು, ಅದರಲ್ಲಿರುವ ಸವಾಲುಗಳು ಮತ್ತು ಅವಕಾಶಗಳು ಯಾವುವು ಎಂಬುದರ ಕುರಿತು ಆಳವಾದ ಚಿಂತನೆ ನಡೆಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.


ಕಾರ್ಯಕ್ರಮದಲ್ಲಿ ಜಾತಿಯನ್ನು “ಸೋಶಿಯಲ್ ಕ್ಯಾಪಿಟಲ್” ಎಂದು ಪರಿಗಣಿಸುವ ಪರಿಕಲ್ಪನೆ, ಜಾತಿಯ ಸಮರ್ಥನೆ ಮತ್ತು ಜಾತೀಯತೆಯ ನಡುವಿನ ವ್ಯತ್ಯಾಸ, ಅಂಬೇಡ್ಕರ್, ಲೋಹಿಯಾ ಮತ್ತು ಗಾಂಧಿ ಅವರ ಚಿಂತನೆಗಳ ತುಲನಾತ್ಮಕ ವಿಶ್ಲೇಷಣೆ, ಹಾಗೂ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಜಾತಿಯ ಪಾತ್ರ ಸೇರಿದಂತೆ ಹಲವು ಪ್ರಮುಖ ಪ್ರಶ್ನೆಗಳ ಬಗ್ಗೆ ಚರ್ಚೆ ನಡೆಯಲಿದೆ.


ಇದಲ್ಲದೆ, ಜಾತಿಯನ್ನು ಸಮಾಜದ “ಫಾಲ್ಟ್‌ಲೈನ್” ಆಗಿ ಬಳಸುವ ರಾಜಕೀಯದ ನಡುವೆಯೂ ಹಿಂದುತ್ವದ ನಿಲುವುಗಳನ್ನು ಸಮತೋಲನದಿಂದ ಹೇಗೆ ರೂಪಿಸಬೇಕು ಎಂಬ ವಿಚಾರವೂ ಸಂವಾದದ ಕೇಂದ್ರವಾಗಿರಲಿದೆ.


ಆಯೋಜಕರು ಜಿಜ್ಞಾಸುಗಳು, ಚಿಂತಕರು ಮತ್ತು ಸಾರ್ವಜನಿಕರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 6362835485 ಅಥವಾ 9448152037 ಸಂಪರ್ಕಿಸಲು ಸೂಚಿಸಲಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top