ಜೀವನಕ್ಕೆ ದಾರಿದೀಪವಾದ ಗುರು

Upayuktha
0

  


"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಈ ಅದ್ಭುತ ಸಾಲುಗಳು ನಿಜಾವಾಗಿಯು ನಮ್ಮೆಲ್ಲರ ಆದರ್ಶ ಬದುಕಿಗೆ ಸ್ಫೂರ್ತಿ. ಓರ್ವ ಶಿಷ್ಯ ತನ್ನ ಅಹಂಕಾರವನ್ನೆಲ್ಲ ಬಿಟ್ಟು, ಸಂಪೂರ್ಣವಾಗಿ ಗುರುಗಳ ಪಾದಕ್ಕೆ ಶರಣಾದಗಾ ಮಾತ್ರ ಆತ ಜೀವನದಲ್ಲಿ ಸುಗಮವಾಗಿ ಮುಂದೆವರಿಯಲು ಸಾಧ್ಯ.ಪ್ರತಿಯೊಬ್ಬರ ಜೀವನದಲ್ಲಿ ಮೊದಲು ಅಕ್ಷರದ ಪಯಣ  ಶುರುವಾಗುವುದು ಅದು' ಅಮ್ಮ' ಎಂಬ ಅಕ್ಷರದಲ್ಲಿ. ಅದನ್ನು ಕೈ ಹಿಡಿದು ಬರೆಸುವವಳು ಕೂಡ ಅವಳೇ. ಹಾಗಾಗಿ ಬದುಕಿನಲ್ಲಿ ಸಿಗುವ ಪ್ರೀತಿಯ ಮೊದಲ ಗುರುವೆಂದರೆ ಅದು ಅಮ್ಮ ಮಾತ್ರ.


ಆಗಷ್ಟೇ ತಾನೇ ಸುಂದರವಾದ  ಬಾಲ್ಯವನ್ನು ದಾಟಿ, ಶಾಲೆಯ ಮೆಟ್ಟಿಲು ಏರಬೇಕೆಂಬ ಭಯ ಒಂದು ಕಡೆಯದರೆ, ಅಮ್ಮನನ್ನು ಬಿಟ್ಟು ಶಾಲೆಗೆ ಹೂಗುವ ಬೇಸರ ಇನ್ನೊಂದು ಕಡೆ. ಶಾಲೆಗೆ ಅಮ್ಮನ ಕೈ ಹಿಡಿದುಕೊಂಡು ಹೋಗುವಾಗ  ಅಳುವನ್ನು ಅಮ್ಮನ ಮುಂದೆ ತೋರಿಸಿಕೊಳ್ಳದೆ ಅವಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಶಾಲೆಗೆ ತಲುಪಿದ ನಂತರ ನನ್ನದೇ ಪ್ರಪಂಚದಲ್ಲಿ ತೊಡಗಿ ನಗುವನ್ನು ಚೆಲ್ಲುತ್ತ, ಗುರಗಳ ಕಡೆಗೆ ಮನಸ್ಸು ಆಕರ್ಷಿಸುವುದು. ಅಮ್ಮನ ನೆನಪುಗಳನ್ನು ಮರೆತು ಅಮ್ಮನ ರೀತಿಯೇ ಪ್ರೀತಿಯನ್ನು ಜೀವನದಲ್ಲಿ ಯಾರು ನೀಡಲು ಸಾಧ್ಯ ಅಲ್ಲವೇ?. ಆದರೆ ಆ ಪ್ರೀತಿಗೆ ಮತ್ತಷ್ಟು ಕಾಳಜಿಯನ್ನು ನೀಡಿ "ಬಾ ಮಗು ಇಲ್ಲಿ ಕೂರು, ಏನಾಯ್ತು ನಿನಗೆ ಇವತ್ತು, ಯಾವತ್ತಿನ ರೀತಿ ನೀನು ಇವತ್ತು ಇಲ್ಲವಲ್ಲ ಏಕೆ " ಎಂದು ಅಮ್ಮನ ರೀತಿಯೇ ಪ್ರೀತಿಯಿಂದ ಕೇಳಿ, ಮನಸಿನಲ್ಲಿ ಮೂಡುವ ನಾನಾ ರೀತಿಯ ಭಾವನೆಗಳಿಗೆ ಅರ್ಥವನ್ನು ನೀಡಿ, ಗೆಲುವಿನ ಕಡೆ ಮುಖಮಾಡಿ ನಿಲ್ಲುವಂತೆ ಪ್ರೇರೇಪಿಸುವರು.


ಅದೊಂದು ದಿನ, ಶಾಲೆಯನ್ನು ತೊರೆದು ಪದವಿ ಶಿಕ್ಷಣಕ್ಕೆ ಕಾಲಿಡುವ ಸಂದರ್ಭದಲ್ಲಿ ಗುರುಗಳ ಆ ಮುಗ್ದತೆಯ ಮುಖಗಳನ್ನು ಕಂಡು ಕಣ್ಣಲ್ಲಿ ಇನ್ನೇನು ಕಂಬನಿ ಹೊರಬೀಳುವ ಮುನ್ನವೇ ಗುರುಗಳು ಬಂದು ನಮ್ಮನ್ನು ಅಪ್ಪಿಕೊಳ್ಳುವರು. ಮನಸಿನಲ್ಲಿ ಗುರುಗಳು ನೀಡಿದ ಪ್ರೀತಿ ಕಾಳಜಿಯನ್ನು ತೂಗು ಹಾಕಿ, ಶಾಲೆಯಿಂದ ಆ ಕೊನೆಯ ದಿನದಂದು ಮನೆಗೆ ಬರುವ ಮೊದಲು ಒಂದು ಬಾರಿ ಹಿಂದೂರಿಗಿ ಶಾಲೆಯನ್ನು ನೋಡುತ್ತಾ. " ಅದೆಷ್ಟೋ ನೆನಪುಗಳ ಬೀಜವನ್ನು ಬಿತ್ತಿದೇ ಇಲ್ಲಿ, ಆದರೆ ಆ ಬೀಜದಿಂದ ದೊರೆತ ಹೂವನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದೇನೆ, ಆದರೆ ಆ ಬೀಜ ಮಾತ್ರ ಇಲ್ಲೇ ಇರುವಾಗೆ ಆಯ್ತಾಲ್ವಾ "ಎಂದು ಅನಿಸಿ ಮನಸಿನಲ್ಲಿ ಹೇಳಿಕೊಳ್ಳಲಾರದಷ್ಟು ನೋವಿದ್ದರೂ ಅದನ್ನು ವಿದ್ಯೆ ದಾರೆಯೆಳೆದು  ಕೊಟ್ಟ ಗುರುಗಳ ಎದುರು ತೋರಿಸಿಕೊಳ್ಳದೆ ನಗುಮುಖದಿಂದಲೇ ಶಾಲೆಯಿಂದ ಹೊರಬರುವುದು.


ಜೀವನದಲ್ಲಿ ಕಲಿಕೆಯ ಸೃಷ್ಟಿ ಆರಂಭವಾಗುವುದೇ ಗುರುಗಳಿಂದ. ಜೀವನದ ಸರಿ ತಪ್ಪುಗಳನ್ನು ಕಲಿಸಿಕೊಟ್ಟ ಗುರುಗಳಿಗೆ ನಾವೇನಾದರೂ ಕೊಡಲು ಬಯಸಿದರೆ ಅದು ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಿ ಬದುಕಿ  ಮತ್ತು ಯಾರಿಗೂ ಕೆಟ್ಟದನ್ನು ಬಯಸದೆ ಆದರ್ಶ ವ್ಯಕ್ತಿಯಾಗಿ ಈ ಸಮಾಜವನ್ನು ಎದುರಿಸುವುದು. ಜೀವನದ ಪಾಠಗಳನ್ನು ಮತ್ತು ಬದುಕಿನಲ್ಲಿ ಸಂಭವಿಸುವ ಅನೇಕ ತರಹದ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿದ, ಅಮ್ಮ ಮತ್ತು ಗುರುಗಳು ಪ್ರತಿಯೋಬ್ಬರ ಜೀವನ ದಾರಿದೀಪಗಳು.


-ಶಿಲ್ಪಾ ಆದಪ್ಪ ಗೌಡ 

ದಿಡುಪೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top