ತಾಯಿಯ ರೂಪದ ದೇವತೆ

Upayuktha
0


ಬಾಲ್ಯದಲ್ಲಿ ಕೈ ಹಿಡಿದು ನಡೆಸಿದವಳು ಆಕೆ.

ಒಂದು ಅಕ್ಷರವನ್ನೂ ಬರೆಯಲಾಗದೆ ಇದ್ದಾಗ,

ಕೈ ಹಿಡಿದು ಒಂದೊಂದು ಅಕ್ಷರ ಬರೆಸಿದವಳು ಆಕೆ.

ಜನರೊಂದಿಗೆ ಹೇಗೆ ವರ್ತಿಸಬೇಕು,

ಯಾರಿಗೆ ಗೌರವ ಕೊಡಬೇಕು ಎಂದು ಬೋಧಿಸಿದವಳು ಕೂಡ ಆಕೆ.


ನಾನು ಊಟ ಮಾಡಲು ಬರದೆ ಇದ್ದಾಗ ಕೈತುತ್ತು ನೀಡಿ ತಾಯಿಯ ಮಮತೆ ತೋರಿಸಿದವಳು ಆಕೆ.ತಾಯಿ ಎಂದರೆ ಸಹನೆಯ ಸಮುದ್ರ. ಅವಳು ತನ್ನ ನೋವನ್ನು ಹೃದಯದೊಳಗೇ ಇಟ್ಟುಕೊಂಡು, ನಮಗೆ ಸಂತೋಷ ಸಿಗಲಿ ಎಂದು ಯಾವ ತ್ಯಾಗವನ್ನಾದರೂ ಮಾಡುತ್ತಾಳೆ.ತಾನು ಹೊಟ್ಟೆ ತುಂಬಾ ಊಟ ಮಾಡುತ್ತಾಳೋ ಬಿಡುತ್ತಾಳೋ ಗೊತ್ತಿಲ್ಲ ಆದರೆ ತನ್ನ ಮಗುವನ್ನು ಹಸಿದ ಹೊಟ್ಟೆಯಲ್ಲಿ ಯಾವತ್ತೂ ಮಲಗಲು ಬಿಡುವುದಿಲ್ಲಬಾಳಿನಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು


ಎಂಬುದನ್ನು ತಿಳಿಸಿ ದಾರಿತೋರಿಸಿದವಳು ಆಕೆ.ವಯಸ್ಸು ಹೆಚ್ಚಾದಂತೆ ಆಕೆಯ ಕೈಯನ್ನು ಹೇಗೆ ಬಿಡಲು ಸಾಧ್ಯ?ನನ್ನನ್ನು ಸಾಕಿ ಬೆಳೆಸಿದ ಆ ತಾಯಿ ಬಯಸೋದು ಒಂದೇ ತನ್ನ ಮಗಳು ಚೆನ್ನಾಗಿ ಓದಿ,ಒಳ್ಳೆಯ ಕೆಲಸ ಪಡೆದು,ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಲಿ ಎಂಬುದು ಮನೆಯ ಜವಾಬ್ದಾರಿಯನ್ನೂ,ಮಕ್ಕಳ ಜವಾಬ್ದಾರಿಯನ್ನೂ ಹೊತ್ತು ಸಾಗುವ ಆಕೆಯನ್ನು“ಅಮ್ಮಾ, ನೀನು ಹೇಗಿದ್ದಿಯಾ?” ಎಂದು ಯಾರೂ ಕೇಳುವುದಿಲ್ಲ.ತನ್ನೊಳಗೆ ಸಾವಿರ ನೋವು–ಕಷ್ಟಗಳಿದ್ದರೂ,ಮಕ್ಕಳ ಮುಂದೆ ಒಂದನ್ನೂ ತೋರಿಸದೆನಗುಮುಖದಿಂದ ಬದುಕುವ ಆಕೆ ನಿಜವಾದ ದೇವತೆ...


ತಾಯಿಯ ತ್ಯಾಗಕ್ಕೆ ಬೆಲೆ ಇಲ್ಲ,

ಅವಳ ಪ್ರೀತಿಗೆ ಅಳತೆ ಇಲ್ಲ.

ನಮ್ಮ ಬದುಕಿನ ಮೊದಲ ಗುರು,

ಮೊದಲ ಸ್ನೇಹಿತೆ, ಮೊದಲ ದೇವತೆ 

ಅವಳೇ ನಮ್ಮೆಲ್ಲರ ತಾಯಿ.



-ರಮ್ಯಾ ನಾಯ್ಕ್,

ಎಸ್.ಡಿ.ಎಂ. ಕಾಲೇಜ್‌ ಉಜಿರೆ


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top