ಟಿಸಿಎಸ್ ಟೆಕ್‍ಬೈಟ್ಸ್ ಕ್ವಿಜ್; ನೋಂದಣಿ ಆರಂಭ

Upayuktha
0



ಮಂಗಳೂರು: ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ 'ಬೋರ್ಡ್ ಫಾರ್ ಐಟಿ ಎಜುಕೇಶನ್ ಸ್ಟ್ಯಾಂಡಡ್ರ್ಸ್' (ಬೈಟ್ಸ್) ಜಂಟಿಯಾಗಿ ಆಯೋಜಿಸುವ ಪ್ರತಿಷ್ಠಿತ ಎಂಜಿನಿಯರಿಂಗ್ ಐಟಿ ಕ್ವಿಜ್ 'ಟಿಸಿಎಸ್ ಟೆಕ್-ಬೈಟ್ಸ್' ನ 17ನೇ ಆವೃತ್ತಿಗೆ ಚಾಲನೆ ನೀಡಲಾಗಿದೆ. ಈ ಕ್ವಿಜ್ ಗೆ ಅಧಿಕೃತವಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳು (ಬಿಇ/ ಬಿಟೆಕ್) ತಮ್ಮ ತಾಂತ್ರಿಕ ಜ್ಞಾನ ಪ್ರದರ್ಶಿಸಬಹುದು.


ವಿನೂತನ ತಾಂತ್ರಿಕ ಕ್ಷೇತ್ರಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಆ ಮೂಲಕ ಇಂದಿನ ವೇಗವಾಗಿ ಬೆಳೆಯುತ್ತಿರುವ, ತಂತ್ರಜ್ಞಾನ ಆಧರಿತ ಉದ್ಯಮದಲ್ಲಿ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಸ್ಪರ್ಧಿಸಲು ಶಕ್ತರನ್ನಾಗಿಸುವುದು ಇದರ ಉದ್ದೇಶವಾಗಿದೆ. ಪ್ರತಿ ಶಿಕ್ಷಣ ಸಂಸ್ಥೆಯು ಕ್ವಿಜ್ ನ ಪ್ರಾದೇಶಿಕ ಹಂತದ ಫೈನಲ್ ನಲ್ಲಿ ಭಾಗವಹಿಸಲು 10 ತಂಡಗಳನ್ನು (ಪ್ರತಿ ತಂಡದಲ್ಲಿ 2 ವಿದ್ಯಾರ್ಥಿಗಳು) ಕಳುಹಿಸಬಹುದು. ಭಾಗವಹಿಸುವಿಕೆಗೆ ಶುಲ್ಕ ಇರುವುದಿಲ್ಲ. ಪ್ರವೇಶ ಪತ್ರಗಳನ್ನು ಆಯಾ ಸಂಸ್ಥೆಗಳು ಏಪ್ರಿಲ್ 13, 2026 ರಂದು ಅಥವಾ ಅದಕ್ಕೂ ಮೊದಲು manager@bites.org.in ಗೆ ಕಳುಹಿಸಬೇಕು.


ಮಂಗಳೂರು ವಲಯ ಮಟ್ಟದ ಸ್ಪರ್ಧೆ ಏಪ್ರಿಲ್ 22 ನಡೆಯಲಿದ್ದು, ಅಂತಿಮ ಹಂತದ ಸ್ಪರ್ಧೆಯು ಮೇ 5 ರಂದು ಬೆಂಗಳೂರಿನಲ್ಲಿ ಜರುಗಲಿದೆ. ರಾಜ್ಯ ಮಟ್ಟದ ಅಂತಿಮ ಸ್ಪರ್ಧೆಯ ವಿಜೇತರು ಮತ್ತು ದ್ವಿತೀಯ ಸ್ಥಾನ ವಿಜೇತರಿಗೆ ಕ್ರಮವಾಗಿ ರೂ. 85,000 ಮತ್ತು ರೂ. 50,000 ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿವೇತನ ಸೇರಿದಂತೆ ಇತರ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ www.bites.org.in ಗೆ ಭೇಟಿ ನೀಡಿ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top