ಮಂಗಳೂರು: NGSM ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ನಿಟ್ಟೆ (ಡೀಮ್ಡ್ ಟು ಯುನಿವರ್ಸಿಟಿ), ಮಂಗಳೂರು ಮತ್ತು ಸೊಸೈಟಿ ಆಫ್ ಎಥ್ನೋಫಾರ್ಮಕಾಲಜಿ, ಇಂಡಿಯಾದ ಸಹಯೋಗದಲ್ಲಿ ಬುಧವಾರ 25 ನೇ ಮಾರ್ಚ್ 2026 ರಂದು ದೇರಳಕಟ್ಟೆ ಪನೀರ್ ಕ್ಯಾoಪಸ್ ನಲ್ಲಿರುವ ನಿಟ್ಟೆ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಮುಂಜಾನೆ 9-30 ರಿಂದ ನಡೆಸಲಾದ ಎತ್ ನೋ ಮೆಡಿಸಿನ್ ಮತ್ತು ಎವಿಡೆನ್ಸ್ ಆಧಾರಿತ ಅಭ್ಯಾಸ ಎಂಬ ವಿಚಾರದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸೊಸೈಟಿ ಆಫ್ ಎಥ್ನೋಫಾರ್ಮಕಾಲಜಿ, ಮಂಗಳೂರು ವಿಭಾಗ ಇದರ ಅಧ್ಯಕ್ಷರೂ ಪಿ.ಎ. ಕಾಲೇಜ್ ಆಫ್ ಫಾರ್ಮಸಿ, ಮಂಗಳೂರು ಪ್ರಾಂಶುಪಾಲರೂ ಅದ ಪ್ರೊ. (ಡಾ.) ಸಲೀಮುಲ್ಲಾ ಖಾನ್ ಮತ್ತು ಗೌರವ ಅತಿಥಿಗಳಾಗಿ ಡಾ ಸುಧೀರ್ ರಾಜ್ ಕೆ (ಪ್ರೊಫೆಸರ್ ಮತ್ತು ನಿರ್ದೇಶಕರು, ಸೆಂಟರ್ ಫಾರ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ) ಇವರು ಭಾಗವಹಿಸಿದ್ದರು. ಪ್ರೊ. (ಡಾ) ಸಿ.ಎಸ್.ಶಾಸ್ತ್ರಿ ನಿರ್ದೇಶಕರು (ಸಂಶೋಧನೆ ಮತ್ತು SIಗಳು), NGSMIPS) ಇವರು ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಆಯುರ್ವೇದ ವೈದ್ಯಕೀಯ ದಲ್ಲಿ ಅಪಾರ ಸಾಧನೆ ಮಾಡಿರುವ ಕಣಚೂರು ಆಯುರ್ವೇದ ಕಾಲೇಜಿನಲ್ಲಿ ಮುಖ್ಯ ಸಲಹೆಗಾರ ಮತ್ತು ಮಂಗಳಾ ಆಸ್ಪತ್ರೆಯಲ್ಲಿ ಶಸ್ತ್ರ ಹಾಗೂ ಕ್ಷಾರ ಚಿಕಿತ್ಸಾ ತಜ್ಞರಾಗಿರುವ ಡಾ ಸುರೇಶ ನೆಗಳಗುಳಿ ಮತ್ತು ಇನ್ನೋರ್ವ ಸಾಧಕ ವಿಟ್ಲ ಸಮೀಪದ ಡಾ ಜೆಡ್ಡು ಗಣಪತಿ ಭಟ್ ಇವರನ್ನು ಶಾಲು ಹಾರ ಫಲಕ ಸಹಿತವಾಗಿ ಸನ್ಮಾನಿಸಲಾಯಿತು.
ಆಯುರ್ವೇದ ಆದಿಯಿಂದ ಇಂದಿನ ವರೆಗೆ ನಡೆದು ಬಂದ ಹಾದಿಯ ಬಗ್ಗೆ ಮತ್ತು ವಿಜ್ಞಾನಕಲೆ ಹಾಗೂ ಋಷಿವಾಕ್ಯದ ಮಹತ್ವ ವನ್ನು ಅವರು ವಿವರಿಸಿದರು.
ಆಳ್ವಾಸ್ ಆಯುರ್ವೇದ ಕಾಲೇಜಿನ ಡೀನ್ ಡಾ ಎಂ.ಎಸ್ ಕೃಷ್ಣಮೂರ್ತಿ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಪ್ರಾಂಶುಪಾಲರಾದ ಪ್ರೊ. (ಡಾ.) ಮರೀನಾ ಕೋಲ್ಯಾಂಡ್ ಸಂಚಾಲಕತ್ವ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಎ.ಎಸ್. ಪ್ರಸನ್ನ ಶಾಮ ಖಂಡಿಗೆ ಮತ್ತು ಸಹಾಯಕ ಪ್ರೊಫೆಸರ್, ಡಾ ಎ ಎಸ್ ಸಂತನು ಸಂಯೋಜನೆಯಲ್ಲಿ ಕಾರ್ಯಾಗಾರವು ಯಶಸ್ವಿಯಾಗಿ ನೆರವೇರಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

