ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯವು, "ವಿಜ್ಞಾನದಲ್ಲಿ ಮಹಿಳೆಯರು - ವಿಕಾಸಿತ ಭಾರತವನ್ನು ವೇಗಗೊಳಿಸುವುದು" ಎಂಬ ವಿಷಯದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಫೆಬ್ರವರಿ 27, 2026 ರಂದು ವಿಶ್ವವಿದ್ಯಾಲಯದ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಆಯೋಜಿಸಿತು.
ಮಂಗಳೂರಿನ ಡಾ. ಪಿ. ದಯಾನಂದ ಪೈ - ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಮತ್ತು ಸಸ್ಯಶಾಸ್ತ್ರದ ಪ್ರಾಧ್ಯಾಪಕರಾದ ಪ್ರೊ. ಜಯಕರ ಭಂಡಾರಿ ಮುಖ್ಯ ಅತಿಥಿಯಾಗಿದ್ದರು. ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ರಾಸಾಯನಿಕ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಪ್ರೊ. ವಿದ್ಯಾ ಶೆಟ್ಟಿ ಗೌರವ ಅತಿಥಿಯಾಗಿದ್ದರು. ಅಲೋಶಿಯಸ್ ವಿವಿಯ ಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಲೋಶಿಯಸ್ ವಿವಿಯ ಸಹಕುಲಪತಿ ರೆ.ಡಾ. ಮೆಲ್ವಿನ್ ಡಿ.ಕುನ್ಹಾ, ಎಸ್.ಜೆ., ವಿವಿಯ ರಿಜಿಸ್ಟ್ರಾರ್ ಡಾ. ರೊನಾಲ್ಡ್ ನಜರೆತ್, ಎಂಜಿನಿಯರಿಂಗ್ ಡೀನ್ ಡಾ. ರೂಬನ್ ಎಸ್., ಕ್ಸೇವಿಯರ್ ಬ್ಲಾಕ್‌ನ ನಿರ್ದೇಶಕಿ ಡಾ. ಅರುಣಾ ಕಲ್ಕುರ ಟಿ., ಎಲ್‌ಸಿಆರ್‌ಐ ಬ್ಲಾಕ್‌ನ ನಿರ್ದೇಶಕಿ ಡಾ. ಆಶಾ ಅಬ್ರಹಾಂ, ಕಾರ್ಯಕ್ರಮದ ಸಂಚಾಲಕಿ ಡಾ. ಜ್ಯೋತಿ ಮಿರಾಂಡಾ, ಸಹ ಸಂಚಾಲಕಿ ಡಾ. ಗೀತಾ ಪಿಂಟೊ, ಜೀವ ವಿಜ್ಞಾನದ ಡೀನ್ ಡಾ. ರೆನಿಟಾ ಮರಿಯಾ ಡಿ.ಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೊ. ಜಯಕರ ಭಂಡಾರಿ ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಸಂಶೋಧನಾ ಸಂಸ್ಕೃತಿಯ ಪಾತ್ರವನ್ನು ಒತ್ತಿ ಹೇಳಿದರು. ವೈಜ್ಞಾನಿಕ ಕ್ಷೇತ್ರಗಳಲ್ಲಿ ಮಹಿಳೆಯರು ನಾಯಕತ್ವ ವಹಿಸಿಕೊಳ್ಳಲು ಪ್ರೋತ್ಸಾಹಿಸುವ ಬಗ್ಗೆಯೂ ಅವರು ಮಾತನಾಡಿದರು.
ಪ್ರೊ. ವಿದ್ಯಾ ಶೆಟ್ಟಿ ರಾಷ್ಟ್ರೀಯ ವಿಜ್ಞಾನ ದಿನದ ವಿಷಯದ ಕುರಿತು ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಸರ್ ಸಿ.ವಿ. ರಾಮನ್ ಅವರ ಸಂಶೋಧನೆಗಳನ್ನು ಸ್ಮರಿಸಿದರು. ಅವರು STEM ನಲ್ಲಿ ಮಹಿಳೆಯರ ವಿವಿಧ ಕೊಡುಗೆಗಳ ಕುರಿತು ಮಾತನಾಡಿದರು.
ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಅವರು ತಮ್ಮ ಭಾಷಣದಲ್ಲಿ, ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ವೈದ್ಯಕೀಯದಲ್ಲಿ ವ್ಯಾಪಕ ಶ್ರೇಣಿಯ ಅನ್ವಯಿಕೆಗಳನ್ನು ಹೊಂದಿರುವ ರಾಮನ್ ಸ್ಪೆಕ್ಟ್ರೋಸ್ಕೋಪಿಯ ಬಗ್ಗೆ ವಿವರಿಸಿದರು. ಅವರು ದಿವಂಗತ ರೆವರೆಂಡ್ ಡಾ. ಲಿಯೋ ಡಿ'ಸೋಜಾ ಎಸ್.ಜೆ. ಮತ್ತು ಅವರ ವಿವಿಧ ವೈಜ್ಞಾನಿಕ ಸಾಧನೆಗಳನ್ನು ಸ್ಮರಿಸಿದರು.
ಡಾ. ರೊನಾಲ್ಡ್ ನಜರೆತ್ ಸಂಶೋಧನೆಯಲ್ಲಿ ಉತ್ಸಾಹ ಮತ್ತು ಕುತೂಹಲದ ಮಹತ್ವದ ಬಗ್ಗೆ ಮಾತನಾಡಿದರು ಮತ್ತು ವಿದ್ಯಾರ್ಥಿಗಳಲ್ಲಿ ನಾವೀನ್ಯತೆಯ ಅಗತ್ಯವನ್ನು ಒತ್ತಿ ಹೇಳಿದರು.
ಕಾರ್ಯಕ್ರಮದ ಸಂದರ್ಭದಲ್ಲಿ, ಇತ್ತೀಚೆಗೆ ನಿಧನರಾದ ವಿಶ್ವಪ್ರಸಿದ್ಧ ವಿಜ್ಞಾನಿ ಮತ್ತು ಅಲೋಶಿಯಸ್ ಕಾಲೇಜಿನ ಮಾಜಿ ಪ್ರಾಂಶುಪಾಲ ದಿ. ರೆ. ಡಾ. ಲಿಯೋ ಡಿ'ಸೋಜಾ ಎಸ್.ಜೆ. ಅವರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅನ್ವಯಿಕ ಜೀವಶಾಸ್ತ್ರ ಪ್ರಯೋಗಾಲಯದ ಸಂಶೋಧನಾ ಸಂಯೋಜಕಿ ಡಾ. ಶಶಿಕಿರಣ್ ನಿವಾಸ್ ಅವರು ದಿ. ಡಾ.ಲಿಯೋ ಡಿ'ಸೋಜಾ ಎಸ್.ಜೆ. ಬಗ್ಗೆ ಮಾತನಾಡಿದರು ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಅಕ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಜ್ಯೋತಿ ಮಿರಾಂಡಾ ಸ್ವಾಗತಿಸಿದರು. ಅಸೋಸಿಯೇಟ್ ಡೀನ್ ಡಾ. ಗೀತಾ ಪಿಂಟೊ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


