ರೋಟರಿ ಕ್ಲಬ್ ಹಿಲ್‌ಸೈಡ್‌ ನಿಂದ ಮುಲ್ಲಕಾಡು ಶಾಲೆಗೆ ಲೋಹದ ಮೇಲ್ಛಾವಣಿ ಕೊಡುಗೆ

Upayuktha
0


ಮಂಗಳೂರು: ರೋಟರಿ ಕ್ಲಬ್ ಆಫ್ ಮಂಗಳೂರು ಹಿಲ್‌ಸೈಡ್ ಇವರು ತಾವು ದತ್ತು ಪಡೆದಿರುವ ಸರ್ಕಾರಿ ಹೈಸ್ಕೂಲ್, ಮುಲ್ಲಕಾಡು ಶಾಲೆಯಲ್ಲಿ ಪ್ರತಿವರ್ಷವೂ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ವಿವಿಧ ಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿರುತ್ತಾರೆ.


ಇತ್ತೀಚೆಗೆ, ಇವರು ರೋಟರಿ ಜಿಲ್ಲಾ ಅನುದಾನದ ಅಡಿಯಲ್ಲಿ, ಶಾಲೆಯ ಮುಂಭಾಗದ ಮೊಗಸಾಲೆಯಲ್ಲಿ ನಿಲ್ಲುವ ವಿದ್ಯಾರ್ಥಿಗಳನ್ನು ಬಿಸಿಲಿನಿಂದ ರಕ್ಷಿಸುವ ಉದ್ದೇಶದಿಂದ ಲೋಹದ ಮೇಲ್ಛಾವಣಿ ಆಶ್ರಯವನ್ನು ಕಲ್ಪಿಸಿದ್ದು, ಈ ಯೋಜನೆಯನ್ನು ರೋ. ರಾಮಕೃಷ್ಣ ಪಿ.ಕೆ. (ಜಿಲ್ಲಾ ಗವರ್ನರ್), ರೋಟರಿ ಜಿಲ್ಲೆ 3181 ಯವರು ಉದ್ಘಾಟಿಸಿದರು. 


ಶಾಲಾ ಮುಖ್ಯೋಪಾಧ್ಯಾಯರಾದ ಜಿ. ಉಸ್ಮಾನ್ ಅವರು ಇದೊಂದು ಅತ್ಯಂತ ಅರ್ಥಪೂರ್ಣ ಹಾಗೂ ಬಹಳ ಉಪಯುಕ್ತ ಯೋಜನೆಯಾಗಿದ್ದು, ನಮ್ಮ ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಮಹತ್ತರವಾದ ಪ್ರಯೋಜನವನ್ನು ತಂದಿದೆ ಎಂದರು.


ರೋಟರಿ ಕ್ಲಬ್ ಆಫ್ ಮಂಗಳೂರು ಹಿಲ್‌ಸೈಡ್ ಇದರ ಅಧ್ಯಕ್ಷರಾದ ರೋ.ಪೀಟರ್ ಅಂತೋನಿ ಪಿoಟೋ, ಕಾರ್ಯದರ್ಶಿ ರೋ.ವಾಸುದೇವ ಶೆಟ್ಟಿಗಾರ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವೀಣಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಗೀತಾ ಲಕ್ಷ್ಮೀಶ್, ರೋಟರಿ ಸದಸ್ಯರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top