ಪಾಕಶಾಸ್ತ್ರ ಪ್ರವೀಣ ಗೋಪಾಲಕೃಷ್ಣ ಅಂಗಿತ್ತಾಯ ನಿಧನ

Upayuktha
0


ಪುತ್ತೂರು: ಪುತ್ತೂರು ಅಂಗಿಂಜದ ಅಂಗಿತ್ತಾಯ ಕುಟುಂಬದ ಹಿರಿಯರಾದ ಶ್ರೀ ಗೋಪಾಲಕೃಷ್ಣ ಅಂಗಿತ್ತಾಯರು (92) ಇಂದು ಬೆಳಗ್ಗೆ ನಿಧನರಾದರು.


ಪುತ್ತೂರು ಆಸುಪಾಸಿನಲ್ಲಿ ಪಾಕಶಾಸ್ತ್ರ ಪ್ರವೀಣರಾಗಿ ಎಲ್ಲರ ಅಚ್ಚುಮೆಚ್ಚಿನ “ಗೋಪಣ್ಣ” ಎಂದೇ ಪ್ರಸಿದ್ಧರಾಗಿದ್ದ ಅವರು, ಅನೇಕ ದೇವಸ್ಥಾನಗಳ ಜಾತ್ರಾ ಮಹೋತ್ಸವಗಳಲ್ಲಿ ಅಡುಗೆ ಮಾಡಿ ಭಕ್ತರ ಮನ ಗೆದ್ದಿದ್ದರು. ಅಂಗಿತ್ತಾಯರ ಮಜ್ಜಿಗೆ ಹುಳಿ, ಮೆಣಸ್ಕಾಯಿ ಖಾದ್ಯ ಮತ್ತು ಕಡ್ಲೆಬೇಳೆ ಹೋಳಿಗೆಗೆ ನೀಡಿದ ಹೊಸ ರೂಪ ವಿಶೇಷ ಖ್ಯಾತಿ ಪಡೆದಿತ್ತು.


ಮೃತರು ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪವಿತ್ರ ಪಾಣಿ ಆಗಿಯಾಗಿದ್ದರು. ಅವರ ಸಂಪ್ರದಾಯವನ್ನು ಮಕ್ಕಳು ಮುಂದುವರಿಸಿಕೊಂಡು ಬಂದಿದ್ದಾರೆ.


ಮೃತರು ಇಬ್ಬರು ಪುತ್ರರಾದ ಉದಯ ಅಂಗಿತ್ತಾಯ ಮತ್ತು ವಿಷ್ಣು ಅಂಗಿತ್ತಾಯ ಹಾಗೂ ಇಬ್ಬರು ಪುತ್ರಿಯರಾದ ಗೀತಾ ಮತ್ತು ಲತಾ ಅವರನ್ನು ಅಗಲಿದ್ದಾರೆ.


ಕುಟುಂಬಸ್ಥರು ಹಾಗೂ ಅಪಾರ ಬಂಧುಬಳಗಕ್ಕೆ ಅವರ ನಿಧನವು ಅಪಾರ ನಷ್ಟ ಉಂಟುಮಾಡಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top