ಕಪ್ಪು ಹಲಗೆಯಲಿ ಬಿಳಿ ರೇಖೆಗಳ ಮಾಯೆ,
ಕಂಡಾಕ್ಷಣ ಮೂಡಿತು ಭಕ್ತಿಯ ಛಾಯೆ.
ಕಿರೀಟಧಾರಿ ಶ್ರೀರಾಮ ಚಂದ್ರನ ನಗುಮುಖ,
ನೋಡುತಲೆ ನೀಡಿತು ಎನ್ನ ಮನಕೆ ಸುಖ ll೦೧ll
ಹೆಗಲಲಿ ಧನುಸ್ಸು, ಬತ್ತಳಿಕೆಯಲಿ ಬಾಣ,
ದುಷ್ಟರ ಸಂಹಾರಕೆ ಸನ್ನದ್ಧನಾದ ಪ್ರಾಣ.
ಕುಳಿತಿರುವ ಭಂಗಿ ತೋರುತಿದೆ ನಿಶ್ಚಲತೆ,
ಹೃದಯದಲಿ ಮೂಡಿಸಿದೆ ಅಪಾರ ಭಕ್ತಿ ಭಾವನೆ ll೦೨ll
'ಜಯ ಶ್ರೀ ರಾಮ' ಎಂಬ ಮಂತ್ರದ ಉಸಿರು,
ಭಯವನೆಲ್ಲಾ ನೀಗಿ, ಹರಿಸಲಿ ಹೊಸ ಹಸಿರು.
ಪುಷ್ಪಗಳ ಅಂದ, ಪ್ರೇಮದ ಸಂಕೇತ,
ಶ್ರೀರಾಮನ ಪಾದಕೆ ಭಕ್ತಿಯ ಹೂವಿನ ಕೃತ ll೦೩ll
ದೀಪದ ಕಳೆಯಂತೆ ಬೆಳಗಲಿ ನಿನ್ನ ನಾಮ,
ಹೃದಯದ ಮಂದಿರದಿ ನೆಲೆಸು ನೀ ರಾಮ.
ರೂಪದ ಈ ಕೃತಿ, ಭಕ್ತಿಯಾ ಪರಮಾರ್ಥ,
ನಮ್ಮ ಬಾಳ ಪಥಕೆ ನೀನೆ ಸಾಕ್ಷಾತ್ ಸಾರ್ಥ ll೦೪ll
- ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


