ರಾಧಾ -ಕೃಷ್ಣ ಪ್ರೇಮ ಸುಧೆ

Upayuktha
0



ಯಮುನಾ ತೀರದ ಮರಳಿನ ಮೇಲೆ,

ಕೃಷ್ಣನ ಕೊಳಲಿನ ಇಂಪಾದ ಲೀಲೆ.

ನೀಲಿ ಮೇಘದ ಬಣ್ಣದ ದೇವ,

ರಾಧೆಯ ಎದೆಯಲಿ ಅನುದಿನವೂ ಇವ ll೦೧ll 


ಬೃಂದಾವನದ ಹಸಿರ ಸಿರಿಯಲಿ,

ಕೃಷ್ಣನ ನೆನಪೇ ರಾಧೆಯ ಉಸಿರಲಿ.

ಬಣ್ಣದ ಬದುಕಿನ ಬಂಗಾರದಾಟ,

ಅವರದೇ ಪ್ರೇಮದ ಅದ್ಭುತ ಪಾಠ ll೦೨ll 


ಕೊಳಲಿನ ದನಿಗೆ ರಾಧೆಯು ಮರುಳು,

ಬೆಳದಿಂಗಳಲಿ ಬೆಳಗಿತು ಇರುಳು.

ಪದಗಳ ಹಂಗಿಲ್ಲದ ಮೌನದ ಭಾಷೆ,

ದೈವಿಕ ಪ್ರೇಮದ ಅರಿಯದ ಆಸೆ ll೦೩ll 


ಹೃದಯದ ಅರಮನೆ ಇಬ್ಬರಿಗೂ ಒಂದು,

ಬೇರ್ಪಡಲಾರದು ಜನ್ಮಗಳ ಬಂಧು.

ರಾಧೆಯ ಹೆಸರಲಿ ಕೃಷ್ಣನ ನಗುವು,

ಜಗತ್ತಿನ ಶ್ರೇಷ್ಠ ಪ್ರೇಮದ ಹೂವು ll೦೪ll 


- ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top