ಕವನ: ಬೆಳಕಿನ ಪಯಣ

Upayuktha
0




​ಹರಳಿದ ಕಮಲದ ಪೀಠದ ಮೇಲೆ,

ಮಿನುಗುವ ದೀಪದ ಸುಮಧುರ ಲೀಲೆ.

ಕತ್ತಲ ಸರಿಸಿ ಬೆಳಗುವ ಜ್ಯೋತಿ,

ತರುವುದು ನಮಗೆ ಶಾಂತಿಯ ಪ್ರೀತಿ. [೦೧]


​ಕೆಸರಲಿ ಹುಟ್ಟಿದ ಕಮಲದ ಅಂದ,

ಜಗವನೇ ಮರೆಸುವ ಪಾವನ ಚಂದ.

ಬಾಳಿನ ದಾರಿಗೆ ಜ್ಞಾನದ ದೀಪ,

ದೂರವು ಮಾಡಲಿ ಅಜ್ಞಾನದ ತಾಪ. [೦೨]


​ಹೃದಯದ ದೇವಸ್ಥಾನದಲಿ ಹಚ್ಚೋಣ ಹಣತೆ,

ತೀರಲಿ ಎಲ್ಲರ ಮನದಲಿರುವ ಕೊರತೆ.

ಸತ್ಯದ ಬೆಳಕು ಸದಾಕಾಲ ಇರಲಿ,

ನಮ್ಮಯ ಬಾಳು ನಂದನವನವಾಗಲಿ. [೦೩]


- ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top