ನೆಟ್ಟಣಿಗೆ ದೇವಳ ಜಾತ್ರೆ; ಸಾಂಸ್ಕೃತಿಕ ಕಾರ್ಯಕ್ರಮ

Upayuktha
0


ಕಾಸರಗೋಡು: ಕಾಸರಗೋಡು ಜಿಲ್ಲೆಯ ವಿಶಿಷ್ಟ ಮತ್ತು ವಿಭಿನ್ನವಾದ ಆಚರಣೆಗಳುಳ್ಳ ನೆಟ್ಟಣಿಗೆ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಮಹೋತ್ಸವವು ಮಾರ್ಚ್ ಮೂರರಿಂದ ಏಳರವರೆಗೆ ವೈಭವಯುತವಾಗಿ ನೆರವೇರಿತು.


ಈ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಕನ್ನಡನಾಡಿನ ಪ್ರಖ್ಯಾತ ಕಾಸರಗೋಡು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕ್ರತಿಕ ಸಂಸ್ಥೆಯ ವತಿಯಿಂದ ದೇವಳದ ಶ್ರೀ ವೇದಿಕೆಯಲ್ಲಿ 187 ನೇ ಸಾಹಿತ್ಯ ನೃತ್ಯ ಮತ್ತು ಗಾನಸಿರಿ ಕಾರ್ಯಕ್ರಮವು ಜರಗಿತು. ಗಡಿನಾಡ ಕನ್ನಡ ಸಾಂಸ್ಕ್ರತಿಕ ಸಂಸ್ಥೆ ಯ ಅಧ್ಯಕ್ಷರಾದ ಡಾ. ವಾಣಿಶ್ರೀಯವರು ಕಾರ್ಯಕ್ರಮಗಳನ್ನು ಸಾದರಪಡಿಸಿದರು.


ಸಂಸ್ಥೆಯ ಗಾನಕೋಗಿಲೆ  ಶ್ರೀಮತಿ ಸ್ಮಿತಾ, ಹಿರಿಯ ಕಲಾವಿದರು ಮೋಹನ್ ಆಚಾರ್ಯ, ಸೀತಾರಾಮ್, ಅಮೃತ್, ಸೌಮ್ಯ, ಐಶ್ವರ್ಯ, ಜಾಹ್ನವಿ, ಆತ್ಮೀಕ, ಯಶಸ್ವಿನಿ, ಅಮಿತಾ, ಭಾಗ್ಯಲಕ್ಷ್ಮೀ, ವಿನೀತ, ರೇಷ್ಮಾ, ಶ್ರೀಜ, ಕಾರ್ತಿಕ, ಗ್ರೀಷ್ಮ, ಹರ್ಷಿಶ್, ರಿಷಂತ್ ಹಾಗೂ ತೇಜಸ್ವಿನಿ ಮೊದಲಾದ ಹಲವು ಕಲಾವಿದರುಗಳು ನೃತ್ಯ ಮತ್ತು ಸುಮಧುರ ಗಾನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶ್ರೀ ದೇವಳದ ವತಿಯಿಂದ ಗಡಿನಾಡ ಕನ್ನಡ ಸಾಂಸ್ಕ್ರತಿಕ ಸಂಸ್ಥೆಯ ಅಧ್ಯಕ್ಷರಾದ ಡಾ.ವಾಣಿಶ್ರೀ ಯವರನ್ನು ದೇವಳದ ಅಧಿಕಾರಿಗಳು ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು. 


ಸಂಸ್ಥೆಯ ಅಧ್ಯಕ್ಷರಾದ ಡಾ. ವಾಣಿಶ್ರೀಯವರು ಎಲ್ಲಾ ಕಲಾ ರತ್ನಗಳನ್ನು ಸ್ಮರಣಿಕೆ ಹಾಗೂ ಗೌರವಧನ ಕೊಟ್ಟು ಗೌರವಿಸಿದರು. ಕಾರ್ಯಕ್ರಮದಲ್ಲಿ ಉಮೇಶ್ ಪಟ್ಟಾಜೆ, ಶಿವಪ್ರಸಾದ್, ರೋಹಿತ್, ವಿಜಯರಾಜ್ ಮುಂತಾದವರು ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)
To Top