ಮಾದರಿ ಬ್ರಹ್ಮ ಕಲಶೋತ್ಸವಕ್ಕೆ ನಳಿನ್ ಕುಮಾರ್ ಕಟೀಲ್ ಕರೆ

Upayuktha
0


ಪದವು, ಕುಲಶೇಖರ: ಹಿಂದೂ ಯುವ ಸೇನೆ ಸಂಚಾಲಿತ ನವ ನಿರ್ಮಿತ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶ ಉತ್ಸವವನ್ನು ಮಾದರಿ ಹಾಗೂ ಅರ್ಥ ಪೂರ್ಣವಾಗಿ ಆಚರಿಸೋಣ" ಎಂದು ಮಾಜಿ ಲೋಕ ಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ಸಂದೇಶ ನೀಡಿದರು.


ಮಹೇಶ್ ಶೆಟ್ಟಿ ತೆಳ್ಳಾರ್ ಹಾಗೂ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು ಅವರ ನೇತೃತ್ವದಲ್ಲಿ ಮುಂಬೈ ಸಮಿತಿ ರಚಿಸಲಾಗುವುದು. ಮುಂಬೈಯ ಹಿಂದುತ್ವದ ಅಭಿಮಾನಿ ವರ್ಗದ ಪೂರ್ಣ ಸಹಕಾರ ಹಿಂದೂ ಯುವ ಸೇನೆ ಸಂಚಾಲಿತ ದೇವಸ್ಥಾನಕ್ಕೆ ದೊರಕಲಿದೆ ಎಂದರು.


ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚನಾ ಸಭೆ ನಡೆಯಿತು. ಆಮಂತ್ರಣ ಪತ್ರಿಕೆಯ ರೂಪುರೇಷೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ವರೂಪ, ಭೂ ಖರೀದಿಯ ಬಗ್ಗೆ ವಿಸ್ತೃತ ಸಮಾಲೋಚನೆ ನಡೆಯಿತು. 


ಏಪ್ರಿಲ್ 19 ರಂದು ನಡೆಯಲಿರುವ ಬೃಹತ್ ಹೊರೆ ಕಾಣಿಕೆ ಮೆರವಣಿಗೆ ಸಮಿತಿಯ ಅಧ್ಯಕ್ಷ ಗಿರಿಧರ ಶೆಟ್ಟಿ ಅವರು "ಸಮಿತಿ ತಿಳಿಸುವ ವಸ್ತುಗಳು ಹಾಗೂ ದೇವಸ್ಥಾನಕ್ಕೆ ಬಳಕೆ ಆಗುವ ಪರಿಕರಗಳನ್ನು ಹೊರೆ ಕಾಣಿಕೆಯಾಗಿ ಸಮರ್ಪಿಸಬೇಕೆಂದು ವಿನಂತಿ ಸಿದರು.


ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷರಾದ ಕದ್ರಿ ನವನೀತ ಶೆಟ್ಟಿ ಬ್ರಹ್ಮಕಲಶೋತ್ಸವದ ಸಮಗ್ರ ವಿವರ ನೀಡಿದರು. ಸಭೆಯಲ್ಲಿ ಬ್ರಹ್ಮಕಲಶೋತ್ಸವ ಮತ್ತು ದೇವಸ್ಥಾನ ನಿರ್ಮಾಣ ಸಮಿತಿಯ ಗೌರವಾನ್ವಿತ ಪದಾಧಿಕಾರಿಗಳಾದ ಮೋನಪ್ಪ ಭಂಡಾರಿ, ರಾಮಚಂದ್ರ ಚೌಟ ಪದವು, ಕಿಶೋರ್ ಕೊಟ್ಟಾರಿ, ಯಶೋಧರ ಚೌಟ, ಬಿ.ಶಶಿಕಾಂತ್ ನಾಗ್ವೇಕರ್, ಜನಾರ್ದನ ಅರ್ಕುಳ, ಸಿ.ಎ. ವೆಂಕಟರಮಣ, ಉಮೇಶ್ ರೈ ಪದವು ಮೇಗಿನ‌ ಮನೆ, ಹೆಚ್.ಕೆ ಪುರುಷೋತ್ತಮ್, ಪ್ರವೀಣ್ ಆಳ್ವ, ರಾಮ್ ಪ್ರಸಾದ್, ಸಂತೋಷ್ ಶೆಟ್ಟಿ ಬೋಳಾರ, ಉಮೇಶ್ ರೈ, ಮಹೇಶ್ ಜೋಗಿ ಶಕ್ತಿನಗರ, ರಮೇಶ್ ಕಂಡೆಟ್ಟು, ಕಿರಣ್ ರೈ ಬಜಾಲ್, ಮಾತೃ ಮಂಡಳಿಯ ಗೌರವಾನ್ವಿತ ಪದಾಧಿಕಾರಿಗಳಾದ ಉರ್ಮಿಳಾ ರಮೇಶ್ ಕುಮಾರ್, ರೋಹಿಣಿ ಟೀಚರ್, ವಿಜಯ ಅರುಣ್, ಭಾಸ್ಕರ ಮೊಯ್ಲಿ, ಕಾವ್ಯ ನಟರಾಜ್ ಆಳ್ವ, ಶಕೀಲಾ ಕಾವ, ವನಿತಾ ಪ್ರಸಾದ್, ಮತ್ತು ಉಪಸಮಿತಿಗಳ ಪ್ರಮುಖರುಗಳು, ಹಿಂದೂ ಯುವ ಸೇನಾ ಶಾಖಾ ಪ್ರಮುಖರುಗಳು ಊರಿನ ಭಕ್ತರು ಭಾಗವಹಿಸಿದ್ದರು.


"ಏಪ್ರಿಲ್ 18 ರಿಂದ 24 ರ ತನಕ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಾಟಕ, ಯಕ್ಷಗಾನ, ನೃತ್ಯ, ಸಂಗೀತ, ಭಜನೆ ಯೊಂದಿಗೆ ನಿರಂತರ ಅನ್ನ ಸಂತರ್ಪಣೆ ನಡೆಸಲಾಗುವುದು. ಈ  ಧಾರ್ಮಿಕ ಸೇವೆ ಯಲ್ಲಿ ಪಕ್ಷ ಭೇಧ ವಿಲ್ಲದೆ ಎಲ್ಲರೂ ಪಾಲ್ಗೊಳ್ಳಬೇಕೆಂದು ಭಾಸ್ಕರ ಚಂದ್ರ ಶೆಟ್ಟಿ ನುಡಿದರು.


ರಾಮ್ ಪ್ರಸಾದ್ ಸ್ವಾಗತಿಸಿದರು. ಕಿಶೋರ್ ಕೊಟ್ಟಾರಿ ಧನ್ಯವಾದ ಸಮರ್ಪಿಸಿದರು. ಧರ್ಮೇಂದ್ರ ಎಮ್.ಪಿ. ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top