ನಮ್ಮ ಚರಿತ್ರೆಯ ಪ್ರಾಚೀನತೆ, ಘನತೆ, ಔದಾರ್ಯ, ವ್ಯಾಪಕತೆಗಳನ್ನು ನೆನೆಪಿಸುವುದಕ್ಕಾಗಿ ಯುಗಾದಿಯನ್ನು, ನಮ್ಮಹಬ್ಬ ಹರಿದಿನಗಳನ್ನು ಆಚರಿಸಬೇಕು. ಹೇಗೆ, ಯಾವ ಸಂಭ್ರಮದಲ್ಲಿ ಆಚರಿಸುತ್ತೀರಿ ಎಂಬುದು ಮುಖ್ಯವಲ್ಲ. ಬಡವರೂ ಆಚರಿಸುತ್ತಾರೆ. ಶ್ರೀಮಂತರೂ ಆಚರಿಸುತ್ತಾರೆ; ಅವರವರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ! ಹೇಗಾದರೂ ಆಚರಿಸಲಿ, ಆಚರಿಸುವುದಷ್ಟೇ ಇಲ್ಲಿ ಮುಖ್ಯ. ಯಾಕೆಂದರೆ, ಭಾರತೀಯ ಹಬ್ಬಗಳ ಇತಿಹಾಸವನ್ನು ಅರಿಯುವುದು, ಉಳಿಸಿ ಬಾಳಿಸಿಕೊಂಡು ಹೋಗುವುದು ಪ್ರಧಾನವಾಗಿ ಆಗಬೇಕಾದ ಮಹತ್ಕಾರ್ಯ. ಅದರಲ್ಲೇ ಬೇವು ಬೆಲ್ಲ ಇರುವುದು. ಆತ್ಮವಿಸ್ಮೃತಿ ಯಾರಿಗೂ ಹಿತವಲ್ಲ.
ಯಾವ ಜನರು ತಮ್ಮ ಪ್ರಾಚೀನ ಪೂರ್ವಜರ ಸಾಧನೆ, ಸಿದ್ಧಿಗಳಲ್ಲಿ ಅಭಿಮಾನ ತಾಳಲಾರರೋ ಅವರು ಭವಿಷ್ಯದ ಪೀಳಿಗೆಗಳು ಅಭಿಮಾನ ಪಡುವಂಥ ಯಾವ ಮಹತ್ಸಾಧನೆಗಳನ್ನು ಮಾಡಲಾರರು ಎಂದು ಬರೆದುಹೋದವ ಮೆಕಾಲೆ ಸಾಹೇಬ. ಇದು ಭಾರತೀಯರ ಬುದ್ಧಿಯ ವ್ಯಭಿಚಾರವನ್ನೇ ಕುರಿತೇ ಬರೆದದ್ದು ಎಂಬುದೀಗ ಪಬ್ಲಿಕ್ ಸೀಕ್ರೆಟ್!
ಇವತ್ತಿನಿಂದ ಚೈತ್ರಮಾಸ. ಪ್ರತಿ ಚೈತ್ರದ ಮೊದಲ ದಿನ ಹೊಸ ಹುರುಪನ್ನು ತರುವುದಕ್ಕೆ ಕಾರಣ ಅದು ಯುಗಾದಿಯನ್ನು ಹೊತ್ತು ತರುತ್ತದೆಯಾದ್ದರಿಂದ. ಭಾರತೀಯರಿಗೆ ಅಂದರೆ ಹಿಂದೂಗಳಿಗೆ ಇಂದಿನಿಂದ ಆರಂಭಗೊಳ್ಳುವ ಹೊಸ ವರ್ಷವು ಪರಾಭವ ಸಂವತ್ಸರವನ್ನು ಹೊಂದಿದೆ. ಭಾರತೀಯ ಸಂಸ್ಕೃತಿಗೆ ಇದು ಚೈತ್ರವಾಗಲಿ.
ಧರ್ಮಾಂಧತೆ, ಯುದ್ಧ, ಆಕ್ರಮಣ, ಧನಗಳಿಕೆ, ಶತ್ರುನಾಶ, ಸಂಸ್ಕೃತಿ ವಿನಾಶ, ಮತಾಂತರ, ದುರಹಂಕಾರ, ಧನಮದ, ವಂಚನೆ, ದ್ರೋಹದ ಅಬ್ಬರದಲ್ಲಿ ಮುಳುಗಿದ ಪಾಶ್ಚಾತ್ಯದವರಿಗೆ ಪೂರ್ವದ ಭಾರತದಿಂದ ಕಲಿಯುವಂಥದ್ದು ನಿರಂತರವಾಗಿ ಇದ್ದೇ ಇದೆ. ಅಂಥ ಅಮಲಿನಲ್ಲಿ ಇದ್ದವರನ್ನು ಸರಿದಾರಿಗೆ ತರಲು ರಾಜಾ ವಿಕ್ರಮಾದಿತ್ಯನೊಬ್ಬ ಬೇಕಾಗಿದೆ.
ಈ ಹಬ್ಬವನ್ನು ಆಚರಿಸುವವರಿಗೆ ಪರಾಭವವಾಗದೆ ಜಯವಾಗಲಿ. ದೇಹ-ಬುದ್ಧಿ-ಮನಸುಗಳಿಗೆ ಶಕ್ತಿ ಚೈತನ್ಯವನ್ನು ದೇವರು ತುಂಬಲಿ.
- ಟಿ. ದೇವಿದಾಸ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


