ಮಣಿಪಾಲ: ರಾಗಧನ ಉಡುಪಿ (ರಿ.) ಸಂಸ್ಥೆಯ ವತಿಯಿಂದ ಕರ್ನಾಟಕ ಸಂಗೀತವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ರಾಗರತ್ನಮಾಲಿಕೆ-47’ ಎಂಬ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಮಾರ್ಚ್ 21, 2026 ಶನಿವಾರ ಮಣಿಪಾಲದಲ್ಲಿ ನಡೆಯಲಿದೆ.
ಮಣಿಪಾಲ - ಅಲೆವೂರು ರಸ್ತೆಯಲ್ಲಿರುವ ಮಣಿಪಾಲ್ ಡಾಟ್ ನೆಟ್ ಸಂಸ್ಥೆಯ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನ 3.00ರಿಂದ 4.00ರವರೆಗೆ ವೀಣಾ ವಾದನ ಕಚೇರಿ ನಡೆಯಲಿದೆ. ಈ ಕಚೇರಿಯಲ್ಲಿ ಶ್ರೀಮತಿ ಶಶಿಕಲಾ ಎಂ. ಭಟ್ ವೀಣಾ ವಾದನ ನೀಡಲಿದ್ದು, ಡಾ. ಕೌಸ್ತಭ ಕೆ. ರಾವ್ ಅವರು ಸಹವಾದನ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಾಲಚಂದ್ರ ಆಚಾರ್ಯ ವಹಿಸಲಿದ್ದಾರೆ.
ಸಂಜೆ 4.15ಕ್ಕೆ ದೀಪಪ್ರಜ್ವಲನ ಮತ್ತು ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಬಳಿಕ ಸಂಜೆ 4.30ಕ್ಕೆ ವೈಯೋಲಿನ್ ವಾದನ ಕಚೇರಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮಂಗಳೂರಿನ ವಿದ್ವಾನ್ ಶ್ರೀ ವೇಣುಗೋಪಾಲ ಶ್ಯಾನುಭೋಗ್ ವೈಯೋಲಿನ್ ವಾದನ ನೀಡಲಿದ್ದು, ಶ್ರೀ ಶ್ರೀರಾಮ ಕಾಂಚನ ವೈಯೋಲಿನ್ ಸಹವಾದನ, ಶ್ರೀ ವಿಜೇತ ಸುಬ್ರಹ್ಮಣ್ಯ ಕಬೆಕ್ಕೋಡು ಮೃದಂಗ ಸಹವಾದನ ಮತ್ತು ಶ್ರೀ ವೆಂಕಟ ಯಶಸ್ವಿ ಕಬೆಕ್ಕೋಡು ಮೋರ್ಸಿಂಗ್ ವಾದನ ನೀಡಲಿದ್ದಾರೆ.
ಸಂಗೀತಾಭಿಮಾನಿಗಳಿಗೆ ಈ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದ್ದು ಹೆಚ್ಚಿನ ಮಾಹಿತಿಗಾಗಿ ಆಯೋಜಕರನ್ನು 99641 40601 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ಸಂಸ್ಥೆಯ ಸಂಚಾಲಕಿ ಉಮಾಶಂಕರಿ ಕಾಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

