ಕೈಯಲ್ಲೇ ಕೊಯ್ದ, ಚೆನ್ನಾಗಿ ಪಕ್ವವಾದ ಉತ್ತಮ ಗೇರುಹಣ್ಣುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.
ಹಣ್ಣಿನ ಮೇಲೆ ಮತ್ತು ಕೆಳಗಿನ ಭಾಗಗಳನ್ನು ಸ್ವಲ್ಪ ಕತ್ತರಿಸಿ. ಈ ತುಂಡುಗಳನ್ನು ಸೇರಿಸದಿರಿ. ಕೆಳಗಿನ ಭಾಗದಲ್ಲಿ ಒಗರಿನ ಅಂಶ ಜಾಸ್ತಿ ಇರುತ್ತದೆ.
ಮನೆಯಲ್ಲಿ ಲಭ್ಯವಿರುವ ಉಪಕರಣ ಬಳಸಿ ಅಥವಾ ನಿಮಗೆ ಸುಲಭ ಅನಿಸಿದ ರೀತಿಯಲ್ಲಿ ಹಣ್ಣುಗಳ ರಸ ಹಿಂಡಿ ಸೋಸಿಕೊಳ್ಳಿ.
ಗೇರುಹಣ್ಣಿನ ಗಂಟಲು ಕೆರೆಯುವ ಗುಣ (ಒಗರು) ಅದರಲ್ಲಿರುವ ಟ್ಯಾನಿನ್ ಅಂಶದಿಂದ ಬರುತ್ತದೆ. ಇದನ್ನು ಸುಲಭವಾಗಿ ಪರಿಹರಿಸಬಹುದು.
ಕಾಸರಗೋಡಿನ ಪಿಸಿಕೆಯವರು ಬಳಸುವ ವಿಧಾನ ಹೀಗಿದೆ: ಸಾಗು / ಸಾಬಕ್ಕಿ/ ಸಾಬುದಾಣಾವನ್ನು ನುಣ್ಣನೆಯ ಹುಡಿ ಮಾಡಿಕೊಳ್ಳಿ.
ಈ ಹುಡಿಗೆ ಸ್ವಲ್ಪ ನೀರು ಸೇರಿಸಿ ಕುದಿಸಿ ಪೇಸ್ಟ್ ಮಾಡಿ ತಣಿಸಿ ಇಟ್ಟುಕೊಳ್ಳಿ.
ಒಂದು ಲೀಟರ್ ಗೇರುಹಣ್ಣು ಜ್ಯೂಸಿಗೆ ಕೇವಲ ಐದು ಗ್ರಾಮ್ ಸಾಬುದಾಣಾದ ಹುಡಿಯ ಪೇಸ್ಟ್ ಸಾಕು.
ಇದನ್ನು ಸೋಸಿಟ್ಟ ಹಣ್ಣಿನ ರಸಕ್ಕೆ ಸಾಬುದಾಣಾ ಪೇಸ್ಟ್ ಚೆನ್ನಾಗಿ ಮಿಶ್ರಮಾಡಿ ಸೆಟ್ಲ್ ಆಗಲು ಬಿಡಿ. ಟ್ಯಾನಿನ್ ಅಂಶ ತಳದಲ್ಲಿ ತಂಗುತ್ತದೆ.
"ಇಪ್ಪತ್ತು ನಿಮಿಷ ಮಾತ್ರ ಸಾಕಾಗುತ್ತದೆ” ಎನ್ನುತ್ತಾರೆ ಪಿಸಿಕೆಯವರು.
ತಳ ಸೇರಿದ ಅಂಶವೂ ವರ್ಗಾವಣೆ ಆಗದಂತೆ ಮೇಲಿನ ಜ್ಯೂಸನ್ನು ಎಚ್ಚರದಿಂದ ಬೇರೆ ಪಾತ್ರೆಗೆ ವರ್ಗಾಯಿಸಿ ಕುಡಿಯಿರಿ.
ಸಾಬುದಾಣಾಕ್ಕೆ ಬದಲು ಗಂಜಿಯ ತೆಳಿಯನ್ನೂ ಬಳಸಬಹುದು. ಇದನ್ನು ಬಳಸಿ ಅನುಭವ ಇರುವ ’ಮಧು ಮಲ್ಟಿಪಲ್ಸ್’ ಕಂಪೆನಿಯ ಮಾಲಿಕ ವೆಂಕಟಕೃಷ್ಣ ಅವರ ಸಲಹೆ ಹೀಗಿದೆ : “ಐವತ್ತು ಗ್ರಾಂ ಬೆಳ್ತಿಗೆ ಅಕ್ಕಿ ಹುಡಿಯನ್ನು ಸ್ವಲ್ಪ ನೀರಿಗೆ ಸೇರಿಸಿ ಕುದಿಸಿ ತಣಿಸಿ. ಮಂದ ಗಂಜಿಯ ಥರ ಆಗಬೇಕು. ಹೆಚ್ಚು ನೀರಾಗಬಾರದು. ನಂತರ ಇದನ್ನು ಒಂದು ಲೀಟರ್ ಜ್ಯೂಸಿಗೆ ಸೇರಿಸಿ.” "ಕುಚಲಕ್ಕಿ ಈ ಉದ್ದೇಶಕ್ಕೆ ಅಷ್ಟು ಹೊಂದುವುದಿಲ್ಲ"
ಪಾಕಪ್ರವೀಣೆ ಸೌಖ್ಯ ಮೋಹನ್ ಅವರ ಪ್ರಕಾರ, “ದಪ್ಪ ಗಂಜಿಯಾದರೆ ನೂರು ಎಂ ಎಲ್ ಸಾಕು.”
ಶುದ್ಧೀಕರಿಸಿದ ಜ್ಯೂಸಿಗೆ ಬೇಕಾದರೆ ಸ್ವಲ್ಪ ಸಕ್ಕರೆ, ಬಹು ಸ್ವಲ್ಪ ಲಿಂಬೆ ರಸ ಅಥವಾ ನಿಮ್ಮ ರುಚಿಗನುಸಾರ ಬೇರೆ ಒಳಸುರಿ ಸೇರಿಸಿಕೊಳ್ಳಿ.
ಹೆಚ್ಚಿದ್ದರೆ ಫ್ರಿಜ್ಜಿನಲ್ಲಿಟ್ಟು ಬಳಸಿ.
ನೀವೂ ಕುಡಿದು ಸುತ್ತಲಿನವರಿಗೆಲ್ಲಾ ರುಚಿ ತೋರಿಸಿ. ರುಚಿ ಹೇಗಿದೆ ಇದನ್ನು ನಿಮ್ಮ ಮಂದಿ ಇಷ್ಟ ಪಟ್ಟರೆ ತಿಳಿಸಿ.
ಚಿತ್ರ ಮಾಹಿತಿ: ಶ್ರೀಪಡ್ರೆ
ಅಡಿಕೆ ಪತ್ರಿಕೆ ಸಂಪಾದಕರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

