ಬೆಂಗಳೂರು: ಜೆಕೆ ಟೈರ್ (JK Tyre) ಮತ್ತು ವೆಸ್ಟರ್ನ್ ಇಂಡಿಯಾ ಆಟೋಮೊಬೈಲ್ ಅಸೋಸಿಯೇಷನ್ (WIAA) ಜಂಟಿಯಾಗಿ ಆಯೋಜಿಸಿರುವ ಬಹುನಿರೀಕ್ಷಿತ 'ಮಹಿಳಾ ಕಾರ್ ರ್‍ಯಾಲಿ ಟು ವ್ಯಾಲಿ 2026' ಇಂದು ಮುಂಬೈನ NSCI ನಿಂದ ಅತ್ಯಂತ ಸಂಭ್ರಮದಿಂದ ಆರಂಭವಾಯಿತು. WIAA ಅಧ್ಯಕ್ಷರಾದ ಶ್ರೀ ನಿತಿನ್ ದೋಸ್ಸಾ ಮತ್ತು ಜೆಕೆ ಟೈರ್‌ನ ಹಿರಿಯ ಅಧಿಕಾರಿಗಳು ಹಸಿರು ನಿಶಾನೆ ತೋರುವ ಮೂಲಕ ರ್‍ಯಾಲಿಗೆ ಚಾಲನೆ ನೀಡಿದರು.
ಈ ರ್‍ಯಾಲಿಯಲ್ಲಿ 200ಕ್ಕೂ ಹೆಚ್ಚು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು. ಮಹಿಳಾ ಸಬಲೀಕರಣ, ಕ್ಯಾನ್ಸರ್ ಜಾಗೃತಿ ಮತ್ತು ಲಿಂಗ ಸಮಾನತೆಯಂತಹ ಮಹತ್ವದ ವಿಷಯಗಳನ್ನಾಧರಿಸಿ ವಾಹನಗಳನ್ನು ಅಲಂಕರಿಸಲಾಗಿತ್ತು. ಸ್ಪರ್ಧಿಗಳು ತಾವು ಆರಿಸಿಕೊಂಡ ವಿಷಯಕ್ಕೆ (Theme) ಅನುಗುಣವಾಗಿ ವಿಶೇಷ ವೇಷಭೂಷಣಗಳನ್ನು ಧರಿಸಿದ್ದರು. ಕುಟುಂಬ ಸದಸ್ಯರು ಮತ್ತು ಬೆಂಬಲಿಗರ ಸಮ್ಮುಖದಲ್ಲಿ ಆರಂಭದ ಸ್ಥಳವು ಹಬ್ಬದ ವಾತಾವರಣದಂತೆ ಕಂಗೊಳಿಸುತ್ತಿತ್ತು.
ಈ ರ್‍ಯಾಯು ಟೈಮ್-ಸ್ಪೀಡ್-ಡಿಸ್ಟೆನ್ಸ್ (TSD) ಮಾದರಿಯನ್ನು ಅನುಸರಿಸುತ್ತದೆ. ಇಲ್ಲಿ ಕೇವಲ ವೇಗಕ್ಕೆ ಮಾತ್ರವಲ್ಲದೆ, ನಿಖರತೆ, ಸ್ಥಿರತೆ ಮತ್ತು ತಂಡದ ಸಹಕಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಸ್ಪರ್ಧಿಗಳು ಮುಂಬೈಯಿಂದ ಹೊರಟು ಗುಡ್ಡಗಾಡು ಪ್ರದೇಶಗಳ ಮೂಲಕ ಸುಮಾರು 125 ಕಿ.ಮೀ ಪ್ರಯಾಣಿಸಿ 'ನೊವೋಟೆಲ್ ಇಮ್ಯಾಜಿಕಾ' ಹೋಟೆಲ್ ತಲುಪಲಿದ್ದಾರೆ.
JK Tyre & Industries ಸಂಸ್ಥೆಯ ಮಾರಾಟ ಮತ್ತು ಮಾರ್ಕೆಟಿಂಗ್ ನಿರ್ದೇಶಕರಾದ ಶ್ರೀ ಶ್ರೀನಿವಾಸು ಅಲ್ಲಾಫನ್ ಮಾತನಾಡಿ 'ದಶಕಕ್ಕೂ ಹೆಚ್ಚು ಕಾಲದಿಂದ ನಾವು ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಬದ್ಧರಾಗಿದ್ದೇವೆ. ಈ ರ್‍ಯಾಯು ಕೇವಲ ಕ್ರೀಡೆಯಷ್ಟೇ ಅಲ್ಲದೆ, ಪ್ರಮುಖ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಶಕ್ತಿಯುತ ವೇದಿಕೆಯಾಗಿದೆ ಎಂದರು.
107 ವರ್ಷಗಳ ಇತಿಹಾಸವಿರುವ WIAA ಸಂಸ್ಥೆಯು ಸುರಕ್ಷಿತ ಸಂಚಾರ, ರಸ್ತೆ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಲಾಭರಹಿತ ಸಂಸ್ಥೆಯಾಗಿದೆ. ಈ ವರ್ಷದ ರ್‍ಯಾಲಿಯು ಜಾಗತಿಕ ರಸ್ತೆ ಸುರಕ್ಷತಾ ಅಭಿಯಾನಗಳಾದ #CommitToLife ಮತ್ತು #BeSafeBeStrong ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದೆ.
ಜೆಕೆ ಟೈರ್ ಮತ್ತು WIAA ನಡುವಿನ ಈ ಸಹಭಾಗಿತ್ವವು ಭಾರತೀಯ ಮೋಟಾರ್ ಸ್ಪೋರ್ಟ್ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವ ಗುರಿಯನ್ನು ಹೊಂದಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

