ಸುರಪುರದಲ್ಲಿ ನಾಳೆ ಗಮಕ ಕಲಾ ಪರಿಷತ್ ವತಿಯಿಂದ ಯುಗಾದಿ ಕವಿಗೋಷ್ಠಿ, ಸನ್ಮಾನ ಸಮಾರಂಭ

Upayuktha
0

ಸಾಂಕೇತಿಕ ಎಐ ಚಿತ್ರ


ಸುರಪುರ, ಮಾ. 28: ಯುಗಾದಿ ನವ ಸಂವತ್ಸರದ ಅಂಗವಾಗಿ ಕರ್ನಾಟಕ ಗಮಕ ಕಲಾ ಪರಿಷತ್ತು (ರಿ), ಬೆಂಗಳೂರು ಇದರ ತಾಲೂಕು ಘಟಕ ಸುರಪುರ (ಜಿಲ್ಲೆ: ಯಾದಗಿರಿ) ವತಿಯಿಂದ ನಾಳೆ (ಮಾ. 29) ರವಿವಾರ ಬೆಳಿಗ್ಗೆ 10 ಗಂಟೆಗೆ ನಗರದ ಕನ್ನಡ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಕವಿಗೋಷ್ಠಿ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.


ಕಾರ್ಯಕ್ರಮವನ್ನು ಗಮಕ ಕಲಾ ಪರಿಷತ್ತಿನ ಗೌರವ ಅಧ್ಯಕ್ಷರಾದ ಶ್ರೀ ರಾಜಾ ಮುಕುಂದ ನಾಯಕ ಉದ್ಘಾಟಿಸಲಿದ್ದಾರೆ. ಗಮಕ ಕಲಾ ಪರಿಷತ್ತು ಸುರಪುರದ ಅಧ್ಯಕ್ಷರಾದ ಶ್ರೀ ದೊಡ್ಡಮಲ್ಲಿಕಾರ್ಜುನ ಉದ್ದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಸಂಘ ಸುರಪುರದ ಅಧ್ಯಕ್ಷರಾದ ಶ್ರೀ ಬಸವರಾಜ ಜಮದ್ರಖಾನಿ, ಗಮಕ ಕಲಾ ಪರಿಷತ್ತು ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಜಾಲವಾದಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಯಲ್ಲಪ್ಪ ಕಾಣ್ಣೂರ, ವಿಭಾಗೀಯ ಅಧ್ಯಕ್ಷರಾದ ಶ್ರೀ ಲಕ್ಷ್ಮೀಕಾಂತ ಮೊಹರೀರ, ಕಾರ್ಯಾಧ್ಯಕ್ಷರಾದ ಶ್ರೀ ಸಿ.ಎನ್. ಭಂಡಾರಿ, ರಂಗಂಪೇಟ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೀ ಸೂಗೂರೇಶ ವಾರದ, ಸರಕಾರಿ ಉರ್ದು ಪ್ರೌಢಶಾಲೆ ಸಗರದ ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀಕಾಂತ ಮಾರ್ಗೇಲ್ ಹಾಗೂ ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರಕಾಶ ಅಂಗಡಿ ಉಪಸ್ಥಿತರಿರುವರು.


ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಶ್ರೀ ದೇವಿಂದ್ರಪ್ಪ ಭೋವಿ, ಶ್ರೀ ಹಳ್ಳೇರಾವ್ ಕುಲಕರ್ಣಿ, ಶ್ರೀ ಭೀಮರಾಯ ಗೋನಾಳ, ಶ್ರೀಮತಿ ವಾಣಿಶ್ರೀ ಹಾಗೂ ಶ್ರೀಮತಿ ಗಾಯತ್ರಿ ಕೊಂಗಿ ಅವರನ್ನು ಸನ್ಮಾನಿಸಲಾಗುವುದು.


ಇದಾದ ಬಳಿಕ ನಡೆಯುವ ಕವಿಗೋಷ್ಠಿಗೆ ಶ್ರೀಮತಿ ಪಾರ್ವತಿ ದೇಸಾಯಿ ಅಧ್ಯಕ್ಷತೆ ವಹಿಸಲಿದ್ದು, ಕು. ವಿಶ್ವಪೂರ್ವ ಆಶಯ ಭಾಷಣ ಮಾಡಲಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸುವ ಕವಿಗಳು ತಮ್ಮ ಕವನಗಳನ್ನು ವಾಚಿಸಲಿದ್ದಾರೆ.


ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಕು. ದೀಪಿಕಾ ಉದ್ದಾರ ನಡೆಸಲಿದ್ದು, ನಿಂಗಣ್ಣ ಗೋನಾಳ ಸ್ವಾಗತ ಕೋರಲಿದ್ದಾರೆ. ಶ್ರೀ ದೇವು ಹೆಬ್ಬಾಳ ಕಾರ್ಯಕ್ರಮವನ್ನು ನಿರೂಪಿಸಲಿದ್ದು, ಶ್ರೀ ಶಿವಕುಮಾರ ಕಮತಗಿ ವಂದನಾರ್ಪಣೆ ಮಾಡಲಿದ್ದಾರೆ.


ಗಮಕ ಮತ್ತು ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಯೋಜಕರು ಮನವಿ ಮಾಡಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top