ತುಳು ಸಂಸ್ಕೃತಿಯ ಹೊಳಹನ್ನು ಉಳಿಸಿಕೊಳ್ಳೋಣ: ಟಿ. ನರಸಿಂಹ ಶೆಟ್ಟಿ

Upayuktha
0


ಮಂಗಳೂರು: “ನಮ್ಮ ತುಳುನಾಡು ವಿಶಾಲ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಅಲ್ಲದೆ ಈ ಪ್ರದೇಶಕ್ಕೆ ಸೀಮಿತವಾಗಿರದೇ ವಿಶ್ವದ ಹಲವೆಡೆಗಳಲ್ಲಿ ನಮ್ಮ ಹೆಮ್ಮೆಯ ತುಳು ಭಾಷೆ ಬಳಕೆಯಲ್ಲಿದೆ. ಎಂತಹ ಸಂಘರ್ಷಗಳ ನಡುವೆಯೂ ತನ್ನ ಸಾಂಸ್ಕೃತಿಕ ಹೊಳಹನ್ನು ಉಳಿಸಿಕೊಂಡಿರುವ ತುಳುಭಾಷೆ, ತುಳುನಾಡಿನ ಕೀರ್ತಿಯನ್ನು ಮೆರೆದಿದೆ. ಇದು ಈ ಮಣ್ಣಿನ ವಿಶೇಷತೆ. ಈ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ತುಳುಕೂಟ ಕುಡ್ಲ ಕಳೆದ ಐವತ್ತಾರು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ. ಈ ಕಾರ್ಯಕ್ಕೆ ಎಲ್ಲಾ ತುಳುವರ ಬೆಂಬಲ ದೊರಕಲಿ” ಎಂದು ದಿ ಮಂಗಳೂರು ಥಿಯೋಸಾಫಿಕಲ್ ಸೊಸೈಟಿಯ ಅಧ್ಯಕ್ಷ ವಿದ್ವಾನ್ ತುಪ್ಪೆಕಲ್ಲು ನರಸಿಂಹ ಶೆಟ್ಟಿ ಹೇಳಿದರು.


ತುಳುಕೂಟದ “ಬಂಗಾರ್ ಪರ್ಬೊ– ಸಬಿ ನೆಂಪು” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಳು ಭಾಷೆಯ ಸಾಂಸ್ಕೃತಿಕ ಮಹತ್ವವನ್ನು ಎತ್ತಿಹಿಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಕುಡ್ಲ ತುಳುಕೂಟದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗ, “ತುಳು ಭಾಷೆಯ ಪರವಾಗಿ ಅನೇಕ ಹೋರಾಟಗಳು ನಡೆದಿದ್ದರೂ, ಇನ್ನೂ ಅದಕ್ಕೆ ಸಮರ್ಪಕವಾದ ಶಾಸನಬದ್ಧ ಮಾನ್ಯತೆ ದೊರಕಿಲ್ಲ. ತುಳು ಭಾಷೆಯ ಬೆಳವಣಿಗೆಗಾಗಿ ಎಲ್ಲ ತುಳುವರೂ ಒಂದಾಗಿ ಸಹಕರಿಸಬೇಕು,” ಎಂದು ಕರೆ ನೀಡಿದರು.


ಕಾರ್ಯಕ್ರಮವನ್ನು ವೇದಾಂತ ಟವರ್ಸ್‌ನ ಮಾಲಕಿ ಹಾಗೂ ಕುದ್ರೋಳಿ ಗೋಕರ್ಣನಾಥ ದೇವಳದ ಅಭಿವೃದ್ಧಿ ಸಮಿತಿಯ ಸದಸ್ಯೆ ಶ್ರೀಮತಿ ಪಿ.ಕೆ. ಗೌರವಿ ರಾಜಶೇಖರ್ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ವಿನಾಯಕ ಗಾರ್ಮೆಂಟ್ಸ್‌ನ ಮಾಲಕಿ ಶ್ರೀಮತಿ ಕುಸುಮಾ ಎಚ್. ದೇವಾಡಿಗ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.


ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ನಿರೂಪಿಸಿದರು. ದಯಾಮಣಿ ವಿ. ಕೋಟ್ಯಾನ್ ಹಾಗೂ ಸುನಂದಾ ಎ. ಬೋಳಾರ್ ಪ್ರಾರ್ಥನೆಗೈದರು. ಉಪಾಧ್ಯಕ್ಷ ರೊ. ಜೆ.ವಿ. ಶೆಟ್ಟಿ ಪ್ರಸ್ತಾವನೆ ಹಾಗೂ ಸ್ವಾಗತ ಭಾಷಣ ಮಾಡಿದರು. ಖಜಾಂಚಿ ನಾರಾಯಣ ಬಿ.ಡಿ. ಧನ್ಯವಾದ ಅರ್ಪಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಕದ್ರಿ ನಾಗೇಶ್ ದೇವಾಡಿಗ, ಜಯಲಕ್ಷ್ಮಿ ಟೀಚರ್ ಹಾಗೂ ಟೈಲರ್ಸ್ ಅಸೋಸಿಯೇಶನ್ ಬಳಗದಿಂದ ತುಳು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಿರು ರೂಪಕಗಳು ಪ್ರದರ್ಶನಗೊಂಡವು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top