ಕುಲಶೇಖರ ಪದವು ಶ್ರೀ ಶನೈಶ್ಚರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾಲೋಚನೆ ಸಭೆ

Upayuktha
0

ಬ್ರಹ್ಮಕಲಶೋತ್ಸವ ಮುಂಬೈ ಸಮಿತಿಗೆ ಅಧ್ಯಕ್ಷರರಾಗಿ ಮಹೇಶ್ ಶೆಟ್ಟಿ ತೆಳ್ಳಾರ್ ಆಯ್ಕೆ,

ಹಿಂದೂ ಯುವ ಸೇನೆ ನಿರ್ಮಾಣ ಮಾಡುತ್ತಿರುವ ಶನಿಮಂದಿರದ ಸೇವಾ ಕಾರ್ಯಕ್ಕೆ ಮುಂಬೈಯ ಭಕ್ತರು ಸೇರಿಕೊಳ್ಳಬೇಕು: ನಳಿನ್ ಕುಮಾರ್ ಕಟೀಲ್



ಮುಂಬಯಿ: ಹಿಂದೂ ಯುವ ಸೇನೆ ಮಂಗಳೂರು ಇದರ ಪದವು ಶಾಖೆ ಸಂಚಾಲಿತ ಕುಲಶೇಖರ ಪದವು ಶ್ರೀ  ಶನೈಶ್ಚರ ದೇವಸ್ಥಾನ ನಿರ್ಮಾಣ, ಬಿಂಬ ಪ್ರತಿಷ್ಠೆ, ಬ್ರಹ್ಮ ಕಲಶ ಸಮಾಲೋಚನಾ ಸಭೆ ಮಾರ್ಚ್ 17ರಂದು ಕಾಂದಿವಲಿ ಪೂರ್ವದ ಠಾಕೂರ್ ವಿಲೇಜ್‌ನಲ್ಲಿ ಮಹೇಶ್ ಶೆಟ್ಟಿ ತೆಳ್ಳಾರ್ ಯವರು ಆಡಳಿತದ 'ಸೋರಾ ಬೈ ನೈನ್' ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಶ್ರೀ ಶನೈಶ್ಚರ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಧ್ಯಕ್ಷ, ಮಂಗಳೂರಿನ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಯವರು ಅಧ್ಯಕ್ಷತೆಯಲ್ಲಿ ನಡೆಯಿತು.


ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಕದ್ರಿ ನವನೀತ ಶೆಟ್ಟಿಯವರು ದೇವಸ್ಥಾನದ ಸಮಗ್ರ ಮಾಹಿತಿ ನೀಡಿ "ಕಳೆದ ಮೂರು ದಶಕಗಳಿಂದ ಹಿಂದೂ ಯುವ ಸೇನೆಯ ಪದವು ಶಾಖೆಯ ಶ್ರೀ ಶನೈಶ್ವರ ಪೂಜೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುತ್ತದೆ.ಶ್ರೀ ಶನೈಶ್ವರ ಪೂಜಾ ಸಮಿತಿ (ರಿ.)ಯ ಮೂಲಕ 2000ನೇ ಇಸವಿಯಲ್ಲಿ ಚಾರಿತ್ರಿಕ "ಶ್ರೀ ಸಗ್ರಹಮಖ ಶನೈಶ್ಚರ ಮಹಾಯಾಗ" 3 ದಿನ ಹಾಗೂ 2018 ರಲ್ಲಿ 7 ದಿನಗಳ ಪರ್ಯಂತ ನಡೆದಿದ್ದು ಧಾರ್ಮಿಕ ವಲಯದಲ್ಲಿ ಚರಿತ್ರೆ ನಿರ್ಮಿಸಿದ ಕಾರ್ಯಕ್ರಮವಾಗಿ ದಾಖಲಾಗಿದೆ.


ಶ್ರೀ ಶನಿ ದೇವರ ಆರಾಧನೆಯನ್ನು ಪದವು, ಕುಲಶೇಖರದಲ್ಲಿ 600 ಚ.ಅಡಿಯಲ್ಲಿ ಪುಟ್ಟ ಮಂದಿರದಲ್ಲಿ 1990 ರಿಂದ ನಡೆಸಿಕೊಂಡು ಬಂದಿದ್ದು 2023 ರಲ್ಲಿ ಶ್ರೀ ಶನೈಶ್ಚರ ದೇವಸ್ಥಾನ ನಿರ್ಮಾಣ ಸಮಿತಿಯನ್ನು ರಚಿಸಿ 10 ಸೆಂಟ್ಸ್ ಸ್ಥಳವನ್ನು ಖರೀದಿಸಿ ನೂತನ ಶಿಲಾಮಯ ಶ್ರೀ ಶನೈಶ್ಚರ ದೇವಸ್ಥಾನದ ಶಂಕು ಸ್ಥಾಪನೆಯನ್ನು 13-03-2024 ರಂದು ನೆರವೇರಿಸಲಾಗಿದೆ.ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ನವಗ್ರಹ ಸಹಿತ ಶ್ರೀ ಶನೈಶ್ಚರ, ಶ್ರೀ ಮಹಾಗಣಪತಿ ಹಾಗೂ ಶ್ರೀ ದುರ್ಗಾದೇವಿ ಯನ್ನು ಪ್ರತಿಷ್ಠಾಪಿಸಿ ಈ ವರ್ಷ ಏಪ್ರಿಲ್ 23ರಂದು ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಅಶ್ವತ್ಥ ವೃಕ್ಷ ಪ್ರತಿಷ್ಠೆ ನಡೆಸಬೇಕೆಂದು ಸಂಕಲ್ಪಿಸಲಾಗಿದೆ. ಅದರಂತೆ ಎಪ್ರಿಲ್ 18ರಿಂದ 24ರ ತನಕ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶದ ಸಂಭ್ರಮ ನಡೆಯಲಿದೆ" ಎಂದರು.


ಭೂ ದಾನ ಸೇವಾ ಯೋಜನೆ:

ಈ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡುತ್ತಾ ನಳಿನ್ ಕುಮಾರ್ ಕಟೀಲ್ ಅವರು "ಮುಂದೆ ಶ್ರೀ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಗೂ ಧರ್ಮ ಶಿಕ್ಷಣ, ರಾಷ್ಟ್ರೀಯ ಚಿಂತನೆ ಗಳಿಗೆ ಅನುಕೂಲವಾಗುವಂತೆ ಇನ್ನೂ 20 ಸೆಂಟ್ಸ್ ಜಮೀನಿನ ಅವಶ್ಯಕತೆಯಿದ್ದು ದೈವಾನುಗ್ರಹದಿಂದ ದೇವಸ್ಥಾನ ಸ್ಥಳದ ಪಕ್ಕದ ಸ್ಥಳವನ್ನು ಮಾಲೀಕರು ಕಡಿಮೆ ಬೆಲೆಗೆ ನೀಡಲು ಸಿದ್ಧರಾಗಿದ್ದಾರೆ.  ಭಕ್ತರು, ಊರ ಪರವೂರ ದಾನಿಗಳು, ಹಿಂದೂ ಯುವಸೇನೆಯ ಹಿತೈಷಿಗಳು ಶ್ರೀ ಶನಿದೇವರ ಭಕ್ತರು ದೇವಸ್ಥಾನ ನಿರ್ಮಾಣ ಹಾಗೂ ಸ್ಥಳ ಖರೀದಿಗೆ ತನು-ಮನ-ಧನಗಳಿಂದ ಸಹಕರಿಸಿ ಪುಣ್ಯಕಾರ್ಯದಲ್ಲಿ ಸಹಭಾಗಿಗಳಾಗಬೇಕು" ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಮುಂಬೈ ಸಮಿತಿಗೆ ಅಧ್ಯಕ್ಷರನ್ನಾಗಿ ಹಿಂದೂ ಪ್ರಕಾರವಾದಿ ಉದ್ಯಮಿ ಮಹೇಶ್ ಶೆಟ್ಟಿ ತೆಳ್ಳಾರ್ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಭಾರತೀಯ ಜನತಾ ಪಕ್ಷದ ಮೀರಾ-ಭಯಂದರ್ ಜಿಲ್ಲಾ ಉಪಾಧ್ಯಕ್ಷ ಸಚ್ಚಿದಾನಂದ ಶೆಟ್ಟಿ, ಮುನ್ನಲಾಯಿ ಗುತ್ತು ಅವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. 




ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ "ಬಾಲ್ಯದಲ್ಲಿ ಸಂಘ ಪರಿವಾರದಿಂದ ಧಾರ್ಮಿಕ ಸೇವೆಗಳನ್ನು ಮಾಡುತ್ತಾ ಬಂದಿದ್ದೇನೆ. ಹಿಂದೂ  ಯುವ ಸೇನೆ ನಿರ್ಮಾಣ ಮಾಡುತ್ತಿರುವ ಶನಿಮಂದಿರದ ಸೇವಾ ಕಾರ್ಯಕ್ಕೆ ಮುಂಬೈಯ ಭಕ್ತರನ್ನು ಸೇರಿಸಿಕೊಳ್ಳಬೇಕೆನ್ನುವ ಉದ್ದೇಶದಿಂದ ಬಂದಿದ್ದೇವೆ. ನಾನು ಸಂಸದನಾಗಿ 15 ವರ್ಷ ಸೇವೆ ಮಾಡಿದ್ದೇನೆ.ಅದಕ್ಕಿಂತ ಮೊದಲು ಮುಂಬೈಗೆ ಸಂಪರ್ಕವನ್ನು ಇರಿಸಿಕೊಂಡವನು ಯಾವುದೇ ಸಂದರ್ಭದಲ್ಲಿ ಕೂಡ ನಾನು ನನ್ನ ವೈಯಕ್ತಿಕ ಬೇಡಿಕೆಯನ್ನು ಇಟ್ಟುಕೊಂಡವನಲ್ಲ. ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಮುಂಬೈಯ ಬಂಧುಗಳು ಮಹತ್ವ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಇದೀಗ ಹಿಂದೂ ಧರ್ಮದ ಸೇವಾ ಕಾರ್ಯಕ್ಕಾಗಿ ತೊಡಗಿಕೊಂಡಿರುವ ಶನಿಮಂದಿರದ ಬ್ರಹ್ಮಕಲಶದ ಜವಾಬ್ದಾರಿಯನ್ನು ಮಹೇಶ್ ಶೆಟ್ಟಿ ತೆಳ್ಳಾರ್ ಇವರಲ್ಲಿ ತಿಳಿಸಿದ ಕೂಡಲೇ ನನ್ನ ಮೇಲೆ ಮತ್ತು ಹಿಂದುತ್ವ ಮೇಲೆ ಗೌರವವನ್ನು ಇಟ್ಟು ಒಪ್ಪಿಕೊಂಡು ಮುಂಬಯಿ ಸಮಿತಿಯ ಅಧ್ಯಕ್ಷತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಮುಂಬೈ ಮತ್ತು ಮಂಗಳೂರಿಗೆ ಕೊಂಡಿಯಾಗಿ ಸೇವೆ ಮಾಡುತ್ತಿರುವ ಸಚ್ಚಿದಾನಂದ ಶೆಟ್ಟಿ ಅವರ ಸಹಕಾರದಿಂದ ಈ ಪುಣ್ಯ ಕಾರ್ಯಕ್ಕೆ ಪೂರ್ಣ ಬೆಂಬಲವನ್ನು ನೀಡಿದ್ದಾರೆ. ಮುಂಬೈಯ ಸಮಸ್ತ ಬಂಧುಗಳು ಶನಿ ದೇವರ ಬ್ರಹ್ಮಕಲಶದಲ್ಲಿ ಪಾಲ್ಗೊಳ್ಳಬೇಕು" ಎಂದರು.


ಹಿಂದೂ ಯುವಸೇನೆಯ ಸಂಘಟಕರಾಗಿರುವ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಭಾಸ್ಕರ್ ಚಂದ್ರ ಶೆಟ್ಟಿ ಮಾತನಾಡಿ "ಹಿಂದೂ ಧರ್ಮದ ಸೇವಾ ಕಾರ್ಯಕ್ಕಾಗಿ ನಡೆಯುತ್ತಿರುವ ದೇವಸ್ಥಾನ ನಿರ್ಮಾಣದ ಕಾರ್ಯದಲ್ಲಿ ಮುಂಬೈಯ ಹಿಂದೂ ಬಂಧುಗಳು ಸಹಕಾರಿಗಳಾಗಬೇಕು ಎಂದು ತಿಳಿಸಿದರು.


ಬಂಟರ ಸಂಘದ ಎಸ್. ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯ ಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು ತನ್ನ ಅಭಿಪ್ರಾಯವನ್ನು ತಿಳಿಸುತ್ತಾ ನಮ್ಮ ಜಿಲ್ಲೆಯ ಬಹಳಷ್ಟು ಕ್ಷೇತ್ರಗಳು ಪುನರ್ ನಿರ್ಮಾಣಗೊಂಡು ಬ್ರಹ್ಮಕಲಶ ಗಳು ನಡೆಯುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ನೇತೃತ್ವದಲ್ಲಿ ನಡೆಯಲಿರುವ ಬ್ರಹ್ಮಕಲಶಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು.


ಜಾಗತಿಕ ಬಂಟರ ಸಂಘಗಳ ಒಕ್ಕೂಟದ  ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ಮಾತನಾಡಿ "ದೇವಸ್ಥಾನಗಳ ಬ್ರಹ್ಮ ಕಲಶದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದೆಂದರೆ ಅದು ನಮ್ಮ ಭಾಗ್ಯವೇ ವಾಗಿದೆ. ಅದರಲ್ಲೂ ಶನಿ ದೇವರ ದೇವಸ್ಥಾನದ ನಿರ್ಮಾಣದಲ್ಲಿ ನಮ್ಮನ್ನು ತೊಡಗಿಸುವುದು ಪುಣ್ಯದ ಕೆಲಸವಾಗಿದೆ. ನಾವೆಲ್ಲರೂ ಒಟ್ಟಾಗಿ ಈ ಸೇವೆಗೆ ಸಹಕರಿಸುವ "ಎಂದರು. 


ಮುಂಬೈ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ಮಾತನಾಡಿ "ಮುಂಬೈಯಲ್ಲಿ ಬಹಳಷ್ಟು ಹಿಂದೂ ಪರ ಸೇವೆ ಮಾಡಿದ ಮಹೇಶ್ ಶೆಟ್ಟಿ ತೆಳ್ಳಾರ್ ರವರು ಈ ಶನಿ ದೇವಸ್ಥಾನದ ಬ್ರಹ್ಮ ಕಲಶದ ಮುಂಬೈಯ ಸಮಿತಿಯ ನೇತೃತ್ವ ವಹಿಸಿರುವುದು ಸೂಕ್ತ ಆಯ್ಕೆಯಾಗಿದೆ. ಅವರು ಹುಟ್ಟೂರಿನಲ್ಲಿ ಬಹಳಷ್ಟು ದೇವಸ್ಥಾನಗಳ ಜೀರ್ಣೋದ್ಧಾರ ಬ್ರಹ್ಮ ಕಲಶ ಉತ್ಸವಗಳ ಜವಾಬ್ದಾರಿಯನ್ನು ಯಶಸ್ವಿಯಾಗಿ, ಅರ್ಥ ಪೂರ್ಣ ವಾಗಿ ನಿರ್ವಹಿಸಿ ಹಿಂದೂ ಧರ್ಮದ ಸಂರಕ್ಷಣೆಯ ಸೇವೆಯಲ್ಲಿ ತೊಡಗಿಕೊಂಡವರು. ಅವರ ಮುಖಾಂತರ ನಾವೆಲ್ಲರೂ ಕ್ಷೇತ್ರದ ಸೇವೆಗೆ ಸಹಕಾರ ನೀಡುತ್ತೇವೆ" ಎಂದರು.



ಈ ಸಂದರ್ಭದಲ್ಲಿ ಉಪಸ್ಥಿರಿದ್ದ ಜಯಶೀಲ ತಿಂಗಳಾಯ ಗುರುಸ್ವಾಮಿ, ಉದಯ ಶೆಟ್ಟಿ ಮಲಾರ್ ಬೀಡು, ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು, ಯೋಗೇಂದ್ರ ಗಾಣಿಗ ಜಿ.ಕೆ ಕೆಂಚನಕೆರೆಯವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿದರು. ಗಿರೀಶ್ ಶೆಟ್ಟಿ ತೆಳ್ಳಾರ್ ನಿರೂಪಿಸಿದರು.


ಸಭೆಯಲ್ಲಿ ಮಂಗಳೂರಿನಿಂದ ಆಗಮಿಸಿದ ಬ್ರಹ್ಮ ಕಲಶ ಸಮಿತಿಯ ಕಾರ್ಯದರ್ಶಿ ಕಿರಣ್ ರೈ ಬಜಾಲ್, ಕೋಶಾಧಿಕಾರಿ ವಿಕ್ರಮ್ ಚೌಟ, ಹಾಗೂ ಅಪಾರ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಉಪಸ್ಥಿತರಿದ್ದರು.



ಹಿಂದೂ ಧರ್ಮ ಜಾಗೃತಿಯು ಅಗತ್ಯ: ಮಹೇಶ್ ಶೆಟ್ಟಿ ತೆಳ್ಳಾರ್

ಸಭೆಯನ್ನು ಆಯೋಜಿಸಿದ ಮಹೇಶ್ ಶೆಟ್ಟಿ ತೆಳ್ಳಾರ್ ಯವರು ಅವರು ಮಾತನಾಡಿ ಬಹಳ ವರ್ಷಗಳ ಸಂಬಂಧದಲ್ಲಿರುವ ನಳಿನ್ ಕುಮಾರ್ ಕಟೀಲ್ ಯಾವ ಸಂದರ್ಭದಲ್ಲಿ ಕೂಡ ನಮ್ಮಲ್ಲಿ ಯಾವುದೇ ಬೇಡಿಕೆಯನ್ನು ಇಟ್ಟವರಲ್ಲ. ಈ ಬಾರಿ ನನಗೊಂದು ಜವಾಬ್ದಾರಿಯನ್ನು ನೀಡಿದ್ದಾರೆ ಅದು ಕೂಡ ಹಿಂದೂ ಧರ್ಮದ ಕಾರ್ಯದ ಸೇವೆಗಾಗಿ. ಅದಕ್ಕೆ ನಾನು ಬಹಳ ವಿನಮ್ರತೆಯಿಂದ ಒಪ್ಪಿಕೊಂಡಿದ್ದೇನೆ. ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಮುಂಬೈಯ ಭಕ್ತರು ವೇದಿಕೆ ನೀಡುವುದು ಅಗತ್ಯ. ಆದ್ದರಿಂದ ಎಲ್ಲರೂ ತಮ್ಮ ಸೇವೆಯನ್ನು ಮಾಡಬೇಕು ಎಂದು ಹೇಳಿದರು.


ಚಿತ್ರ ವರದಿ ದಿನೇಶ್ ಕುಲಾಲ್.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top