ವಿಶ್ವ ಸಂಕಷ್ಟದ ನಡುವೆ ಭಾರತ: ಟೀಕೆಗಳಾಚೆಗಿನ ವಾಸ್ತವ

Upayuktha
0


ಭಾರತದಲ್ಲಿ ವಿರೋಧ ಪಕ್ಷಗಳು ಇವತ್ತು ಕೊಲ್ಲಿಯಲ್ಲಿ ನಡೆಯುತ್ತಿರುವ ಗಂಭೀರವಾದ ಯುದ್ಧ ಪರಿಸ್ಥಿತಿಯಲ್ಲಿ ಭಾರತಕ್ಕೆ ಬಂದೊದಗಿರುವ ಸಂಕಷ್ಟ ಪರಿಸ್ಥಿತಿಗೆ ಪ್ರಧಾನಿ ಮೋದಿಯವರನ್ನು ಹೊಣೆ ಮಾಡಿ ಅವರನ್ನು ದಮನಿಸುವ ಪ್ರಯತ್ನವನ್ನು ವ್ಯಾಪಕವಾಗಿ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಇಡೀ ಪ್ರಪಂಚಕ್ಕೆ ಬಂದಿರುವ ತೀವ್ರ ಸಂಕಷ್ಟ ಪರಿಸ್ಥಿತಿಯಲ್ಲಿ ಇದುವರೆಗೆ ದೇಶಕ್ಕೆ ಅತಿ ಕಡಿಮೆ ದುಷ್ಪರಿಣಾಮ ಆಗುವಂತೆ ನಿರ್ವಹಣೆ ಮಾಡುತ್ತಿರುವುದು ನಮ್ಮ ಕೇಂದ್ರ ಸರ್ಕಾರ ಮತ್ತು ಅದರ ನೇತಾರ ಮೋದಿ . ಅದು ಅಡುಗೆ ಅನಿಲದ ವಿಚಾರ ಇರಬಹುದು, ಪೆಟ್ರೋಲಿಯಂ ಉತ್ಪನ್ನಗಳ ವಿಚಾರ ಇರಬಹುದು ದೇಶವಾಸಿಗಳಿಗೆ ಯುದ್ಧದ ಪರಿಣಾಮ ಬಹಳ ತೀವ್ರವಾಗಿ ತಾಕದಂತೆ ಇದುವರೆಗೆ ಮೇನ್ ಟೈನ್ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸರಕಾರದ ದೂರದೃಷ್ಟಿಯೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರವನ್ನು ನಾವು ಹಾರ್ದಿಕವಾಗಿ ಅಭಿನಂದಿಸಬೇಕು. 


ಆದರೆ ನಾನು ಇವತ್ತು ಪ್ರಸ್ತಾಪಿಸಲು ಹೊರಟಿರುವ ವಿಚಾರ ಅದಲ್ಲ, "ವಿಶ್ವ ಗುರು" ಎಂಬ ಪದವನ್ನು ಬಳಸಿ ಮೋದಿಯವರನ್ನು ಲೇವಡಿ ಮಾಡುತ್ತಿರುವ ವಿರೋಧ ಪಕ್ಷದ ಹಲವು ನಾಯಕರ ಬಗ್ಗೆ ಕೆಲವು ವಿಚಾರಗಳನ್ನು ಹೇಳಬೇಕಿದೆ. 


ಮೊದಲನೆಯದಾಗಿ ವಿಶ್ವ ಗುರು ಅನ್ನುವ ಪದವನ್ನು ಬಳಸಿರುವುದು ಭಾರತ ದೇಶಕ್ಕಾಗಿ ಹೊರತು ಮೋದಿಯವರಿಗೆ ಅಲ್ಲ. ಪುರಾಣ ಇತಿಹಾಸದ ಕಾಲದಿಂದ ಅಂದು ಇಂದು ಎಂದೆಂದೂ ಭಾರತವೇ "ವಿಶ್ವಗುರು" ಅದರಲ್ಲಿ ಎರಡು ಮಾತಿಲ್ಲ. ನಮ್ಮಲ್ಲಿರುವ ಸಮೃದ್ಧವಾದ ಸಂಸ್ಕೃತಿ, ವೈವಿಧ್ಯತೆ, ಸಹಿಷ್ಣತೆ, ದೈವ ಭಕ್ತಿ, ಕಪಟ ರಹಿತವಾದ ರಾಜನೀತಿ ಮತ್ತು ಕಾರ್ಯನೀತಿ ಬೇರೆ ಯಾವ ದೇಶದಲ್ಲೂ ಇಲ್ಲ. ಇದಕ್ಕೆ ಸಹಸ್ರಾರು ವರ್ಷಗಳಿಂದ ನಮ್ಮ ಸನಾತನ ದೇಶದಲ್ಲಿ ಬಂದು ಹೋಗಿರುವ ಅಸಂಖ್ಯಾತ ಋಷಿಮುನಿಗಳು ತಮ್ಮ ಅಂತರ್ ದರ್ಶನದಲ್ಲಿ ಕಂಡುಕೊಂಡ ಸತ್ಯಗಳನ್ನು ಸಂಸ್ಕೃತಿ ಮತ್ತು ಪರಂಪರೆಯ ಮೂಲಕ ನಮ್ಮ ದೇಶದ ನರನಾಡಿಯಲ್ಲೂ ನಿರಂತರ ಹರಿಯುವಂತೆ ಮಾಡಿರುವುದೇ ಕಾರಣವಾಗಿದೆ. 


ನಿನ್ನೆಯೂ ಸಹ ಪಾಕಿಸ್ತಾನದ ಅಧ್ಯಕ್ಷ ಮತ್ತು ಸೇನಾ ಮುಖ್ಯಸ್ಥ ಕೊಲ್ಲಿಯಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸಲು ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿಕೆ ಕೊಟ್ಟರು. ತತ್ ಕ್ಷಣವೇ ಅಮೆರಿಕದ ಅಧ್ಯಕ್ಷ ಟ್ರಂಪ್ ಇವರ ಹೇಳಿಕೆಯನ್ನು ಮರುಪ್ರಸಾರ ಮಾಡಿದ. ಇಷ್ಟೇ ವಿಚಾರ ಸಾಕಾಯಿತು ನಮ್ಮ ವಿರೋಧ ಪಕ್ಷದ ನಾಯಕರಿಗೆ. ಭಾರತಕ್ಕೆ ಮಧ್ಯಸ್ಥಿಕೆ ವಹಿಸಿಕೊಳ್ಳುವ ಅವಕಾಶ ಸಿಗಲಿಲ್ಲ ಎಂದು ಮೋದಿಯ ಬಗ್ಗೆ ಹಿಗ್ಗಾಮುಗ್ಗ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಅಮೆರಿಕ ಮತ್ತು ಪಾಕಿಸ್ತಾನದ ಚರಿತ್ರೆ ಗೊತ್ತಿರುವವರಿಗೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿಕೊಳ್ಳುವ ಮತ್ತು ಅಮೆರಿಕ ಅದನ್ನು ಅನುಮೋದಿಸುವ ಹಿಂದಿನ ಹುನ್ನಾರ ಅರ್ಥವಾಗುತ್ತದೆ. ಆದರೆ ತಮ್ಮ ಸ್ವಂತ ರಾಜಕೀಯ ಹಿತಾಸಕ್ತಿಗಾಗಿ ಯಾವ ಮಟ್ಟಕ್ಕೂ ಇಳಿಯಲು ಸಿದ್ಧವಿರುವ ವಿರೋಧ ಪಕ್ಷದ ನಾಯಕರ ಇಂತಹ ಕ್ಷುಲ್ಲಕ ನಡೆಯ ಬಗ್ಗೆ ದೇಶವಾಸಿಗಳಿಗೆ ಅರಿವಿದೆ. 


ಅಂದು ಇಂದು ಎಂದೆಂದೂ ವಿಶ್ವಗುರು ಆಗಿರುವ ನನ್ನ ಭಾರತದ ಹಿರಿಮೆಯನ್ನು, ಪ್ರತಿಷ್ಠೆಯನ್ನು ವಿಶ್ವಮಟ್ಟದಲ್ಲಿ ಮತ್ತಷ್ಟು ಎತ್ತಲು ಮೋದಿಯವರು ಪ್ರಧಾನಿ ಆದಾಗಿನಿಂದಲೂ ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಭಾರತದ ಬಗ್ಗೆ ಇದ್ದ ನಕಾರಾತ್ಮಕ ಅಭಿಪ್ರಾಯಗಳನ್ನು ತೊಡೆದು ಹಾಕಲು ಸಾಕಷ್ಟು ಶ್ರಮಿಸಿದ್ದಾರೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಜೊತೆಗೆ ಶತಶತಮಾನಗಳಿಂದ ಇದ್ದ ಜ್ವಲಂತ ಸಮಸ್ಯೆಗಳಿಗೆ ಇತಿಶ್ರೀ ಹಾಡಿದ್ದಾರೆ. ಅವರು ಕೇವಲ ಒಬ್ಬರು ಪ್ರಧಾನಿ ಅಲ್ಲ ಬದಲಾಗಿ ರಾಜ ಋಷಿ, ನಿಜವಾದ ಮಹಾತ್ಮ. ಭಾರತೀಯರ ಪುಣ್ಯ ವಿಶೇಷದಿಂದ ಇಂತಹ ಮಹಾನ್ ನಾಯಕ ನಮ್ಮ ಕಾಲಘಟ್ಟದಲ್ಲಿ ದೊರಕಿದ್ದಾರೆ. ವಿರೋಧಿಗಳ ಅಸಂಬದ್ಧ ಮಾತುಗಳಿಗೆ ಕಿವಿಕೊಡದೆ ಸತ್ಯವಾದುದನ್ನು ಮಾತ್ರ ಸ್ವೀಕರಿಸುವ ಬುದ್ಧಿಯನ್ನು ಬಹು ಸಂಖ್ಯಾತ ದೇಶವಾಸಿಗಳು ಹೊಂದಿದ್ದಾರೆ ಎಂಬ ಭರವಸೆಯನ್ನು ನಾನು ಹೊಂದಿದ್ದೇನೆ.


- ವಿಜಯರಂಗ ಕೋಟೆತೋಟ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top