ಸಂಗೀತವೆಂದರೆ ಭಾರತೀಯ ಸಂಸ್ಕೃತಿಯ ಸಂಪತ್ತು - ವಿದ್ವಾನ್ ಕಾಂಚನ.ಎ ಈಶ್ವರ ಭಟ್

Upayuktha
0

 ವಿವೇಕಾನಂದ ಕಾಲೇಜಿನಲ್ಲಿ ಹಂಸಧ್ವನಿ ಕಾರ್ಯಕ್ರಮ



ಪುತ್ತೂರು: ಸಂಗೀತವೆಂದರೆ ಒಂದು ಕುಟುಂಬವಿದ್ದಂತೆ.  ಸಂಗೀತ ಹೇಳುವುದು ಹಾಗೂ ಕೇಳುವುದರಲ್ಲಿ ಭಾವನೆಗಳ ವಿನಿಮಯವಾಗುವುದು. ಲಲಿತ ಕಲೆಗಳಲ್ಲಿ ಅಮೋಘವಾದುದು ಹಾಗೂ ದೈವಿಕ ಕಲೆ ಎನಿಸಿಕೊಂಡದ್ದು ಶಾಸ್ತ್ರೀಯ ಸಂಗೀತ. ಇಂತಹಾ ಶಾಸ್ತ್ರಬದ್ಧವಾದ ಯಾವುದೇ ಕಲೆಗಳನ್ನು ಕಲಿತುಕೊಳ್ಳಲು ಗುರು ಅವಶ್ಯ. ಗುರು ಎಂದರೆ ಬದುಕಿಗೆ ದಾರಿ ತೋರುವವನು ಎಂದರ್ಥ. ನಮ್ಮ ಸ್ವಂತಿಕೆ ಎಂಬುದಾಗಿ ಕಲೆಗೆ ಸೂಕ್ತವಲ್ಲದ ಸಂಗತಿಗಳನ್ನು ಮಾಡದೇ ಗುರು ತೋರಿದ ಹಾದಿಯಲ್ಲಿ ಸಾಗಿ ಸಾಧನೆ ಮಾಡಿದಾಗ ಶಿಷ್ಯ ನಿಪುಣನಾಗುತ್ತಾನೆ ಎಂದು ಪುತ್ತೂರಿನ ಸುನಾದ ಸಂಗೀತ ಕಲಾಶಾಲೆಯ ನಿರ್ದೇಶಕ ವಿದ್ವಾನ್ ಕಾಂಚನ ಎ ಈಶ್ವರ ಭಟ್ ನುಡಿದರು.


ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಬೈಂದೂರು ಪ್ರಭಾಕರರಾವ್ ಸಭಾಂಗಣದಲ್ಲಿ ಸುನಾದ ಸಂಗೀತ ಕಲಾ ಶಾಲೆ ಪುತ್ತೂರು, ವಿವೇಕಾನಂದ ಸಂಶೋಧನಾಕೇಂದ್ರ , ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನಕೇಂದ್ರದ ಸಹಯೋಗದಲ್ಲಿ ನಡೆದ 'ಹಂಸಧ್ವನಿ' ಸುನಾದ ವಿವೇಕ ಸ್ಮೃತಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷಡಾ. ಶ್ರೀಪತಿ ಕಲ್ಲೂರಾಯ ಹಾಗೂಸಂಚಾಲಕ ಮುರಳಿ ಕೃಷ್ಣಕೆ.ಎನ್‍ಶುಭ ಹಾರೈಸಿದರು. ವೇದಿಕೆಯಲ್ಲಿಹಿರಿಯ ಪಿಟೀಲು ವಾದಕ ವಿದ್ವಾನ್ ವಿಠಲ ರಾಮಮೂರ್ತಿಚೆನ್ನೈ, ಸಂಗೀತ ವಿದ್ವಾನ್‍ಟಿ.ಎಸ್ ಪಟ್ಟಾಭಿರಾಮ ಪಂಡಿತ್ ಬೆಂಗಳೂರು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ ಭಟ್ ಸ್ವಾಗತಿಸಿದರು. ವಿವೇಕಾನಂದ ಸಂಶೋಧನಾಕೇಂದ್ರದ ನಿರ್ದೇಶಕಿ ಡಾ. ವಿಜಯಸರಸ್ವತಿಬಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾಎಸ್‍ ಧನ್ಯವಾದ ಸಮರ್ಪಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಗೀತಾಕುಮಾರಿ ಟಿ ನಿರ್ವಹಿಸಿದರು.


ಸಂಗೀತ ಶಿಸ್ತನ್ನು ಬೆಳೆಸುತ್ತದೆ-ವಿದ್ವಾನ್ ಟಿ.ಎಸ್ ಪಟ್ಟಾಭಿರಾಮ ಪಂಡಿತ್

ಈ ಸಂದರ್ಭದಲ್ಲಿ ಸಂಗೀತ ಮತ್ತು ಜೀವನ ಮೌಲ್ಯ ಎಂಬುದರ ಕುರಿತಾಗಿ ಮಾತನಾಡಿದ ವಿದ್ವಾನ್‍ ಟಿ.ಎಸ್ ಪಟ್ಟಾಭಿರಾಮ ಪಂಡಿತ್, 'ಓಂಕಾರ ಎಂಬುದು ಒಂದು ನಾದವಾಗಿ ಎಲ್ಲವೂ ಅದರೊಳಗೆ ಅಡಕವಾಗಿವೆ. ನಾವು ನಮ್ಮೊಳಗಿನ ರಾಕ್ಷತಸ್ವವನ್ನುತೊಡೆದುಹಾಕಬೇಕು ಅಲ್ಲದೇ ನಮ್ಮೊಳಗೆ ಒಂದು ಅದ್ಭುತ ವ್ಯಕ್ತಿತ್ವವನ್ನು ರೂಪಿಸಲು ಸಂಗೀತ ಕಾರಣವಾಗುತ್ತದೆ. ನಮ್ಮನ್ನು ಪರಸ್ಪರ  ಒಗ್ಗೂಡಿಸಿ ಸಜ್ಜನಿಕೆಯನ್ನುರೂಪಿಸುತ್ತದೆ. ನಮ್ಮಸಂಪೂರ್ಣ ಮನಸನ್ನೇ ಶುದ್ಧಗೊಳಿಸುವ ತಾಕತ್ತು ಸಂಗೀತಕ್ಕಿದೆ. ಸಂಗೀತವನ್ನು ನಿತ್ಯಅಭ್ಯಾಸ ಮಾಡಿಕೊಳ್ಳಲೇಬೇಕು. ಗುರು ಎಂದರೆ ಶಕ್ತಿ. ಗುರು-ಶಿಷ್ಯ ಸಂಬಂಧದಲ್ಲಿನ ಚುರುಕುತನವನ್ನು ಅರಿತುಕೊಳ್ಳಲು ಲಲಿತ ಕಲೆಗಳು ಸಹಾಯಕ’ಎಂದು ನುಡಿದರು. 


ತದನಂತರದಲ್ಲಿ ವಿದ್ವಾನ್ ವಿಠ್ಠಲ ರಾಮಮೂರ್ತಿ ಇವರು ‘ಸಂಗೀತ ಮತ್ತು ಭಾವ’ ಎನ್ನುವ ವಿಚಾರವನ್ನು ತಮ್ಮ ಹಾಡುಗಾರಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರಸ್ತುತಪಡಿಸಿದರು. ನಂತರ ವಿದ್ವಾನ್ ಬಾಲಕರಷ್ಣ ಹೊಸಮನೆ ಹಾಗೂ ಡಾ.ನಿಶಿತಾ ಪುತ್ತೂರು ಇವರ ಪರಿಕಲ್ಪನೆಯಲ್ಲಿ ಭಾವರಾಗ ತಾಳ ನಾಟ್ಯವನ್ನು ಒಳಗೊಂಡಿರುವ ಪ್ರದರ್ಶನಂ ಎನ್ನುವ ಕಾರ್ಯಕ್ರಮ ನಡೆಯಿತು.


ಗೌರವ ಸಮರ್ಪಣೆ

ಈ ಸಂದರ್ಭದಲ್ಲಿ ವಿದ್ವಾನ್ ವಿಠ್ಠಲ ರಾಮಮೂರ್ತಿ,ವಿದ್ವಾನ್‍ಟಿ.ಎಸ್ ಪಟ್ಟಾಭಿರಾಮ ಪಂಡಿತ್ ಹಾಗೂ ಪುತ್ತೂರಿನ ಸುನಾದ ಸಂಗೀತಕಲಾ ಶಾಲೆಯ ನಿರ್ದೇಶಕ ವಿದ್ವಾನ್ ಕಾಂಚನ .ಎ ಈಶ್ವರ ಭಟ್ ಮತ್ತು ವಿದ್ವಾನ್ ಬಾಲಕೃಷ್ಣ ಹೊಸಮನೆ ಇವರಿಗೆಗೌರವ ಸಮರ್ಪಣೆ ನಡೆಯಿತು. ಮಧ್ಯಾಹ್ನದ ನಂತರ ಕರ್ನಾಟಕ ಶಾಸ್ತ್ರೀ ಸಂಗೀತಕಾರ್ಯಕ್ರಮಜರುಗಿದ್ದು ಹಾಡುಗಾರಿಕೆಯಲ್ಲಿ ವಿದ್ವಾನ್‍ಟಿ.ಎಸ್ ಪಟ್ಟಾಭಿರಾಮ ಪಂಡಿತ್, ಪಿಟೀಲಿನಲ್ಲಿ ವಿದ್ವಾನ್ ವಿಠ್ಠಲ ರಾಮಮೂರ್ತಿ, ಮೃದಂಗದಲ್ಲಿ ವಿದ್ವಾನ್ ಕಾಂಚನ .ಎ ಈಶ್ವರ ಭಟ್, ಘಟಂನಲ್ಲಿ ವಿದ್ವಾನ್ ಶರತ್ ಕೌಶಿಕ್ ಮೈಸೂರುಹಾಗೂ ಮೋರ್ಸಿಂಗ್‍ನಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ ಸಹಕರಿಸಿದರು.


ಕಾರ್ಯಕ್ರಮವನ್ನು ಕಾಲೇಜಿನ ವಿಶೇಷಾಧಿಕಾರಿ ಡಾ.ಮನಮೋಹನ ಸಂಯೋಜಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top