ಸುರತ್ಕಲ್: ಮನುಷ್ಯನ ಜೀವನಕ್ಕೆ ಉಪಯುಕ್ತ ಅಂಶಗಳಾದ ನೀರು ಮತ್ತು ಬೆಂಕಿಯು ಅಪಾಯಕಾರಿ ವಸ್ತುಗಳಲ್ಲ. ಮನುಷ್ಯ ತನ್ನ ವಿವೇಚನೆ ಇಲ್ಲದೆ ಇವುಗಳನ್ನು ಬಳಸುವ ಮೂಲಕ ಅಪಾಯವನ್ನು ತಂದುಕೊಳ್ಳುತ್ತಾನೆ. ಪೆಟ್ರೋಲ್ ಪಂಪ್‍ನಲ್ಲಿ ಮೊಬೈಲ್ ಬಳಕೆ, ಗ್ಯಾಸ್ ಸಿಲಿಂಡರ್ ಬಳಕೆಯ ನಂತರವೂ ಚಾಲನೆಯಲ್ಲಿಡುವುದು ಮುಂತಾದ ಸಣ್ಣ ತಪ್ಪುಗಳೂ ದೊಡ್ಡಅನಾಹುತವನ್ನುಂಟು ಮಾಡುತ್ತದೆ ಎಂದು ನಿವೃತ್ತಎನ್.ಎಂ.ಪಿ.ಎ. ಯ ನಿವೃತ್ತ ಫೈಯರ್ ಆಫೀಸರ್ ಧನುರಾಜ್ ನುಡಿದರು.
ಅವರು ರಾಷ್ಟ್ರೀಯ ಸುರಕ್ಷತಾ ದಿನದ ಅಂಗವಾಗಿ ಸುರತ್ಕಲ್‍ನ ಹಿಂದು ವಿದ್ಯಾದಾಯಿನೀ ಸಂಘ (ರಿ)ಯ ಆಡಳಿತಕ್ಕೊಳಪಟ್ಟ ಗೋವಿಂದದಾಸ ಕಾಲೇಜು, ಸುರತ್ಕಲ್‍ನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಸ್ವಯಂ ಸೇವಕರಿಗಾಗಿ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಅಂಜಲಿ ಸ್ವಾಗತಿಸಿ ದೀಕ್ಷಿತಾ ವಂದಿಸಿದರು. ಪ್ರಾಪ್ತಿ ಅತಿಥಿಗಳನ್ನು ಪರಿಚಯಿಸಿದರು.ಎನ್.ಎಸ್.ಎಸ್. ಕಾರ್ಯದರ್ಶಿ ಅನನ್ಯಕಾರ್ಯಕ್ರಮ ನಿರೂಪಿಸಿದರು.ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಅಕ್ಷತಾ ವಿ.ಮತ್ತು ಭಾಗ್ಯಲಕ್ಷ್ಮೀ, ಎನ್.ಎಸ್.ಎಸ್. ಕಾರ್ಯದರ್ಶಿಗಳಾದ ರಿತೇಶ್ ಮತ್ತು ಸುಪ್ರೀತ್, ಉಪನ್ಯಾಸಕಿಯರಾದಜ್ಯೋತಿಕಾಮತ್, ರಮಿತಾ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


