ಹೆಣ್ಣು – ಜೀವನದ ಸುಂದರ ಅಧ್ಯಾಯ

Upayuktha
0


ಹೆಣ್ಣು ತಾಯಿಯಾಗಿ ಮಡಿಲು ನೀಡುವಳು,

ಮನದಲ್ಲಿ ಹೂವಾಗಿ ಅರಳುವಳು.

ಮನೆಯ ದೀಪವನ್ನು ಬೆಳಗುವಳು,

ಮನೆಯವರ ಮನಗಳಲ್ಲಿ ಬೆಳಕು ತುಂಬುವಳು.


ಜೀವನದ ದಾರಿಯಲ್ಲಿ ದೀಪ ಹಚ್ಚುವಳು,

ತನ್ನ ಕನಸುಗಳನ್ನು ಮೌನದಲ್ಲಿ ಮರೆಮಾಚುವಳು.

ತಾಯಿಯಂತೆ ಮಮತೆಯನ್ನು ತೋರುವಳು,

ಸಹೋದರಿಯಾಗಿ ಪ್ರೀತಿಗೆ ನೆರಳಾಗುವಳು.


ಹೆಣ್ಣು ಕೇವಲ ಸೌಂದರ್ಯವಲ್ಲ,

ಮುನಿದರೆ ಮಾರಿಯಾಗುವಳು.

ಸ್ನೇಹದ ಹಾದಿಯಲ್ಲಿ ಕೈಹಿಡಿಯುವಳು,

ಕಣ್ಣೀರಿನ ಹಿಂದೆ ನಗು ಬೀರಿದವಳು.


ಕಷ್ಟ ಬಂದರೂ ಧೈರ್ಯದಿಂದ ನಿಲ್ಲುವಳು,

ಸವಾಲುಗಳ ಮುಂದೆ ಸೋಲದವಳು.

ಅವಳನ್ನು ಗೌರವಿಸೋಣ,

ಅವಳ ಕನಸುಗಳಿಗೆ ಬೆಂಬಲ ನೀಡೋಣ.


- ಸ್ವಾತಿ ಡಿ

ಪ್ರಥಮ ಬಿಎ, ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು, ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top