ಯಕ್ಷಮಂಜರಿ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ – ಷಷ್ಠಮ ದಿನ
ಕೊಂಚಾಡಿ: ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ಆಶ್ರಯದಲ್ಲಿ ಯಕ್ಷ ಸ್ನೇಹ ಕಲಾ ಪ್ರತಿಷ್ಠಾನ (ರಿ.), ಕೊಂಚಾಡಿ ಇವರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ “ಯಕ್ಷಮಂಜರಿ” ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮದ ಷಷ್ಠಮ ದಿನದ ಕಾರ್ಯಕ್ರಮವು ಭಾನುವಾರ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಡಿಯೂರು ಶ್ರೀ ವಿವಿದ್ಧೋದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಲ. ಸುರೇಶ್ ರೈ ಅವರು, ವ್ಯಕ್ತಿಯ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ಬರಬೇಕಾದರೆ ಅವನ ಭಾವನೆಗಳಲ್ಲಿ ಬದಲಾವಣೆ ಅಗತ್ಯ ಎಂದು ಹೇಳಿದರು. ಸಾಂಸ್ಕೃತಿಕ ಹಾಗೂ ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನೋಭಾವನೆಗಳು ಪರಿಷ್ಕೃತವಾಗುತ್ತವೆ. ಅದರ ಪರಿಣಾಮವಾಗಿ ಸಂಸ್ಕಾರಯುತ ಮತ್ತು ಮೌಲ್ಯಪೂರ್ಣ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕೊಂಚಾಡಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಶ್ರೀಮತಿ ಕಮಲಾಕ್ಷಿ ಬಾಬು ಅವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು.
ವೇದಿಕೆಯಲ್ಲಿ ಬಾರ್ಯ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರ ಭಾಸ್ಕರ ಬಾರ್ಯ, ಮಾಜಿ ಸಹಾಯಕ ಅರಣ್ಯಾಧಿಕಾರಿ ಶ್ರೀನಿವಾಸ ಕೊಟ್ಟಾರಿ, ನಿವೃತ್ತ ರೇಂಜರ್ ರಾಘವ ಪಾಠಾಳಿ, ವಿಜಯ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಆನಂದ ದೇವಾಡಿಗ, ಹಾಗೂ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಇದರ ಸಂಚಾಲಕಿ ಹರಿಣಾಕ್ಷಿ ಜೆ. ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷ ಸ್ನೇಹ ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ಮಧುಸೂದನ ಅಲೆವೂರಾಯ, ಅಧ್ಯಕ್ಷೆ ಗೀತಾಲಕ್ಷ್ಮೀಶ, ಪ್ರತಿಷ್ಠಾನದ ಪದಾಧಿಕಾರಿಗಳಾದ ಮೋಹಿನಿ ಗೋಪಾಲ, ಅವನೀಶ ಭಟ್, ಶಿವಪ್ರಸಾದ್ ಕೊಕ್ಕಡ, ಹರೀಶ ಪಾಟಾಳಿ, ಅರುಣ್ ಕುಮಾರ್, ಗಣೇಶ್ ಬಿ.ಜಿ., ಯೋಗೀಶ ದೇವಾಡಿಗ, ಸೀಮಾ ಅರುಣ್, ಪ್ರಜ್ಞಾ ವಸಂತ, ಅನುರಾಧ ಯೋಗೀಶ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆದ್ಯಾ, ಲಕ್ಷ್ಯಾ, ಕೃತಿ, ಹೃತ್ವಿ, ಲಕ್ಷಾ, ವೃಷಭೇಂದ್ರ ಸೇರಿದಂತೆ ನೂರಾರು ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಂತರ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ, ಬೊಳುವಾರು–ಪುತ್ತೂರು ಇದರ ಮಹಿಳಾ ಕಲಾವಿದರಿಂದ “ಶಮಂತಕ ಮಣಿ – ಜಾಂಬವತಿ ಕಲ್ಯಾಣ” ತಾಳಮದ್ದಳೆ ಪ್ರದರ್ಶನ ನಡೆಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

