ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ರವರು ಮಾತನಾಡುತ್ತಾ “ಜ್ಞಾನವೇ ನಿಜವಾದ ಸಂಪತ್ತು. ವಿದ್ಯಾರ್ಥಿಗಳು ವಿಸ್ತಾರವಾದ ದೃಷ್ಟಿಯಿಂದ ಜ್ಞಾನಸಂಪಾದನೆಯಲ್ಲಿ ತೊಡಗಿಕೊಳ್ಳಬೇಕು. ತನ್ಮೂಲಕ ಸ್ವತಂತ್ರವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಾಧಕರಾಗಿ” ಎಂದು ಶುಭ ಹಾರೈಸಿದರು.
ಶಾಲಾ ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್ ಅವರು ಹಿರಿಯ ವಿದ್ಯಾರ್ಥಿ ಸಂಘದ ಪರವಾಗಿ ಹತ್ತನೇ ತರಗತಿಯ ಕಿರಿಯ ವಿದ್ಯಾರ್ಥಿಗಳಿಗೆ ’ಕನಸು, ಪರಿಶ್ರಮ ಮತ್ತು ಜೀವನ ಮೌಲ್ಯಗಳನ್ನು ಬಿಡದೆ ಪಾಲಿಸಿ ಗೆಲುವು ಸಾಧಿಸುವುದು ಹೇಗೆ? ಎಂದು ತಿಳಿಸಿಕೊಟ್ಟರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭನಾಗರಾಜ್ ಮಾತನಾಡುತ್ತಾ “ನಿಮ್ಮ ಆಸೆ-ಆಕಾಂಕ್ಷೆಗಳನ್ನು ಜೀವನದಲ್ಲಿ ಗುರಿಯನ್ನಾಗಿಸಿ ಬದಲಾಯಿಸಿಕೊಂಡು ಸೂಕ್ತವಾದ ಮಾರ್ಗದಲ್ಲಿ ಸಾಗಿದರೆ ಯಶಸ್ಸು ಸುಲಭ ಎಂದು ನುಡಿದರು.
ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಅನುಭವಗಳನ್ನು ಹಂಚಿಕೊಂಡು ಕೃತಜ್ಞತೆಯನ್ನರ್ಪಿಸಿದರು. ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಆಸ್ಕರ್ ಆನಂದ್, ಉಪಮುಖ್ಯ ಶಿಕ್ಷಕಿ ಶ್ರೀಮತಿ ಲವಿನಾ ಹನ್ಸ್ ಸಂಯೋಜಕರಾದ ಶ್ರೀಮತಿ ಪ್ರತಿಮಾ, ಶ್ರೀಮತಿ ಗಾಯತ್ರಿ ಮತ್ತು ಶ್ರೀಮತಿ ಅಮೃತವಾಣಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ’ಇನ್ ಪಾರ್ಮೇಶನ್ ಟೆಕ್ನಾಲಜಿ’ ಕೋರ್ಸಿನ ಪ್ರಮಾಣ ಪತ್ರವನ್ನು ಮತ್ತು ನೆನಪಿನ ಉಡುಗೂರೆಯನ್ನು ವಿತರಿಸಲಾಯಿತು. ಕಲಾ ಶಿಕ್ಷಕ ಸದಾಶಿವ ಭಟ್ ರವರು ಈ ಬಾರಿಯ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳ ಹೆಸರನ್ನೊಳಗೊಂಡ ಕವನ ಮಂಡಿಸುತ್ತಾ ಜೀವನ ಮೌಲ್ಯಗಳ ಸಂದೇಶಗಳೊಂದಿಗೆ ಯಶಸ್ಸಿಗಾಗಿ ಶುಭಹಾರೈಸಿದರು. ಶ್ರೀಮತಿ ಅಮೃತವಾಣಿ ಶುಭಾಶಯಗಳೊಂದಿಗೆ ವಂದಿಸಿ ಸಹಶಿಕ್ಷಕರಾದ ಶ್ರೀಮತಿ ಬಕುಲ ಹಾಗೂ ಶ್ರೀಮತಿ ಡೈಸಾ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


