ಉಡುಪಿ: ಲೋಂಬಾಡ್೯ ಮೆಮೊರಿಯಲ್ ಮಿಷನ್ ಆಸ್ಪತ್ರೆಯ ಸ್ಕೂಲ್ ಆಫ್ ನರ್ಸಿಂಗ್, ಕಾಲೇಜ್ ಆಫ್ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಇಕೋ ಕ್ಲಬ್ಬ್ ನ್ನು ಪ್ರಾರಂಭಿಸಲಾಗಿದ್ದು ಇದರ ಪ್ರಮುಖ ವಿದ್ಯಾರ್ಥಿಗಳಿಗೆ ಒಂದು ದಿನದ ಇಕೋ ಕ್ಲಬ್ ಯಾಕೆ ಬೇಕು ಮತ್ತು ಸದಸ್ಯರ ಪಾತ್ರರ ಬಗ್ಗೆ ಒಂದು ದಿನದ ಕಾರ್ಯಾಗಾರ ಮಿಷನ್ ಆಸ್ಪತ್ರೆಯ ಮಿನಿ ಹಾಲ್‌ನಲ್ಲಿ ಜರಗಿತು.
ಈ ಕಾರ್ಯಕ್ರಮದ ತರಬೇತುದಾರರಾಗಿ ವ್ಯಕ್ತಿತ್ವ ವಿಕಸನ ತರಬೇತಿದಾರ ರಾಘವೇಂದ್ರ ಪ್ರಭು ಕರ್ವಾಲು, ಡಾ ನವೀನ್ ಚಂದ್ರ, ಡಾ ಕೇವಿನ್ ಪಾಂಡ್ಯನ್ ತರಬೇತಿ ನೀಡಿದರು.
ಉಪನ್ಯಾಸಕಿ ಲಾವಣ್ಯ ಕಾರ್ಯಕ್ರಮ ನಿರ್ವಹಿಸಿದರು. ಆಸ್ಪತ್ರೆಯ ಪಿ ಆರ್ ಓ ರೋಹಿ ರತ್ನಾಕರ್ ವಂದಿಸಿದರು. ಕಾರ್ಯಕ್ರಮದಲ್ಲಿ ಕಾವ್ಯಶ್ರೀ ಶೆಟ್ಟಿ, ಸಹನಾ, ಉಷಾ ಜಯಂಟ್ಸ್ ಗ್ರೂಪ್ ಬ್ರಹ್ಮಾವರದ ಅಣ್ಣಯ್ಯ ದಾಸ್, ಸುಂದರ್ ಮೂಡು ಕುಕ್ಕುಡೆ, ಮಿಲ್ಟನ್ ಒಲಿವರ್ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


