ಧನ್ವಂತರಿ ಪ್ರೀಮಿಯರ್ ಲೀಗ್ ಸೀಸನ್ 3 ಕ್ರಿಕೆಟ್ ಪಂದ್ಯಾವಳಿ

Upayuktha
0


ಉಡುಪಿ: ಧನ್ವಂತರಿ ಸ್ವಸಹಾಯ ಸಂಘ (ರಿ) ವತಿಯಿಂದ ವೈದ್ಯಕೀಯ ಪ್ರತಿನಿಧಿಗಳಿಗೋಸ್ಕರ ಮಾ.1 ರಂದು ಉಡುಪಿಯ ಬೀಡಿನ ಗುಡ್ಡೆಯಲ್ಲಿ 60 ಗಜಗಳ ಕ್ರಿಕೆಟ್ ಪಂದ್ಯಾಟ ಧನ್ವಂತರಿ ಪ್ರೀಮಿಯರ್ ಲೀಗ್ ಸೀಸನ್ 3 ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ವೈದ್ಯಕೀಯ ಪ್ರತಿನಿಧಿ, ಜಯಂಟ್ಸ್ ಗ್ರೂಪ್ ಫೆಡರೇಶನ್ ಬ್ರಹ್ಮಾವರದ ಮಾಜಿ ಅಧ್ಯಕ್ಷರಾದ ಮಧುಸೂಧನ ಹೇರೂರು, ಉಡುಪಿ ಆಯುಷ್ ಇಲಾಖೆಯ ಕಾರ್ಯದರ್ಶಿ ಡಾ. ಸತೀಶ್ ರಾವ್ ನಿಟ್ಟೂರು, ಹಾಗೂ  ಗ್ರಾಪಂ ಸದಸ್ಯ ಪ್ರಸಾದ ಶೆಟ್ಟಿ ನಡೆಸಿದರು. ವೈದ್ಯಕೀಯ ಪ್ರತಿನಿಧಿಗಳು ಕಂಪೆನಿಗಳ ಒತ್ತಡದಿಂದ ಅಪಘಾತ ಮತ್ತು ಆತ್ಮಹತ್ಯೆಗೆ ಬಲಿ ಆಗುತ್ತಿದ್ದಾರೆ. ಇಂತಹ ಕ್ರೀಡೆಗಳಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಮಧುಸೂದನ ಹೇರೂರು ತಿಳಿಸಿ ಶುಭ ಹಾರೈಸಿದರು.


ಸಮಾರೋಪ ಸಮಾರಂಭಕ್ಕೆ ಉಡುಪಿಯು ಪ್ರಸಾದ ನೇತ್ರಾಲಯದ ಡೈರಕ್ಟರ್ ಡಾ.ಕೃಷ್ಣ ಪ್ರಸಾದ್ ಕೆ ವಿಜೇತ ತಂಡಗಳಿಗೆ ಶುಭ ಹಾರೈಸಿದರು. ಉಡುಪಿ ರಸಗಂಗಾ ಹೋಟೆಲ್ ಮೂಲಕರಾದ ಗುರುಪ್ರಸಾದ್ ರಾವ್ ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ತ್ರತೀಯ ಸ್ಥಾನಿಯಾಗಿ ಹರೀಶ್ ಶೆಟ್ಟಿ ಮಾಲಕತ್ವದ ಬಿಗ್ ವಾರಿಯರ್ಸ್ ಹೊರ ಹೊಮ್ಮಿತು. ದ್ವಿತೀಯ ಸ್ಥಾನಿಯಾಗಿ ರಾಧಾಕೃಷ್ಣ ಕೆ.ಜಿ ಮಾಲಕತ್ವದ ವೃದ್ಧಿ ವಾರಿಯರ್ಸ ಹಾಗೂ ಚಾಂಪಿಯನ್ ಆಗಿ ನವೀನ್ ಚಂದನ್ ಮಾಲಕತ್ವದ ಬಾಂಟೆಕ್ಸ್ ಎಂಡಿಬಿ ನಗದು ಹಾಗೂ ಪ್ರಶಸ್ತಿಗೆ ಭಾಜನವಾಯಿತು. ಮಂಜುನಾಥ ಕಾರಂತ್ ಸ್ವಾಗತಿಸಿದರು. ಪ್ರಸನ್ನ ಕಾರಂತ್ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top