ತಂತ್ರಜ್ಞಾನ ಬಳಕೆದಾರರಷ್ಟೇ ಆಗದೇ ಸೃಷ್ಟಿಕರ್ತರಾಗಿ: ಪ್ರೊ. ಶಶಿರೇಖಾ

Upayuktha
0


ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಗಣಕ ವಿಜ್ಞಾನ ವಿಭಾಗ, ಐ.ಐ.ಸಿ. ಹಾಗೂ ಐ.ಕ್ಯೂ.ಎ.ಸಿ. ಇವರ ಜಂಟಿ ಆಶ್ರಯದಲ್ಲಿ ಎಐ ಇನ್ನೋವೇಷನ್ಸ್: ಟ್ರಾನ್ಸ್ ಫಾರ್ಮಿಂಗ್‍ ಐಡಿಯಾಸ್‍ ಇಂಟು ಇಂಟೆಲಿಜೆಂಟ್ ಸಲ್ಯೂಷನ್ಸ್ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಶಿವರಾಮ ಕಾರಂತ ಭವನದಲ್ಲಿ ನಡೆಯಿತು.


ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಪ್ರೊ. ಎಚ್. ಎಲ್. ಶಶಿರೇಖಾ, ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ವಿವಿಧ ತಂತ್ರಜ್ಞಾನ ಹಾಗೂ ದೈನಂದಿನ ಜೀವನದಲ್ಲಿ ಬಳಸಬಹುದಾದ ವಿವಿಧತಂತ್ರಾಂಶ ಹಾಗೂ ವಿದ್ಯುನ್ಮಾನ ಸಾಧನಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಕೇವಲ ತಂತ್ರಜ್ಞಾನದ ಬಳಕೆದಾರರು ಮಾತ್ರವಾಗಿರದೇ, ಅದನ್ನು ಸೃಷ್ಟಿ ಮಾಡುವವರಾಗಬೇಕು ಎಂದು ತಿಳಿಸಿದರು.


ಆ ಮೂಲಕ ತಂತ್ರಜ್ಞಾನ ಲೋಕಕ್ಕೆ ಕೊಡುಗೆ ನೀಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್., ವಿದ್ಯಾರ್ಥಿಗಳು ಜನೋಪಯೋಗಿ ತಂತ್ರಜ್ಞಾನಗಳನ್ನು ಸೃಷ್ಟಿಸಿ ಸಮಾಜಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಬೇಕು. ಕೇವಲ ಪಾಠ-ಪುಸ್ತಕಗಳ ಕಲಿಕೆಗೆ ಸೀಮಿತವಾಗದೆ, ನವೀನತೆ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಭವಿಷ್ಯದ ಅಭಿವೃದ್ಧಿಯಲ್ಲಿ ಯುವಜನರ ಸೃಜನಶೀಲತೆ ಮತ್ತು ತಂತ್ರಜ್ಞಾನದ ಜ್ಞಾನ ಅತ್ಯಂತ ಮುಖ್ಯವಾಗಿದೆ. ಅದನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ತಿಳಿಸಿದರು.


ಇದೇ ವೇಳೆ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವೀರಭದ್ರಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಐ.ಐ.ಸಿ. ಅಧ್ಯಕ್ಷೆ ಡಾ. ಭಾರತಿ ಪಿಲಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ನಿರ್ಮಲಾ, ಸಂಶೋಧನಾ ವಿದ್ಯಾರ್ಥಿಉಷಾ ಪಾರ್ವತಿ ಹಾಗೂ ಸಫ್ನಾಜ್ ಉಪಸ್ಥಿತರಿದ್ದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top