ಪುತ್ತೂರು ಮುಳಿಯದಲ್ಲಿ ಡೈಮಂಡ್ ಫೆಸ್ಟ್ ಗೆ ಅಧಿಕೃತ ಚಾಲನೆ

Upayuktha
0

50,000ಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಗೆ ಉಡುಗೊರೆ ಖಾತರಿ



ಪುತ್ತೂರು: ನಗರದ ಪ್ರಸಿದ್ಧ ಆಭರಣ ಸಂಸ್ಥೆಯಾದ ಮುಳಿಯ ಗೋಲ್ಡ್ & ಡೈಮಂಡ್ಸ್‌ ತನ್ನ ಗ್ರಾಹಕರಿಗಾಗಿ “ಡೈಮಂಡ್ ಫೆಸ್ಟ್” ವಿಶೇಷ ವಾಣಿಜ್ಯ ಉತ್ಸವವನ್ನು ಮಾರ್ಚ್ 27ರಿಂದ ಆರಂಭಗೊಂಡಿದೆ. ‘ವೈಡಸ್ಟ್ ರೇಂಜ್, ಎಂಡ್‌ಲೆಸ್ ವಾವ್ಸ್!’ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಉತ್ಸವವು ವಜ್ರದ ಆಭರಣ ಪ್ರಿಯರಿಗೆ ವಿಶಿಷ್ಟ ಅವಕಾಶ ಒದಗಿಸುತ್ತಿದೆ.


ಉತ್ಸವದ ಅಧಿಕೃತ ಉದ್ಘಾಟನೆ ಇಂದು (ಮಾ.30) ಸಂಜೆ 4:30ಕ್ಕೆ ಪುತ್ತೂರಿನ ಮುಳಿಯ ಗೋಲ್ಡ್ & ಡೈಮಂಡ್ಸ್ ನ ಮಳಿಗೆಯಲ್ಲಿ ನೆರವೇರಿತು. ನಗರದ ಪ್ರಾಥಮಿಕ ಅರೋಗ್ಯ ಕೇಂದ್ರದ ಮಕ್ಕಳ ತಜ್ಶ ವೈದ್ಯರಾದ ಡಾ. ಎಂ.ಎಸ್ ಶೆಣೈ ದಂಪತಿಗಳು ದೀಪ ಬೆಳಗಿ ಉತ್ಸವವನ್ನು ಉದ್ಘಾಟಿಸಿದರು.


ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಕೃಷ್ಣ ರೆಸಿಡೆನ್ಸಿ ಮಾಲೀಕರಾದ ಪ್ರಜ್ಞಾ ಕಾಮತ್ ಮತ್ತು ಪ್ರಜ್ವಲ್ ಕಾಮತ್ ಅವರು ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದರು.


ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೇಶವ ಪ್ರಸಾದ್ ಮುಳಿಯ ಅವರು, ಜನರ ಜೀವನ ಮಟ್ಟ ಎತ್ತರಕ್ಕೇರಿದಂತೆ ವಜ್ರದ ಆಭರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ; ಅದಕ್ಕೆ ಅನುಗುಣವಾಗಿ ಗ್ರಾಹಕರ ಮನಸ್ಸಿಗೊಪ್ಪುವ ವೈವಿಧ್ಯಮಯ ವಜ್ರದ ಆಭರಣಗಳನ್ನು ಈ ಡೈಮಂಡ್ ಫೆಸ್ಟ್ ನಲ್ಲಿ ಆಕರ್ಷಕ ಬೆಲೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕ ವಿಶ್ವಾಸ ಹಾಗೂ ಸಂತೃಪ್ತಿಯ ಉನ್ನತ ಗುರಿಯೊಂದಿಗೆ ಈ ಉತ್ಸವವನ್ನು ವರ್ಷದಲ್ಲಿ ಎರಡು ಬಾರಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.




ಈ ಡೈಮಂಡ್ ಫೆಸ್ಟ್‌ನ ಅಂಗವಾಗಿ ಗ್ರಾಹಕರು ₹50,000 ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಖರೀದಿ ಮಾಡಿದಲ್ಲಿ ಖಚಿತ ಉಡುಗೊರೆಯನ್ನು ಪಡೆಯಬಹುದಾಗಿದೆ. ಜೊತೆಗೆ, ಲಕ್ಕಿ ಡ್ರಾ ಮೂಲಕ ಬಂಪರ್ ಬಹುಮಾನವಾಗಿ ಇವಿ ಸ್ಕೂಟರ್ ಗೆಲ್ಲುವ ಅವಕಾಶವೂ ಇದೆ. ಈ ಆಫರ್ ಗ್ರಾಹಕರಲ್ಲಿ ಹೆಚ್ಚುವರಿ ಆಕರ್ಷಣೆಯನ್ನುಂಟುಮಾಡುತ್ತಿದೆ.


ವಜ್ರದ ಆಭರಣಗಳ ಮೇಲೆ 95% ಎಕ್ಸ್‌ಚೇಂಜ್ ಮತ್ತು 90% ಬೈಬ್ಯಾಕ್ ಸೌಲಭ್ಯವನ್ನು ಸಂಸ್ಥೆ ನೀಡುತ್ತಿದ್ದು, ಹಳೆಯ ಆಭರಣಗಳನ್ನು ಹೊಸದಾಗಿ ಪರಿವರ್ತಿಸಿಕೊಳ್ಳಲು ಇದು ಉತ್ತಮ ಅವಕಾಶ ಎಂದು ಸಂಸ್ಥೆ ತಿಳಿಸಿದೆ. ಮದುವೆ ಹಾಗೂ ಹಬ್ಬಗಳ ಸೀಸನ್‌ಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ವಿನ್ಯಾಸಗಳ ಹಾರಗಳು, ಕಿವಿಯೋಲೆಗಳು, ಉಂಗುರಗಳು ಸೇರಿದಂತೆ ಹಲವಾರು ನವೀನ ಸಂಗ್ರಹವನ್ನು ಪ್ರದರ್ಶಿಸಲಾಗಿದೆ.


ಅಮೂಲ್ಯ ಡೈಮಂಡ್ಸ್‌ ಮತ್ತು ಕಿಸ್ನ ಡೈಮಂಡ್ & ಗೋಲ್ಡ್ ಜ್ಯುವೆಲ್ಲರಿ ಬ್ರ್ಯಾಂಡ್‌ಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಉತ್ಸವವು ಗುಣಮಟ್ಟ ಮತ್ತು ವೈವಿಧ್ಯತೆಯಲ್ಲಿಯೂ ಗಮನ ಸೆಳೆಯುತ್ತಿದೆ.


ಗ್ರಾಹಕರು ತಮ್ಮ ಸಮೀಪದ ಶೋರೂಮ್‌ಗಳಿಗೆ ಭೇಟಿ ನೀಡಿ ಈ ವಿಶೇಷ ಆಫರ್‌ಗಳನ್ನು ಬಳಸಿಕೊಳ್ಳಬಹುದು. ಪುತ್ತೂರು, ಬೆಳ್ತಂಗಡಿ, ಮಡಿಕೇರಿ ಹಾಗೂ ಗೋಣಿಕೊಪ್ಪ ಸೇರಿದಂತೆ ವಿವಿಧ ಶಾಖೆಗಳಲ್ಲಿ ಈ ಡೈಮಂಡ್ ಫೆಸ್ಟ್ ನಡೆಯುತ್ತಿದೆ.


إرسال تعليق

0 تعليقات
إرسال تعليق (0)
To Top