ಪುಸ್ತಕ ಪರಿಚಯ: Frank and Free Thoughts

Upayuktha
0



ಕೃತಿಯ ಲೇಖಕರು: ಡಾ. ಹಯವದನ ಮೂಡುಸಗ್ರಿ


ಡಾ. ಹಯವದನ ಮೂಡುಸಗ್ರಿ ಅವರು ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಹಾಗೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ಅವರು ಖ್ಯಾತಿ ಗಳಿಸಿದ್ದಾರೆ. Concept of Bliss: An Exploration in European and Sanskrit Literature ಎಂಬ ವಿಷಯದ ಕುರಿತು ವಿಶೇಷ ಅಧ್ಯಯನ ನಡೆಸಿರುವ ಅವರು, ವಿವಿಧ ಚಿಂತನಾ ಲೇಖನಗಳು, ಕವನಗಳು ಹಾಗೂ ಕಥಾ ಸಂಕಲನಗಳನ್ನು ರಚಿಸಿರುವ ಪ್ರತಿಭಾವಂತ ಸಾಹಿತ್ಯಕರ್ತರು.


ಈಗ ಅವರು ಆಂಗ್ಲ ಭಾಷೆಯಲ್ಲಿ ರಚಿಸಿರುವ ನೂತನ ಕವನ ಸಂಕಲನ “Frank and Free Thoughts” ಸಾಹಿತ್ಯಾಸಕ್ತರ ಗಮನ ಸೆಳೆಯುವ ಮಹತ್ವದ ಕೃತಿ. ತಮ್ಮ ಸಾಮಾಜಿಕ ಚಿಂತನೆಗಳ ಅಭಿವ್ಯಕ್ತಿಗೆ ಕವಿ ಕವನ ಮಾದರಿಯನ್ನು ಆಯ್ದುಕೊಂಡಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಜನಪರ ಚಳುವಳಿಗಳು ಹಾಗೂ ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟಗಳು ಕವಿಯನ್ನು ಆಳವಾಗಿ ಸ್ಪರ್ಶಿಸಿರುವುದರಿಂದ ಈ ಕೃತಿ ಮೂಡಿ ಬಂದಿದೆ.


ಈ ಸಂಕಲನದಲ್ಲಿ ಒಟ್ಟು 78 ಕವನಗಳಿದ್ದು, ಪ್ರತಿಯೊಂದು ಕವನವೂ ವಿಷಯದ ದೃಷ್ಟಿಯಿಂದ ವೈವಿಧ್ಯಮಯವಾಗಿದೆ. ಪ್ರಕೃತಿ, ತಾಯಿ, ಸಮಾಜ, ಸಮಾಜದ ದೃಷ್ಟಿಕೋನಗಳು, ವೈಯಕ್ತಿಕ ಬದುಕು, ಮಹಿಳೆಯರ ಕುರಿತ ಸಾಮಾಜಿಕ ಮನೋಭಾವಗಳು, ಸಾಮಾಜಿಕ ಆಡಂಬರಗಳು—ಹೀಗೆ ಅನೇಕ ಆಯಾಮಗಳ ಚಿಂತನೆಗಳು ಇಲ್ಲಿ ನೇರವಾಗಿ ಮತ್ತು ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿವೆ.


ಸಂಬಂಧಗಳನ್ನು ಕನ್ನಡಿಗೆ ಹೋಲಿಸುವ ಕವಿ, ಅದನ್ನು ಜಾಗ್ರತೆಯಿಂದ ಬಳಿಸಿದರೆ ನಮ್ಮ ಮುಖಗಳು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ; ಆದರೆ ಅಜಾಗ್ರತೆಯಿಂದ ಜಾರಿಬಿದ್ದರೆ ಅಸಂಖ್ಯಾತ ತುಂಡುಗಳಾಗಿ ಚೂರಾಗುತ್ತವೆ ಎಂಬ ಅರ್ಥಪೂರ್ಣ ಸಂದೇಶವನ್ನು ನೀಡಿದ್ದಾರೆ. ಮಾನವೀಯ ಸಂಬಂಧಗಳು ಭಾಷೆ, ಜಾತಿ, ಶಿಕ್ಷಣ ಇತ್ಯಾದಿಗಳನ್ನು ಮೀರಿ ಹೃದಯದ ಭಾವನೆಗಳ ಆಧಾರದ ಮೇಲೆ ನಿರ್ಮಾಣವಾಗುತ್ತವೆ ಎಂಬುದನ್ನು ಕವಿ ಸೂಕ್ಷ್ಮವಾಗಿ ಗುರುತಿಸುತ್ತಾರೆ.


ತಾಯಿಯ ಕುರಿತು ಬರೆದ ಕವಿತೆ ದಕ್ಷಿಣ ಕನ್ನಡದ ಸಂಪ್ರದಾಯಬದ್ಧ ಸಮಾಜದ ತಾಯಿಯಂದಿರ ಪ್ರತೀಕವಾಗಿ ಮೂಡಿಬಂದಿದೆ.


Was she an exploited woman?

Wasn't she a victim of the system?

ಎಂಬ ಪ್ರಶ್ನೆಗಳ ಮೂಲಕ ಸಮಾಜದ ಮನಸ್ಥಿತಿಯನ್ನು ಚಿಂತನೆಗೆ ಒಡ್ಡುತ್ತಾರೆ.


21ನೇ ಶತಮಾನದ ಅಪಾಯಕಾರಿ ಮುಕ್ತತೆ ಹಾಗೂ ಸಾಮಾಜಿಕ ಮಾಧ್ಯಮಗಳು ಯುವಜನರನ್ನು ಹಾದಿ ತಪ್ಪಿಸುವ ಸಂದರ್ಭಗಳನ್ನು ಕವಿ ಸ್ಪಷ್ಟವಾಗಿ ಸೂಚಿಸುತ್ತಾರೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಸಂಕಷ್ಟಗಳನ್ನು ಚಿತ್ರಿಸುತ್ತಾ ಸಮಸಮಾಜದ ಕನಸನ್ನೂ ಕಾಣುತ್ತಾರೆ.


I am what I am

Just accept me as I am!

ಎಂಬ ಸಾಲುಗಳು ವ್ಯಕ್ತಿತ್ವದ ಸ್ವಾತಂತ್ರ್ಯದ ಘೋಷಣೆಯಂತೆ ಕಾಣಿಸುತ್ತವೆ.


ಸ್ವಾತಂತ್ರ್ಯದ ಕುರಿತು ಕವಿ ಹೀಗೆ ಹೇಳುತ್ತಾರೆ:


Freedom from all prejudices!

Freedom to be happy,

Here and now!!!


ಇಂಗ್ಲಿಷ್ ಭಾಷೆಯಲ್ಲಿ ಕನ್ನಡದ ಕವಿ ತಮ್ಮ ಸಾಮಾಜಿಕ ಬದ್ಧತೆಯನ್ನು ಕಾವ್ಯ ರೂಪದಲ್ಲಿ ವ್ಯಕ್ತಪಡಿಸಿರುವುದು ಅಪರೂಪದ ಸಂಗತಿ. ಸಾಮಾಜಿಕ ಚಿಂತನೆಗಳಿಗೆ ಪದ್ಯ ರೂಪ ನೀಡಿರುವ ಡಾ. ಹಯವದನ ಮೂಡುಸಗ್ರಿ ಅವರಿಂದ ಇನ್ನಷ್ಟು ಮೌಲಿಕ ಕೃತಿಗಳು ಹೊರಬರಲಿ ಎಂಬುದು ಸಾಹಿತ್ಯಾಸಕ್ತರ ಹಾರೈಕೆ. 

-  ಕೃಷ್ಣಮೂರ್ತಿ



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top