ಸುಸ್ಥಿರ ಭಾರತಕ್ಕಾಗಿ ರಾಸಾಯನಿಕ ನವೀನತೆಗಳು: ಸೇಂಟ್ ಅಲೋಶಿಯಸ್ ವಿವಿಯಲ್ಲಿ ರಾಷ್ಟ್ರೀಯ ಸಮ್ಮೇಳನ

Upayuktha
0


ಮಂಗಳೂರು: ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದ ಭೌತಶಾಸ್ತ್ರ ವಿಭಾಗ ಮತ್ತು ರಸಾಯನಶಾಸ್ತ್ರ ವಿಭಾಗದ ವತಿಯಿಂದ 2026 ಮಾರ್ಚ್ 16ರಂದು ಎರಿಕ್ ಮಥಿಯಾಸ್ ಹಾಲ್, ಮಫ್ಫೇ ಬ್ಲಾಕ್‌ನಲ್ಲಿ “ಸುಸ್ಥಿರ ಭಾರತಕ್ಕಾಗಿ ರಾಸಾಯನಿಕ ನವೀನತೆಗಳು” ವಿಷಯದ ಮೇಲೆ ಏಕದಿನ ರಾಷ್ಟ್ರೀಯ ಸಮ್ಮೇಳನ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮವು ವಿಭಾಗದ ಗಾಯನ ಬಳಗದಿಂದ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಸಿಬ್ಬಂದಿ ಸಂಯೋಜಕಿ ಜ್ಯೋತಿ ಸಿಮಾವ್ ವಾಝ್ ಅವರು ಆತಿಥೇಯರಿಗೂ, ಭಾಗವಹಿಸಿದವರಿಗೂ ಸ್ವಾಗತ ಕೋರಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಬೀರಯ್ಯ ಬೈರೆ ಅವರು ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್‌ನ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾಗಿದ್ದು, ಭಾಋತೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಹೆಚ್.ಡಿ. ಹಾಗೂ ಮಿನೆಸೋಟಾ ವಿಶ್ವವಿದ್ಯಾಲಯದಲ್ಲಿ ಪೋಸ್ಟ್-ಡಾಕ್ಟರಲ್ ಅಧ್ಯಯನ ನಡೆಸಿದ್ದಾರೆ. 88 ಸಂಶೋಧನಾ ಪ್ರಬಂಧಗಳು, 23 H-ಇಂಡೆಕ್ಸ್ ಮತ್ತು ಹಲವು ಪೇಟೆಂಟ್‌ಗಳನ್ನು ಹೊಂದಿರುವ ಅವರು 2026ರ CRSI ಕಂಚಿನ ಮತ್ತು ಸಿಲ್ವರ್ ಪದಕಗಳನ್ನು ಪಡೆದಿದ್ದಾರೆ. ಇವರಿಗೆ ಡಾ. ರೊನಾಲ್ಡ್ ನಜರೇತ್ ಅವರು ಗ್ರೀನ್ ಸ್ವಾಗತ ನೀಡಿದರು.


ಗೌರವ ಅತಿಥಿಯಾದ ಪೆಟ್ರೋಪಾತ್ ಫ್ಲೂಯಿಡ್ಸ್ ಲಿ. ನ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ನಾಯ್ಕ್, ಕೈಗಾರಿಕೆಯಲ್ಲಿ ರಸಾಯನಶಾಸ್ತ್ರದ ಬಳಕೆಯ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದರು. ಅವರನ್ನು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರೇಚಲ್ ನತಾಶಾ ಮೇರಿ ಸ್ವಾಗತಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಜಿಸ್ಟ್ರಾರ್ ಡಾ. ರೊನಾಲ್ಡ್ ನಜರೆತ್  ವಹಿಸಿದ್ದರು. ಇತರ ಗಣ್ಯರಾಗಿ ಡಾ. ಆಶಾ ಅಬ್ರಹಾಂ, ಡಾ. ಅರುಣಾ ಕಲ್ಕೂರ, ಡಾ. ವಿನೋಲಾ ಝಡ್ ರೋಡ್ರಿಗಸ್, ಡಾ. ರಾಶೆಲ್ ನತಾಶಾ ಮೇರಿ, ಜ್ಯೋತಿ ಸಿಮಾವ್ ವಾಝ್ ಮತ್ತು ಡಾ. ರೋಶನ್ ಡಿಸೋಜಾ  ಉಪಸ್ಥಿತರಿದ್ದರು.


ದೀಪಪ್ರಜ್ವಲನದೊಂದಿಗೆ ಸಮ್ಮೇಳನ ಉದ್ಘಾಟನೆಗೊಂಡು, ನಂತರ ಮುಖ್ಯ ಅತಿಥಿಗಳು “ಬುಕ್ ಆಫ್ ಅಬ್ಸ್ಟ್ರಾಕ್ಟ್ಸ್” ಬಿಡುಗಡೆ ಮಾಡಿದರು.


ಭಾಸ್ಕರ್ ನಾಯಕ್ ಅವರು ತಮ್ಮ ಭಾಷಣದಲ್ಲಿ ಸಸ್ಟೇನಬಲ್ ಕೈಗಾರಿಕಾ ವಿಧಾನಗಳ ಅಗತ್ಯತೆ ಹಾಗೂ ಕಾರ್ಬನ್ ಶೂನ್ಯ ಗುರಿ ಸಾಧನೆಗಾಗಿ ಸಮಾಜದ ಮನೋಭಾವ ಬದಲಾವಣೆ ಅಗತ್ಯವಿದೆ ಎಂದು ಹೇಳಿದರು. ಅಧ್ಯಕ್ಷೀಯ ಭಾಷಣದಲ್ಲಿ ಡಾ. ರೊನಾಲ್ಡ್ ನಜರೇತ್ ಅವರು ರಸಾಯನಶಾಸ್ತ್ರವನ್ನು “ಕೇಂದ್ರ ವಿಜ್ಞಾನ” ಎಂದು ಹೇಳಿ, ಜಾಗತಿಕ ಸವಾಲುಗಳನ್ನು ಎದುರಿಸಲು ಸಂಶೋಧನಾ ಸಂಸ್ಕೃತಿಯ ಮಹತ್ವವನ್ನು ಒತ್ತಿಹೇಳಿದರು.


ಮುಖ್ಯ ಭಾಷಣದಲ್ಲಿ ಡಾ. ಬೀರಯ್ಯ ಬೈರೆ ಅವರು ಗ್ರೀನ್ ಕೆಮಿಸ್ಟ್ರಿಯ 12 ತತ್ವಗಳಾದ ತ್ಯಾಜ್ಯ ತಡೆ, ಅಟಮ್ ಎಕಾನಮಿ, ಸುರಕ್ಷಿತ ಸಂಶ್ಲೇಷಣೆ, ನವೀಕರಿಸಬಹುದಾದ ಸಂಪನ್ಮೂಲಗಳ ಬಳಕೆ, ಕ್ಯಾಟಲಿಸಿಸ್ ಮತ್ತು ಶಕ್ತಿ ದಕ್ಷ ವಿಧಾನಗಳ ಬಗ್ಗೆ ವಿವರಿಸಿದರು.


ಪ್ರಥಮ ತಾಂತ್ರಿಕ ಅಧಿವೇಶನವನ್ನು ಲೊಯೊಲಾ ಕಾಲೇಜು ಚೆನ್ನೈನ ಸಹ ಪ್ರಾಧ್ಯಾಪಕಿ ಡಾ. ಜೆ. ಜುಡಿತ್ ವಿಜಯ ನಡೆಸಿದರು. ಅವರು ಬಯೋಮಾಸ್ ಆಧಾರಿತ ಕಾರ್ಬನ್ ನ್ಯಾನೋಮೆಟೀರಿಯಲ್ಸ್ ಕುರಿತು ಮಾತನಾಡಿ, ಗ್ರಾಫೀನ್ ಆಧಾರಿತ ಪದಾರ್ಥಗಳ ವೈದ್ಯಕೀಯ ಹಾಗೂ ಸೆನ್ಸಿಂಗ್ ಕ್ಷೇತ್ರದ ಬಳಕೆಯನ್ನು ವಿವರಿಸಿದರು.


ದ್ವಿತೀಯ ತಾಂತ್ರಿಕ ಅಧಿವೇಶನವನ್ನು ಯೆನೆಪೋಯಾ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ಸುಧಾಕರ ಪ್ರಸಾದ್ ನಡೆಸಿದರು. ಅವರು ಲೆಪ್ಟೋಸ್ಪಿರೋಸಿಸ್ ಮೊದಲಾದ ರೋಗಗಳ ಮುಂಚಿತ ಪತ್ತೆಗೆ ಪೇಪರ್ ಆಧಾರಿತ ಮತ್ತು ಥರ್ಮಲ್ ಸೆನ್ಸರ್‌ಗಳ ಬಗ್ಗೆ ವಿವರಿಸಿದರು. ಜೊತೆಗೆ ಹೈಡ್ರೋಜನ್ ಉತ್ಪಾದನೆಗೆ ಸಂಬಂಧಿಸಿದ ಇಲೆಕ್ಟ್ರೋಕೆಮಿಕಲ್ ವಾಟರ್ ಸ್ಪ್ಲಿಟ್ಟಿಂಗ್ ಕುರಿತು ತಿಳಿಸಿದರು.


ಸುಮಾರು 30 ತಂಡಗಳು ಪೋಸ್ಟರ್ ಪ್ರಸ್ತುತಿಯಲ್ಲಿ ಭಾಗವಹಿಸಿವೆ. ಅವುಗಳನ್ನು ಡಾ. ಸುಧಾಕರ ಪ್ರಸಾದ್ ಮತ್ತು ಡಾ. ರಿಚರ್ಡ್ ಗೊನ್ಸಾಲ್ವೆಸ್ ಮೌಲ್ಯಮಾಪನ ಮಾಡಿದರು.


ಮಧ್ಯಾಹ್ನ 3:30ಕ್ಕೆ ಸಾನಿಧ್ಯ ಹಾಲ್‌ನಲ್ಲಿ ಸಮಾರೋಪ ಸಮಾರಂಭ ನಡೆಯಿತು. ಸಮ್ಮೇಳನವು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸಸ್ಟೇನಬಲ್ ರಸಾಯನಶಾಸ್ತ್ರದ ಸಂಶೋಧನೆಗೆ ಉತ್ತೇಜನ ನೀಡುವ ವೇದಿಕೆಯಾಗಿತ್ತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top