ಮಂಗಳೂರಿನಲ್ಲಿ ಬಾಬಿ ಚೆಮ್ಮನೂರು ಇಂಟರ್‌ನ್ಯಾಶನಲ್ ಜ್ಯುವೆಲ್ಲರ್ಸ್ ಹೊಸ ಶೋರೂಮ್ ಉದ್ಘಾಟನೆ

Upayuktha
0


ಮಂಗಳೂರು: ನಗರದಲ್ಲಿ ಬಾಬಿ ಚೆಮ್ಮನೂರ್ ಇಂಟರ್ ನ್ಯಾಷನಲ್ ಜ್ಯುವೆಲ್ಲರ್ಸ್‌ ಸಂಸ್ಥೆಯ ನೂತನ ಶೋರೂಮ್ ಭಾನುವಾರ ಸಂಜೆ ವಿಜೃಂಭಣೆಯಿಂದ ಉದ್ಘಾಟನೆಗೊಂಡಿತು. ಹಂಪನಕಟ್ಟೆಯ ಕ್ಲಾಕ್ ಟವರ್ ಸಮೀಪ ಆರಂಭವಾದ ಈ ಶೋರೂಮ್ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮತ್ತು ಸಿನಿತಾರೆಯರು ಭಾಗವಹಿಸಿ, ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದರು.


ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಬೇಕಿದ್ದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದರೆ ಆನ್‌ಲೈನ್ ಮೂಲಕ ವೀಡಿಯೋ ಸಂದೇಶ ನೀಡಿದ ಅವರು, ಚೆಮ್ಮನೂರು ಜ್ಯುವೆಲ್ಲರ್ಸ್‌ನ ನೂತನ ಮಳಿಗೆಗೆ ಶುಭಾಶಯಗಳನ್ನು ತಿಳಿಸಿ, ಸಂಸ್ಥೆಯ ಮುಂದಿನ ಬೆಳವಣಿಗೆಗೆ ಹಾರೈಸಿದರು.


ಬಾಲಿವುಡ್ ನಟರಾದ ಸೈಫ್ ಆಲಿ ಖಾನ್ ಮತ್ತು ಇಮ್ರಾನ್ ಹಶ್ಮಿ ಸೇರಿದಂತೆ ಕನ್ನಡ ನಟ ಉಪೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೊತೆಗೆ, 812 ಕಿ.ಮೀ. ಓಟದ ಮೂಲಕ ವಿಶ್ವದಾಖಲೆ ನಿರ್ಮಿಸಿದ ಬಾಬಿ ಚೆಮ್ಮನೂರ್ ಅವರ ಉಪಸ್ಥಿತಿಯು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.


ಕಾರ್ಯಕ್ರಮದಲ್ಲಿ ವಜ್ರ ವಿಭಾಗವನ್ನು ಚಿನ್ನ ಮತ್ತು ವಜ್ರ ಆಭರಣಗಳ ಉದ್ಘಾಟನಾ ಮಾರಾಟವನ್ನು ವಿಧಾನಸಭಾ ಸದಸ್ಯ ಡಿ. ವೇದವ್ಯಾಸ ಕಾಮತ್ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅದೃಷ್ಟಶಾಲಿ ವಿಜೇತರಿಗೆ ಬಹುಮಾನ ವಿತರಿಸಿದರು.


ಶೋರೂಮ್‌ನಲ್ಲಿ HUID 916 ಚಿನ್ನದ ಆಭರಣಗಳು, ವಿಶ್ವದರ್ಜೆಯ ವಜ್ರಗಳು ಮತ್ತು ಬೆಳ್ಳಿ ಆಭರಣಗಳ ವಿಶಾಲ ಸಂಗ್ರಹವನ್ನು ಗ್ರಾಹಕರಿಗೆ ಪರಿಚಯಿಸಲಾಯಿತು. ಉದ್ಘಾಟನಾ ಪ್ರಯುಕ್ತ ಮೇಕಿಂಗ್ ಚಾರ್ಜ್‌ನಲ್ಲಿ 50% ವರೆಗೆ ರಿಯಾಯಿತಿ ಸೇರಿದಂತೆ ಹಲವು ವಿಶೇಷ ಆಫರ್‌ಗಳನ್ನು ಘೋಷಿಸಲಾಯಿತು. ಎರಡು ಲಕ್ಷ ರೂಪಾಯಿಗಿಂತ ಹೆಚ್ಚಿನ ಕತ್ತರಿಸದ ವಜ್ರ ಖರೀದಿಸಿದವರಿಗೆ ಚಿನ್ನದ ನಾಣ್ಯ ಉಚಿತವಾಗಿ ನೀಡಲಾಯಿತು.


ಇದೇ ಸಂದರ್ಭದಲ್ಲಿ, ಬೋಚೆ ಫ್ಯಾನ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಂಗಳೂರಿನ ಆಯ್ದ ಬಡ ರೋಗಿಗಳಿಗೆ ಆರ್ಥಿಕ ಸಹಾಯವನ್ನು ಬಾಬಿ ಚೆಮ್ಮನೂರ್ ವಿತರಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top