ಬೆಂಗಳೂರು: ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ವತಿಯಿಂದ, ಪೇಜಾವರ ಮಠದ ಹಿರಿಯ ಮತ್ತು ಕಿರಿಯ ಸ್ವಾಮಿಗಳ ಸಂದೇಶ ಹಾಗೂ ಆಶಯದೊಂದಿಗೆ ಮತ್ತು ಹೆಳವನಕಟ್ಟೆ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ರಂಗನಾಥ ಭಕ್ತ ವೃಂದ, ಬೆಂಗಳೂರು ಇವರ ಸಹಯೋಗದೊಂದಿಗೆ, ಭಾರತೀಯ ಸನಾತನ ಆಧ್ಯಾತ್ಮಿಕ ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು. ನಿತ್ಯ ಜೀವನದಲ್ಲಿ ಧರ್ಮ – ಸಂಸ್ಕಾರ ಉಳಿಸಿ, ಸಮಾಜ ಬೆಳೆಸೋಣ ಎಂಬ ವಿಭಿನ್ನ ಕಾರ್ಯಕ್ರಮ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ, ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ನ ಉಪಾಧ್ಯಕ್ಷರಾದ ಡಾ. ಶಾಂತಾ ರಘೋತ್ತಮ ಇವರು ಪ್ರಸ್ತಾವಿಕವಾಗಿ ನುಡಿದ ಆಶಯಗಳಲ್ಲಿ, “ಪೇಜಾವರ ಮಠದ ಹಿರಿಯ ಮಠಾಧೀಶರ ಆಶಯದಂತೆ, ಭಾರತೀಯ ಸನಾತನ ಆಧ್ಯಾತ್ಮಿಕ ಮಹಿಳಾ ದಿನಾಚರಣೆಯ, ಎರಡನೆಯ ಕಾರ್ಯಕ್ರಮದಲ್ಲಿ, ನಿತ್ಯ ಜೀವದಲ್ಲಿ, ಸಂಸ್ಕಾರ ಎಂಬ ಉದ್ದೇಶದಲ್ಲಿ ಬಾಲ್ಯದ ಸಂಸ್ಕಾರ ಈ ಮಾಲಿಕೆ. ಈ ಮಾಲಿಕೆಯ ಎರಡನೆಯ ಕಾರ್ಯಕ್ರಮವಿದು” ಎಂಬುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ, ವಿದ್ಯಾಪೀಠದ ಕನ್ಯಾ ಗುರುಕುಲದ ಕುಮಾರಿ ಅನ್ವಿಕಾ ಕುಲಕರ್ಣಿ ಮಾತನಾಡಿದರು. ಯೌವ್ವನದ ಕೌಟುಂಬಿಕ ಹಂತದಲ್ಲಿನ ಸಂಸ್ಕಾರದ ಬಗ್ಗೆ ಶ್ರೀಮತಿ ಧಾತ್ರಿ ಡಿಗ್ಗೀಕರ ಇವರು ಮಾತನಾಡಿದರು. ಈ ಹಂತದಲ್ಲಿ, ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ನ ಕಾರ್ಯದರ್ಶಿಗಳು ಹಾಗೂ ಆಪ್ತ ಸಲಹೆಗಾರರೂ ಆದ ಡಾ. ವಿದ್ಯಾ ಕಸ್ಬೆಯವರು, ಸಭಾ ಸದಸ್ಯರೊಂದಿಗೆ ವಿಶೇಷ ಪ್ರಶ್ನೋತ್ತರ ನಡೆಸಿ, ಸಂದೇಹಗಳಿಗೆ ಉತ್ತರಿಸಿದರು.
ಸಾರ್ಥಕ್ಯ ಜೀವನ ನಡೆಸಿ, ಭಗವಂತನ ಪಾದ ಸ್ಮರಣೆಯಲ್ಲಿ ಮಾಗಿದ, ಹಿರಿಯ ಸಂಸ್ಕಾರದ ಕುರಿತಾಗಿ, ಡಾ. ರಮಾಬಾಯಿ ತೊಗಲೇರಿ ಇವರು, ತಮ್ಮ ಸ್ವಂತ ಅನುಭವಗಳನ್ನು ವಿವರಿಸುವುದರೊಂದಿಗೆ, ತಾವೇ ರಚಿಸಿದ ಕೃತಿಯನ್ನು ಪರಮಾತ್ಮನಿಗೆ ಸಮರ್ಪಿಸಿ, ನರ್ತನ ಸೇವೆ ಗೈದರು. ಇದೇ ಸಮಯದಲ್ಲಿ ಡಾ. ರಮಾಬಾಯಿ ತೊಗಲೇರಿ ಇವರಿಗೆ, ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಡಾ.ವೃಂದಾ ಸಂಗಮ್ ಇವರು, ಪ್ರಶಸ್ತಿ ವಿಜೇತರನ್ನು ಸಭೆಗೆ ಪರಿಚಯಿಸಿದರು.
ಹಿರಿಯ ಚೇತನರಾದ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಇವರಿಗೆ ಮತ್ರೇಯಿ ಮಹಿಳಾ ಹರಿದಾಸ ಟ್ರಸ್ಟ್ ನ ಬ್ರೋಶರ್ ಹಾಗೂ ಬಿಡುಗಡೆಯಾದ ಪುಸ್ತಕಗಳನ್ನು ನೀಡಿ ಆಶೀರ್ವಾದ ಕೋರಲಾಯಿತು. ಕಾರ್ಯದರ್ಶಿಗಳಾದ ಡಾ. ಶೀಲಾದಾಸ್ ಇವರು ವಂದನಾರ್ಪಣೆ ಮಾಡಿದರು. ಉತ್ತಮವಾಗಿ ಕಾರ್ಯಕ್ರಮ ನಿರೂಪಿಸಿ, ಡಾ. ವಿದ್ಯಾಶ್ರೀ ಕುಲ್ಕರ್ಣಿ ಇವರು ಎಲ್ಲರ ಗಮನಸೆಳೆದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

